NEWS

ಗರ್ಭಿಣಿ ಗೋಮಾತೆಗೆ ಗೌರವೋತ್ಸವಕಾರ್ಯ ಕ್ರಮದಡಿ ಹಸುವಿಗೆ ಸೀಮಂತ ಮಾಡಿದ ರೈತ

ಪಾಲನೆ ನ್ಯೂಸ್

ಚನ್ನರಾಯಪಟ್ಟಣ: ಚನ್ನರಾಯಪಟ್ಟಣ ತಾಲೂಕಿನ ಜಿನ್ನೇನಹಳ್ಳಿ ಗ್ರಾಮದಲ್ಲಿ ಶ್ರೀ ಕಾಲಭೈರವೇಶ್ವರ ಎಂಟರ್ಪ್ರೈಸಸ್ ಮತ್ತು ಗೋದ್ರೇಜ್ ಆಗೋವೆಟ್ ವತಿಯಿಂದ ಗರ್ಭಿಣಿ ಗೋಮಾತೆಗೆ ಗೌರವೋತ್ಸವಕಾರ್ಯ ಕ್ರಮದಡಿ ಹಸುವಿಗೆ ವಿಶೇಷವಾಗಿ ಸೀಮಂತ ಕಾರ್ಯಕ್ರಮ ಮಾಡಲಾಯಿತು.

ಜಿನ್ನೇನಹಳ್ಳಿ ಗೇಟ್ ಬಳಿಯಿರುವ ರೈತ ಕೇಶವಣ್ಣ ಎಂಬುವವರ ಎರಡು ಮಿಶ್ರತಳಿ ಸೀಮೆ ಹಸುಗಳ ಮೈತೊಳೆದುಮೈ ಮೇಲೆ ಸೀರೆ ಹಾಕಿಹಣೆಗೆ ಅರಿಶಿನಕುಂಕುಮವಿಟ್ಟುಕೊರಳಿಗೆ ಹೂವಿನಹಾರವನ್ನುಹಾಕಿಸಿಂಗರಿಸಲಾಯಿತು. ಬಳಿಕ ಟೇಬಲ್ ಮೇಲೆ ಫಲ-ಪುಷ್ಪಗಳು ಹಾಗೂ ವಿವಿಧ ಬಗೆಯ ಸಿಹಿ ತಿನಿಸುಗಳನ್ನು ಇರಿಸಿ ಸಿಂಗಾರಗೊಂಡಿರುವ ಗರ್ಭಿಣಿ ಹಸುಗಳನ್ನು ನಿಲ್ಲಿಸಿ ವಿಶೇಷ ಪೂಜೆ ಮಾಡುವ ಮೂಲಕ ಸೀಮಂತ ಕಾರ್ಯವನ್ನು ನೆರವೇರಿಸ ಲಾಯಿತು.

ಮಹಿಳೆಯರು ಹಸುಗಳ ಹಣೆಗೆ ಕುಂಕುಮ ಇಟ್ಟು ಅಕ್ಷತೆ ಹಾಕಿ ಹರಸಿದರು. ಹಿರಿಯ ತಾಯಂದಿರು ಸೋಬಾನ ಪದ ಹಾಡುವ ಮೂಲಕ ಸೀಮಂತ ಕಾರ್ಯಕ್ರಮಕ್ಕೆ ಮೆರುಗು ನೀಡಿದರು. ಕಾರ್ಯಕ್ರಮದಲ್ಲಿ ಶ್ರೀ ಕಾಲಭೈರವೇಶ್ವರ ಟ್ರೇಡರ್ಸ್‌ ಮಾಲೀಕರಾದ ಜೆ.ಎಸ್. ಕಾರ್ತಿಕ್, ಜೆ.ಎಸ್. ಆಕರ್ಷ, ಗೋದ್ರೆಜ್ ಕಂಪನಿಯ ಸುನಿಲ್, ಎನ್. ಶ್ರೀಕಂಠ, ಡಾ. ಕವಿತಾ, ಪ್ರಮುಖರಾದ ಸುದೀಪ್, ಪ್ರಶಾಂತ್, ಕೇಶವಣ್ಣ, ಮಂಜು ನಾಥ್ ಹಾಗೂ ಇತರರು ಭಾಗವಹಿಸಿದ್ದರು.‌

✅ಪಾಲನೆ.ಇನ್ ವಾಟ್ಸ್ ಆ್ಯಪ್ ಗುಂಪಿಗೆ ಸೇರಿರಿ. ನ್ಯೂಸ್ & ವ್ಯೂಸ್ ಓದಿರಿ. ಆಲೋಚಿಸಿ. ಸ್ಪಂದಿಸಿ.
https://chat.whatsapp.com/H1gUYgrzvnQGZAhIQSGMHn

Related posts

ಬಾಲ್ಯ ವಿವಾಹ, ವರದಕ್ಷಿಣೆ ಕಾಯ್ದೆ ಕುರಿತು ಗ್ರಾಮೀಣ ಪ್ರದೇಶಗಳಲ್ಲಿ ಅರಿವು ಕಾರ್ಯಕ್ರಮ ಹಮ್ಮಿಕೊಳ್ಳಿ

5.50 ಕೋಟಿ ರೂ. ವೆಚ್ಚದಲ್ಲಿ ಶ್ರೀಪುರುಷ ಕನ್ನಡ ಭವನ ನಿರ್ಮಾಣಕ್ಕೆ ಶಂಕುಸ್ಥಾಪನೆ

ರೇಷನ್‌ ಗಾಗಿ ಪರದಾಟ

Leave a Comment