NEWS

ರಾಜ್ಯಪಾಲರ ಭಾಷಣ: ವಿಧಾನಸಭೆಯಲ್ಲಿ ರಚನಾತ್ಮಕ ಚರ್ಚೆ ಮಾಡಲಾಯಿತು

ರಾಜ್ಯಪಾಲರಿಗೆ ಅಗೌರವ: ಬಿಜೆಪಿ ಆರೋಪ

ರಾಜ್ಯಪಾಲರಿಂದ ರಾಷ್ಟ್ರಗೀತೆ, ರಾಷ್ಟ್ರಧ್ವಜಕ್ಕೆ ಅವಮಾನ: ಕಾಂಗ್ರೆಸ್ ಪ್ರತ್ಯಾರೋಪ

ಪಾಲನೆ ನ್ಯೂಸ್

ಬೆಂಗಳೂರು: ವಿಧಾನಮಂಡಲದ ಜಂಟಿ ಅಧಿವೇಶನದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹೋಟ್ ಅವರ ಭಾಷಣ ಮತ್ತು ನಂತರ ನಡೆದ ಬೆಳವಣಿಗೆಗಳ ಬಗ್ಗೆ ವಿಧಾನ ಸಭೆಯಲ್ಲಿ ಆಡಳಿತ ಪಕ್ಷ ಮತ್ತು ಪ್ರತಿಪಕ್ಷಗಳ ನಡುವೆ ರಚನಾತ್ಮಕ ಚರ್ಚೆ ನಡೆಯಿತು.

ಕಲಾಪದ ಆರಂಭದಲ್ಲಿ ವಿಧಾನಸಭೆಯ ಕಾರ್ಯದರ್ಶಿಯವರು ವರದಿ ಮಂಡಿಸಿದರು. ಬಳಿಕ ವಿರೋಧಪಕ್ಷದ ನಾಯಕ ಆ‌ರ್.ಅಶೋಕ್, ಗುರುವಾರ ಜಂಟಿ ಅಧಿವೇಶನದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಲ್ಲೋಟ್ ಅವರು ಭಾಷಣ ಮಾಡಿ ತೆರಳುವ ವೇಳೆ ಆಡಳಿತ ಪಕದ ಕೆಲಶಾಸಕರು ಅವರನ್ನು ಅಡ್ಡಗಟ್ಟಿ ಅಗೌರವ ತೋರಿದ್ದಾರೆ. ವಿಧಾನಪರಿಷತ್‌ ಸದಸ್ಯ ಬಿ.ಕೆ.ಹರಿ ಪ್ರಸಾದ್‌ ತಮ್ಮ ಬಟ್ಟೆಯನ್ನು ಬಿಜೆಪಿಯವರು ಹರಿದುಹಾಕಿದ್ದಾರೆ ಎಂದು ಆರೋಪಿಸಿದ್ದಾರೆ. ಅವರ ಹೆಸರೇ ಹರಿಪ್ರಸಾದ್ ಹೀಗಾಗಿ ಅವರು ಹರಿದುಹೋಗಿದ್ದಾರೆ. ಅವರ ಹಿಂದೆ ಮುಂದೆ ಇದ್ದವರು ಯಾರು?’ ಎಂಬುದನ್ನು ವಿಡಿಯೋದಲ್ಲಿ ಪರಿಶೀಲಿಸಿ ಕ್ರಮತೆಗೆದುಕೊಳ್ಳಿ. ಮಾರ್ಷಲ್ ಗಳನ್ನು ಹೊರತುಪಡಿಸಿ ದರ ಬಿಜೆಪಿಯ ಯಾವುದೇ ಸದಸ್ಯ ಹರಿಪ್ರಸಾದ್‌ ಅವರ ಹಿಂದೆ ಇರಲಿಲ್ಲ ಎಂದರು. ರಾಜ್ಯಪಾಲರಿಗೆ ಅಗೌರವ ತೋರಿಸಲಾಗಿದೆ. ತಳ್ಳಾಟ, ನೂಕಾಟವಾಗಿದೆ. ಒಂದು ವೇಳೆ ಹಲ್ಲೆಯಾಗಿದ್ದರೆ ಅದಕ್ಕೆ ಹೊಣೆ ಯಾರು? ಎಂದು ಪ್ರಶ್ನಿಸಿದರು.

