NEWS

ಒಂದು ಸಣ್ಣ ಬೀಜದ ಉಂಡೆಗಳು ದೊಡ್ಡ ಅರಣ್ಯದ ಸೃಷ್ಟಿಗೆ ಮುನ್ನುಡಿ ಬರೆಯುತ್ತವೆ

ವಿಜಯನಗರ ಪ್ರಥಮ ದರ್ಜೆ ಕಾಲೇಜಿನ ಸಸ್ಯಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ. ಹೇಮಾವತಿ ಸಿ ರವರು ಅಭಿಪ್ರಾಯ ವ್ಯಕ್ತಪಡಿಸಿದರು.

ಪಾಲನೆ ನ್ಯೂಸ್

ಮಂಡ್ಯ: ನಗರದ ಮಹಿಳಾ ಕಾಲೇಜಿನಲ್ಲಿ ಸಸ್ಯಶಾಸ್ತ್ರ ವಿಭಾಗ, ಐಕ್ಯೂಎಸಿ ಮತ್ತು ಎಕೋ ಕ್ಲಬ್ ವತಿಯಿಂದ ಏರ್ಪಡಿಸಿದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಪ್ರಕೃತಿಯನ್ನು ಪೋಷಿಸುವಲ್ಲಿ ಬೀಜದ ಉಂಡೆಗಳು ಎಂಬ ವಿಷಯದ ಕುರಿತು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಅವರು ಮಾತನಾಡಿದರು.

ಬೀಜದ ಉಂಡೆಗಳ ಮೂಲಕ ಸಸ್ಯಗಳನ್ನು ಬೆಳೆಸುವ ಪ್ರಯೋಗ ನಡೆದದ್ದು, 1970 ಎರಡನೇ ಮಹಾಯುದ್ಧದ ಸಂದರ್ಭದಲ್ಲಿ ಜಪಾನಿನ ಮೋಸನೋಬು ಫಾಕುಕ ಈ ತಂತ್ರಗಳ ಮೂಲಕ ಸಸ್ಯಗಳನ್ನು ಬೆಳೆಸಬಹುದು ಎಂದು ಮೊದಲ ಪ್ರಯೋಗವನ್ನು ಮಾಡಿದರು. ತದನಂತರ ನ್ಯೂಯಾರ್ಕ್ ಸಿಟಿಯಲ್ಲಿ ಲೀಜ್ ಎಂಬ ಮಹಿಳೆ ಎಲ್ಲಿ ಮರಗಳಿಲ್ಲವೋ ಅಲ್ಲಿ ಇದನ್ನು ಬಳಸಿ ಸಸಿಗಳನ್ನು ಬೆಳೆಸುವ ಪ್ರಯೋಗಕ್ಕೆ ನಾಂದಿ ಹಾಡಿದಳು.

ಇಂದು ಭಾರತ ಕರ್ನಾಟಕ ಸೇರಿದಂತೆ ಹಲವಾರು ಭಾಗಗಳಲ್ಲಿ ಈ ಒಂದು ಪ್ರಕ್ರಿಯೆಯನ್ನು ಬಳಸಿ ಅರಣ್ಯವನ್ನು ಬೆಳೆಸುವಂತಹ ಕಾರ್ಯಗಳು ನಡೆಯುತ್ತಿವೆ ಎಂದು ತಿಳಿಸಿದರು.

ಈ ಬೀಜದ ಉಂಡೆಗಳು ಮರ ಇಲ್ಲದ ಕಡೆ ಮರ ಬೆಳೆಸುವ ಜೊತೆಗೆ ಜೀವವೈವಿಧ್ಯತೆಯನ್ನು ಉಳಿಸುವಲ್ಲಿ ಪ್ರಮುಖವಾದ ಪಾತ್ರ ನಿರ್ವಹಿಸುತ್ತಿವೆ. ಭವಿಷ್ಯದಲ್ಲಿ ಯುವಜನರ ಬದುಕಿಗೆ ಪರಿಸರ ತುಂಬಾ ಅಗತ್ಯವಾಗಿದ್ದು ವಿದ್ಯಾರ್ಥಿಗಳು ಮಳೆಗಾಲದ ಸಂದರ್ಭದಲ್ಲಿ ಇಂತಹ ಬೀಜದ ಉಂಡೆಗಳನ್ನು ಮಾಡಿ ಖಾಲಿ ಜಾಗದಲ್ಲಿ ಎಸೆಯುವ ಮೂಲಕ ಪರಿಸರವನ್ನು ಬೆಳಸಿ ಪರಿಸರವನ್ನ ಸಮತೋಲನದಲ್ಲಿರುವಂತೆ ಮಾಡುವ ಸುಲಭ ಮಾರ್ಗ ಇದಾಗಿದೆ ಎಂದರು.

