NEWS

ಮಂಡ್ಯದ ಅಂಕೇಗೌಡರಿಗೆ ಪದ್ಮಶ್ರೀ

ಐವರಿಗೆ ಪದ್ಮ ವಿಭೂಷಣ, 13 ಮಂದಿಗೆ ಪದ್ಮ ಭೂಷಣ ಶತಾವಧಾನಿ ಆರ್.ಗಣೇಶ್‌ಗೆ ಪದ್ಮಭೂಷಣ ಪುರಸ್ಕಾರ

ಪಾಲನೆ ನ್ಯೂಸ್

‌ಮಂಡ್ಯ: ಕರ್ನಾಟಕದ ಎಂಟು ಮಂದಿ ಸಾಧಕರು ಅತ್ಯುನ್ನತ ನಾಗರಿಕ ಗೌರವವಾದ ಪದ್ಮ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಶತಾವಧಾನಿ ಗಣೇಶ್ ಅವರನ್ನು ಪದ್ಮಭೂಷಣ ಪ್ರಶಸ್ತಿಗೆ ಪರಿಗಣಿಸಲಾಗಿದೆ. ಸಾಮಾಜಿಕ ಸೇವಾ ಕ್ಷೇತ್ರದಲ್ಲಿ ಮಂಡ್ಯದ ಅಂಕೇಗೌಡ, ಬೆಂಗಳೂರಿನ ಎಸ್.ಜಿ. ಸುಶೀಲಮ್ಮ, ವೈದ್ಯಕೀಯ ಕ್ಷೇತ್ರದಲ್ಲಿ ದಾವಣಗೆರೆಯ ಡಾ. ಸುರೇಶ್ ಹನಗವಾಡಿ ಮತ್ತು ಸಾಹಿತ್ಯ, ಶಿಕ್ಷಣ ಕ್ಷೇತ್ರದಲ್ಲಿನ ಸೇವೆಗಾಗಿ ಡಾ.ಪ್ರಭಾಕರ ಕೋರೆ, ಶಶಿಶೇಖರ ವೆಂಪಾಟಿ, ವಿಜ್ಞಾನ-ಇಂಜಿನಿಯರಿಂಗ್ ಕ್ಷೇತ್ರದಲ್ಲಿ ಶುಭ ವೆಂಕಟೇಶ್ ಅಯ್ಯಂಗಾರ್, ವಾಣಿಜ್ಯ ಮತ್ತು ಕೈಗಾರಿಕಾ ಕ್ಷೇತ್ರದಲ್ಲಿನ ಸಾಧನೆಗಾಗಿ ಟಿ.ಟಿ.ಜಗನ್ನಾಥನ್ (ಮರಣೋತ್ತರ) ಅವರು ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಬೆಂಗಳೂರು: 77ನೇ ಗಣರಾಜ್ಯೋತ್ಸವದ ಹಿನ್ನೆಲೆಯಲ್ಲಿ ದೇಶದ ಅತ್ಯುನ್ನತ ನಾಗರಿಕ ಗೌರವವಾದ ಪದ್ಮ ಪ್ರಶಸ್ತಿಗಳನ್ನು ಘೋಷಿಸಲಾಗಿದ್ದು, ಪದ್ಮ ಭೂಷಣಕ್ಕೆ ಒಬ್ಬರು, ಪದ್ಮಶ್ರೀ ಪ್ರಶಸ್ತಿಗೆ ಏಳು ಮಂದಿ ಕನ್ನಡಿಗರು ಆಯ್ಕೆಯಾಗಿದ್ದಾರೆ. 5 ಮಂದಿಗೆ ಪದ್ಮ ವಿಭೂಷಣ, 13 ಮಂದಿಗೆ ಪದ್ಮ ಭೂಷಣ, 113 ಮಂದಿಗೆ ಪದ್ಮಶ್ರೀ ಪ್ರಶಸ್ತಿಗಳನ್ನು ಘೋಷಿಸಲಾಗಿದೆ.

ನಟ ಧರ್ಮೇಂದ್ರ ಮತ್ತು ಕೇರಳದ ಮಾಜಿ ಸಿಎಂ ವಿ.ಎಸ್.ಅಚ್ಯುತಾನಂದನ್ ಅವರನ್ನು ಮರಣೋತ್ತರ ವಾಗಿ ಪದ್ಮ ವಿಭೂಷಣ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಶಿಬು ಸೊರೇನ್, ವಿ.ಕೆ.ಮಲ್ಲೋತ್ರ, ಪಿಯುಷ್ ಪಾಂಡೆ ಅವರನ್ನು ಮರಣೋತ್ತರ ಪದ್ಮಭೂಷಣ ಪ್ರಶಸ್ತಿಗೆ ಪರಿಗಣಿ ಸಲಾಗಿದೆ. ಶತಾವಧಾನಿ ಆರ್.ಗಣೇಶ್, ನಟ ಮುಮ್ಮಟಿ ಅವರಿಗೆ ಪದ್ಮಭೂಷಣ ಗೌರವ ಸಂದಿದೆ.