ರಾಜ್ಯಪಾಲರು ರಾಷ್ಟ್ರಗೀತೆಗೆ ಅಪಮಾನ ಮಾಡಿದ್ದಾರೆಂದು ದೂರಲಾಗುತ್ತಿದೆ. ರಾಷ್ಟ್ರ ಗೀತೆ ಹಾಡುವ ಸ್ವಿಜ್ ಬಟನ್ ರಾಜ್ಯಪಾಲರ ಕೈಯಲ್ಲಿ ಇರಲಿಲ್ಲ. ಭಾಷಣ ಮುಗಿಸಿ ರಾಜ್ಯಪಾಲರು ಜೈ ಹಿಂದ್ ಎಂದು ಹೇಳಿ ದಾಗಲೇ ರಾಷ್ಟ್ರಗೀತೆ ಹಾಡಬೇಕಿತ್ತು. ಗುರುವಾರದ ಪರಿಸ್ಥಿತಿಯಲ್ಲಿ ರಾಜ್ಯಪಾಲರನ್ನು ಅಬಲೆಯಂತೆ ಮಾಡಲಾಗಿದೆ. ಅವರು ಏಕಾಂಗಿಯಾಗಿ ಹೊರಹೋದರು. ಅವರ ಜೊತೆ ಯಾರೂ ಇರಲಿಲ್ಲ. ನಂತರದ ಕಲಾಪದಲ್ಲಿ ಕಾನೂನು ಸಚಿವರೇ ರಾಜ್ಯಪಾಲರು ಓಡಿಹೋಗಿದ್ದಾರೆಂದು ಹೇಳಿದ್ದಾರೆ. ಇದು ಸರಿಯಲ್ಲ ಎಂದರು.

ರಾಜ್ಯಪಾಲರ ಭಾಷಣಕ್ಕೆ ಅಡ್ಡಿಪಡಿಸಬಾರದು ಎಂದು ನಿಯಮಗಳಲ್ಲಿ ಸ್ಪಷ್ಟವಾಗಿದೆ. ನಾವು ಕೆಲವರ ಹೆಸರನ್ನು ಉಲ್ಲೇಖಿಸಿದ್ದೇವೆ. ವಿಡಿಯೋ ಪರಿಶೀಲಿಸಿ ಕ್ರಮಕೈಗೊಳ್ಳಿ ಎಂದು ಆಗ್ರಹಿಸಿದರು. ಬಿಜೆಪಿಯ ಸುನಿಲ್‌ಕುಮಾರ್ ಮಾತ ನಾಡಿ, ರಾಜ್ಯಪಾಲರಿಗೆ ಸಚಿವರು, ಶಾಸಕರು ಆಗೌರವ ತೋರಿರುವುದರ ಬಗ್ಗೆ ವಿರೋಧ ಪಕ್ಷದ ನಾಯಕರು ತಕ್ಷಣವೇ ಸಭಾಧ್ಯಕ್ಷರ ಗಮನಕ್ಕೆ ತಂದಿದ್ದಾರೆ. ಶಿಷ್ಟಾಚಾರ ಉಲ್ಲಂಘನೆಯಾಗಿದೆ ಎಂದರು.