ಇಂದು ಇಂತಹ ಕಾರ್ಯದಲ್ಲಿ ವಿದ್ಯಾರ್ಥಿಗಳು ಎನ್‌ಜಿಓ ಸ್ವಯಂ ಸೇವಕರು , ಯುವಜನರು ಭಾಗವಹಿಸುತ್ತಿರುವುದು ಸಂತಸ ತಂದಿರುವ ವಿಚಾರ. ವಿದ್ಯಾರ್ಥಿಗಳಿಗೆ ಪ್ರತ್ಯಕ್ಷವಾಗಿ ಬೀಜದ ಉಂಡೆಗಳನ್ನು ಮಾಡುವ ಸರಳ ಬಗೆಯನ್ನು ತಿಳಿಸಿಕೊಟ್ಟರು. ದೇಶದಲ್ಲಿ ಸಸ್ಯವನ್ನು ಬೆಳೆಸುವ ಮೂಲಕ ತುಳಸಿ ಗೌಡ, ದೇವಿಕ ಅಮ್ಮ, ಸಾಲುಮರದ ತಿಮ್ಮಕ್ಕ, ರಾಧಾ ಬಹಿನ್ ಭಟ್, ಚಾಮಿ ಮುರ್ಮು ದೇಶಕ್ಕೆ ಮಾದರಿಯಾಗಿ ಪದ್ಮಶ್ರೀ ಪ್ರಶಸ್ತಿಯನ್ನು ಪಡೆದಿರುವುದು ಹೆಮ್ಮೆಯ ವಿಚಾರ ಅಂತಹವರ ಗುಣಗಳನ್ನು ವಿದ್ಯಾರ್ಥಿಗಳು ಬೆಳೆಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.

ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ಗುರುರಾಜ ಪ್ರಭು ಕೆ, ಸಸ್ಯಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ. ಸೈಯದ್ ಕೌಸರ್ ಫಾತಿಮಾ, ಐಕ್ಯೂಎಸಿ ಸಂಚಾಲಕಿ ಡಾ. ಜಯಲಕ್ಷ್ಮಿ ಬಿ, ಸಸ್ಯಶಾಸ್ತ್ರ ವಿಭಾಗದ ಪ್ರಾಧ್ಯಾಪಕಿ ಡಾ. ಹೆಚ್ ಜಿ. ಪುಷ್ಪಲತಾ, ಇಕೋ ಕ್ಲಬ್ ಸಂಚಾಲಕರಾದ ಡಾ. ಚಂದ್ರಶೇಖರ್ ಬಿ ಎನ್, ಇತಿಹಾಸ ಪ್ರಾಧ್ಯಾಪಕರಾದ ಡಾ. ಕೃಷ್ಣೇಗೌಡ, ಡಾ. ಗಿರೀಶ್, ಪ್ರದೀಪ್ ಕುಮಾರ್, ಪ್ರೊ.ಗಿರಿಜಾಂಬ ಉಪಸ್ಥಿತರಿದ್ದರು.

ಪಾಲನೆ.ಇನ್ ವಾಟ್ಸ್ ಆ್ಯಪ್ ಗುಂಪಿಗೆ ಸೇರಿರಿ ನ್ಯೂಸ್ & ವ್ಯೂಸ್ ಓದಿರಿ. ಆಲೋಚಿಸಿ. ಸ್ಪಂದಿಸಿ.
https://chat.whatsapp.com/H1gUYgrzvnQGZAhIQSGMHn

Related posts

ಕನ್ನಡ ಭಾಷೆಯಲ್ಲೂ ರೈಲ್ವೆ ಪರೀಕ್ಷೆ ನಡೆಸುವಂತೆ ನಿಖಿಲ್‌ ಕುಮಾರಸ್ವಾಮಿ ಪತ್ರ

ಅಮೆರಿಕದ ಹಿತಾಸಕ್ತಿಯೇ ತಮಗೆ ಮುಖ್ಯ ಎಂದು ಸ್ಪಷ್ಟಪಡಿಸಿದ ಟ್ರಂಪ್

17 ವರ್ಷದ ಬಾಲಕಿ ಯೊಬ್ಬಳು ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ

Leave a Comment