NEWS

ಪುನೀತ್‌ರಾಜ್‌ಕುಮಾರ್‌ರವರ ಹುಟ್ಟು ಹಬ್ಬದ ಅಂಗವಾಗಿ ರಕ್ತದಾನ ಶಿಬಿರ

ಪಾಲನೆ ನ್ಯೂಸ್

ಮದ್ದೂರು : ಕರ್ನಾಟಕ ರತ್ನ ಡಾ. ಪುನೀತ್‌ರಾಜ್‌ಕುಮಾರ್‌ರವರ ಹುಟ್ಟು ಹಬ್ಬದ ಅಂಗವಾಗಿ ಬೃಹತ್ ಸ್ವಯಂಪ್ರೇರಿತ ರಕ್ತದಾನ ಶಿಬಿರವನ್ನು ಆಯೋಜಿಸಿರುವುದಾಗಿ ಹೊಸಕೆರೆ ಗ್ರಾ.ಪಂ. ಮಾಜಿ ಅಧ್ಯಕ್ಷ ದಯಾನಂದ ತಿಳಿಸಿದರು. ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ವಿವಿಧ ಸಂಘಟನೆಗಳ ಪೂರ್ವಭಾವಿ ಸಭೆ ವೇಳೆ ಮಾತನಾಡಿದ ಅವರು ಮಾರ್ಚ್ ೨೯ರ ಭಾನುವಾರ ಬೆಳಿಗ್ಗೆ ೯ ರಿಂದ ಸಂಜೆ ೪ ಗಂಟೆಯವರೆಗೆ ಹೊಸಕೆರೆ ಸರಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ ಆವರಣದಲ್ಲಿ ರಕ್ತದಾನ ಶಿಬಿರವನ್ನು ಆಯೋಜಿಸಿರುವುದಾಗಿ ಹೇಳಿದರು.


ರಕ್ತನಿಧಿ ಕೇಂದ್ರ ವಿಮ್ಸ್ ಮಂಡ್ಯ, ಹೊಸಕೆರೆ ಗ್ರಾಮಾಭಿವೃದ್ಧಿ ಸಂಘ, ಅಪ್ಪು ಅಭಿಮಾನಿಗಳ ಬಳಗ, ರೋಟರಿ ಸಂಸ್ಥೆ, ಸಂಸ್ಕೃತಿ ಅಲಯನ್ಸ್ ಕ್ಲಬ್, ವಿನಾಯಕ
ಗೆಳೆಯರ ಬಳಗ, ಡಾ. ಬಿ.ಆರ್. ಅಂಬೇಡ್ಕರ್ ಸೇವಾ ಚಾರಿಟಬಲ್ ಟ್ರಸ್ಟ್ ಹಾಗೂ ಇನ್ನಿತರ ಹಲವಾರು ಸಂಘ ಸಂಸ್ಥೆಗಳ ನೆರವಿನೊಂದಿಗೆ ಬೃಹತ್
ರಕ್ತದಾನ ಶಿಬಿರವನ್ನು ಆಯೋಜಿಸಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಅಪ್ಪು ಅಭಿಮಾನಿಗಳು, ನಾಗರೀಕರು, ಸಂಘ ಸಂಸ್ಥೆ ಪದಾಧಿಕಾರಿಗಳು ಪಾಲ್ಗೊಳ್ಳುವಂತೆ ಮನವಿ
ಮಾಡಿದ್ದಾರೆ.


ಪುನೀತ್‌ರಾಜ್‌ಕುಮಾರ್ ರವರ ಕೇವಲ ಚಿತ್ರರಂಗಕಷ್ಟೇ ಸೀಮಿತವಾಗದೆ ಹಲವಾರು ಸಮಾಜಮುಖಿ ಸೇವಾ ಕಾರ್ಯಗಳನ್ನು ಕೈಗೊಂಡು ರಾಜ್ಯಕ್ಕೆ
ಮಾದರಿಯಾಗಿದ್ದು ಅತಿ ಚಿಕ್ಕ ವಯಸ್ಸಿನಲ್ಲೇ ಪುನೀತ್ ರವರನ್ನು ಕಳೆದುಕೊಂಡಿರುವುದು ಬೇಸರದ ಸಂಗತಿಯಾಗಿದ್ದು. ಅವರು ಹಾಕಿಕೊಟ್ಟ ಮಾದರಿಯಲ್ಲೇ
ಹಲವು ಸಂಘ ಸಂಸ್ಥೆಗಳು ಸಮಾಜ ಮುಖಿ ಸೇವಾ ಕಾರ್ಯಕ್ಕೆ ಮುಂದಾಗಿರುವುದಾಗಿ ಹೇಳಿದರು. ಈ ವೇಳೆ ರೋಟರಿ ಸಂಸ್ಥೆಯ ಮಾಜಿ ಅಧ್ಯಕ್ಷ ಚನ್ನಂಕೇಗೌಡ, ನಿವೃತ್ತ ಪ್ರಾಂಶುಪಾಲ ಕಾಳೇಗೌಡ, ಎಚ್.ಪಿ.ಶಿವಕುಮಾರ್, ಗಿರೀಶ್ ಹಾಜರಿದ್ದರು.

✅ಪಾಲನೆ.ಇನ್ ವಾಟ್ಸ್ ಆ್ಯಪ್ ಗುಂಪಿಗೆ ಸೇರಿರಿ ನ್ಯೂಸ್ & ವ್ಯೂಸ್ ಓದಿರಿ. ಆಲೋಚಿಸಿ. ಸ್ಪಂದಿಸಿ.
https://chat.whatsapp.com/H1gUYgrzvnQGZAhIQSGMHn

Related posts

ಕಲ್ಲಿನಲ್ಲಿ ಕಾವ್ಯ ಬರೆದ ಮಹಾನ್ ಚೇತನ ಅಮರ ಶಿಲ್ಪಿ ಜಕಣಾಚಾರಿ

ಮಾರ್ಚ್ 8ರಂದು 600 ಕಲಿಕಾರ್ಥಿಗಳಿಗೆ ಸಾಕ್ಷರತಾ ಪರೀಕ್ಷೆ

ಕದನ ವಿರಾಮವನ್ನು ವಿಸ್ತರಿಸುವ ಬದಲು ಯುದ್ಧವನ್ನೇ ನಿಲ್ಲಿಸಬೇಕು

Leave a Comment