ಸಭಾಧ್ಯಕ್ಷರು ಮೊದಲ ಅವಧಿಯ ಕಲಾಪದಲ್ಲೇ 9 ಸದಸ್ಯರನ್ನು ಅಮಾನತ್ತು ಗೊಳಿಸಿದ್ದರು. ಮತ್ತೊಂದು ಪ್ರಕರಣದಲ್ಲಿ ವಿರೋಧ ಪಕದ 18 ಶಾಸಕರನ್ನು 6 ತಿಂಗಳ ಕಾಲ ಅಮಾನತ್ತುಗೊಳಿಸಿದ್ದರು. ಅನುಚಿತವಾಗಿ ವರ್ತನೆ ಮಾಡಿರುವ ಶಾಸಕರನ್ನು ಉಳಿಸಿಕೊಂಡು ಸದನ ನಡೆಸುವುದು ಸೂಕ್ತವಲ್ಲ. ರಾಜ್ಯ ಸರ್ಕಾರ ರಾಜ್ಯಪಾಲರು ಮತ್ತು ವಿಧಾನಸಭೆಯ ಅಧ್ಯಕ್ಷರು ತಾನು ಹೇಳಿದಂತೆ ಕೇಳಬೇಕು ಎಂಬ ಧೋರಣೆ ಅನುಸರಿಸುತ್ತಿದೆ. ಇದು ಸರಿಯಲ್ಲ. ಸದನದಲ್ಲೇ ರಾಜ್ಯಪಾಲರಿಗೆ ಗೌರವ ಇಲ್ಲ ಸಭಾಧ್ಯಕ್ಷ ಯು.ಟಿ.ಖಾದರ್ ಮಾತನಾಡಿ, ತಮ್ಮ ಮುಂದೆ ಎರಡು ವಿಚಾರಗಳಿವೆ. ಆಡಳಿತ ಪಕ್ಷದ ಕಡೆಯಿಂದ ರಾಜ್ಯಪಾಲರು ರಾಷ್ಟ್ರಗೀತೆಗೆ ಅಪಮಾನ ಮಾಡಿದ್ದಾರೆಂಬ ಆಕ್ಷೇಪ ಸಲ್ಲಿಕೆಯಾಗಿದೆ.

ವಿರೋಧ ಪಕ್ಷದವರು ರಾಜ್ಯಪಾಲರಿಗೆ ಅಗೌರವ ತೋರಲಾಗಿದೆ ಎಂದು ಲಿಖಿತ ದೂರು ನೀಡಿದ್ದಾರೆ. ನಾವಿಲ್ಲಿ ಉದ್ದೇಶಕ್ಕಾಗಿ ಚರ್ಚೆ ನಡೆಸಬೇಕೇ ಹೊರತು ವೈಯಕ್ತಿಕವಾಗಿ ಹಗೆತನಕ್ಕಾಗಿ ಜಗಳವಾಡಬಾರದು ಎಂದು ಹೇಳಿದರು.

ಬಿಜೆಪಿಯ ಸುರೇಶ್‌ಕುಮಾರ್, ಗುರುವಾರದ ಘಟನೆಯಲ್ಲಿ ಎಚ್.ಸಿ. ಬಾಲಕೃಷ್ಣ ಮತ್ತು ಹರಿಪ್ರಸಾದ್ ಅವರ ತಳ್ಳಾಟದಲ್ಲಿ ರಾಜ್ಯಪಾಲರು ಕೆಳಗೆ ಬಿದ್ದಿದ್ದರೆ ಗತಿಯೇನು ಎಂದು ಪಶ್ನಿಸಿದರು.

ಹಿರಿಯ ಶಾಸಕ ಸುರೇಶ್‌ ಕುಮಾರ್ ಅಂಥವರು ಬಿದ್ದಿದ್ದರೆ… ಹಾಗಿದ್ದರೆ… ಎಂಬ ಊಹಾತ್ಮಕ ಚರ್ಚೆ ಮಾಡುವುದು ಸರಿಯಲ್ಲ ಎಂದು ಸಭಾಧ್ಯಕ್ಷರು ಹೇಳಿದರು.

ಪಾಲನೆ.ಇನ್‌ ವಾಟ್ಸ್‌ ಆಪ್‌ ಗುಂಪಿಗೆ ಸೇರಿರಿ.

Related posts

ರೋಗಿ ಸೇರಿದಂತೆ ಏಳು ಜನರು ಪ್ರಯಾಣಿಸುತ್ತಿದ್ದ ಆ್ಯಂಬುಲೆನ್ಸ್‌ವೊಂದು ಪತನ

ಪ್ರಧಾನ ಮಂತ್ರಿ ಶ್ರಮಯೋಗಿ ಮಾನ್ ಧನ್ ಯೋಜನೆ ಜಾರಿ: ಡಾ. ಕುಮಾರ

ಸಿಎಂ ಸ್ಟಾಲಿನ್ ಸ್ಟಾಂಡ್ ಅಪ್ ಕಾಮೆಡಿಯನ್ ಎಂದು ನಟ ವಿಜಯ್ ವ್ಯಂಗ್ಯ

Leave a Comment