ಈ ವರ್ಷದ ಪದ್ಮ ಪ್ರಶಸ್ತಿಗಳು ಭಾರತದ ಉದ್ದಗಲಕ್ಕೂ ಇರುವ ವಿವಿಧ ರೀತಿಯ ಪ್ರಚಾರವಿಲ್ಲದ ವೀರರನ್ನು ಗುರುತಿಸಿವೆ. ಇವರಲ್ಲಿ ಹಿಂದುಳಿದ ಮತ್ತು ದಲಿತ ಸಮುದಾಯಗಳು, ಪ್ರಾಚೀನ ಬುಡಕಟ್ಟು ಜನಾಂಗದವರು ಮತ್ತು ದೂರದ ಮತ್ತು ಕಷ್ಟಕರ ಪ್ರದೇಶಗಳಿಂದ ಬಂದವರೂ ಸೇರಿದ್ದಾರೆ. ಆರೋಗ್ಯ ರಕ್ಷಣೆ, ಶಿಕ್ಷಣ, ಜೀವನೋಪಾಯ, ನೈರ್ಮಲ್ಯ, ಸುಸ್ಥಿರತೆ ಇತ್ಯಾದಿಗಳನ್ನು ಉತ್ತೇಜಿಸುವಲ್ಲಿ ಕೆಲಸ ಮಾಡುವ ದಿವ್ಯಾಂಗರು, ಮಹಿಳೆಯರು, ಮಕ್ಕಳು, ದಲಿತರು ಮತ್ತು ಬುಡಕಟ್ಟು ಜನಾಂಗದವರ ಸೇವೆಗಾಗಿ ತಮ್ಮ ಇಡೀ ಜೀವನವನ್ನು ಮುಡಿಪಾಗಿಟ್ಟವರು ಇದ್ದಾರೆ.

ಮಂಡ್ಯ ಜಿಲ್ಲೆ ಪಾಂಡವಪುರ ತಾಲ್ಲೂಕಿನ ಹರಳಹಳ್ಳಿ ಯಲ್ಲಿರುವ ‘ಪುಸ್ತಕದ ಮನೆ’ಯನ್ನು ಸಾರ್ವಜನಿಕರಿ ಪುಸ್ತಕಗಳೇ ತಮ್ಮ ಪ್ರಪಂಚ ಎಂದುಕೊಂಡು ಲಕ್ಷಾಂತರ ಪುಸ್ತಕಗಳನ್ನು ಸಂಗ್ರಹಿಸಿದ ಮಂಡ್ಯದ ಅಂಕೇಗೌಡ ಅವರಿಗೆ ಸಾಮಾಜಿ ಸೇವಾ ಕ್ಷೇತ್ರದಲ್ಲಿ 2026ರ ಪದ್ಮಶ್ರೀ ಪ್ರಶಸ್ತಿ ಲಭಿಸಿದೆ. ಲಕ್ಷಾಂತರ ಪುಸ್ತಕ, ನಾಣ್ಯ, ಅಂಚೆ ಚೀಟಿ ಸಂಗ್ರಹಿಸಿರುವ ಇವರ ‘ಪುಸ್ತಕದ ಮನೆ’ ಲಿಮ್ಯಾ ಬುಕ್ ಆಫ್ ರೆಕಾರ್ಡ್ಸ್ ನಲ್ಲೂ ಸ್ಥಾನ ಪಡೆದಿದೆ. ಗ್ರಾಮೀಣ ಪ್ರದೇಶದ ಪುಸ್ತಕ ಪ್ರಿಯರಿಗೆ ಇವರು ಸ್ಫೂರ್ತಿಯಾಗಿದ್ದಾರೆ.

ಗಾಗಿ ತೆರೆದಿಟ್ಟಿರುವ ಎಂ.ಅಂಕೇಗೌಡರು, ಸುಮಾರು ನಾಲ್ಕು ಲಕ್ಷ ಪುಸ್ತಕಗಳು, ನಾಣ್ಯ, ಅಂಚೆ ಚೀಟಿ ಮತ್ತು ಲಗ್ನಪತ್ರಿಕೆಗಳ ಅಪರೂಪದ ಸಂಗ್ರಹವನ್ನು ಹೊಂದಿ ದ್ದಾರೆ. ತಮ್ಮ ಸಂಬಳದ ಬಹುಪಾಲನ್ನು ಪುಸ್ತಕಗಳಿಗೇ ಮೀಸಲಿಟ್ಟು, ಪುಸ್ತಕ ಸಂಗ್ರಹಕ್ಕಾಗಿ ನಿವೇಶನವನ್ನೂ ಮಾರಿದ ಅಂಕೇಗೌಡರು, ಗ್ರಾಮೀಣ ಪ್ರದೇಶದ ಪುಸ್ತಕ ಪ್ರಿಯರಿಗೆ ಸ್ಫೂರ್ತಿಯಾಗಿದ್ದಾರೆ.

✅ಪಾಲನೆ.ಇನ್ ವಾಟ್ಸ್ ಆ್ಯಪ್ ಗುಂಪಿಗೆ ಸೇರಿರಿ ನ್ಯೂಸ್ & ವ್ಯೂಸ್ ಓದಿರಿ. ಆಲೋಚಿಸಿ. ಸ್ಪಂದಿಸಿ.
https://chat.whatsapp.com/H1gUYgrzvnQGZAhIQSGMHn

Related posts

ಖಾಸಗಿ ಹಾಸ್ಟೆಲ್‌ನಲ್ಲಿ ಘಟನೆ 7 ಮಂದಿ ಗಂಭೀರ; ಭದ್ರತಾ ಸಿಬ್ಬಂದಿ ಬೆದರಿಸಿ ಪರಾರಿ

ಸಕ್ಕರೆ ನಗರಿಯಲ್ಲಿ ಹೂವಿನ ಲೋಕ: ಕೆ.ಆ‌ರ್.ನಂದಿನಿ

ಜಲ ಜೀವನ ಮಿಷನ್ ಯೋಜನೆಯ ಕಾಮಗಾರಿಗಳ ಪ್ರಗತಿ ಪರಿಶೀಲಿಸಿದ ಜಿ.ಪಂ. ಸಿಇಓ

Leave a Comment