ವಾರ್ಷಿಕೋತ್ಸವ ಸಮಾರಂಭದಲ್ಲಿ ಶಾಸಕ ಜಿ.ಡಿ.ಹರೀಶ್ ಗೌಡ
ಪಾಲನೆ ನ್ಯೂಸ್
ಹುಣಸೂರು: ವಿದ್ಯಾರ್ಥಿಗಳಲ್ಲಿ ಓದಿನೊಂದಿಗೆ ಕೌಶಲ್ಯ ಹಾಗೂ ಭಾಷೆಯ ಮೇಲೆ ಹಿಡಿತವಿದ್ದಲ್ಲಿ ಸಾಧನೆಗೆ ಪ್ರೇರಣೆಯಾಗಲಿದೆ. ಮಾತೃಭಾಷೆಯೊಂದಿಗೆ ಇಂಗ್ಲಿಷ್ ಭಾಷೆಯನ್ನು ಪ್ರಾಮುಖ್ಯವಾಗಿಸಿಕೊಂಡಲ್ಲಿ ಜೀವನ ರೂಪಿಸಿಕೊಳ್ಳಲು ಸಾಧ್ಯವೆಂದು ಶಾಸಕ ಜಿ.ಡಿ.ಹರೀಶ್ ಗೌಡ ಅಭಿಪ್ರಾಯಪಟ್ಟರು.
ನಗರದ ಮುನೇಶ್ವರಕಾವಲ್ ಮೈದಾನದಲ್ಲಿ ನಡೆದ ನ್ಯೂ ಕೇಂಬ್ರಿಡ್ಜ್ ಪಬ್ಲಿಕ್ ಸ್ಕೂಲ್‌ನ 16ನೇ ವರ್ಷದ ಶಾಲಾ ವಾರ್ಷಿಕೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿ, ಪ್ರಸ್ತುತ ಸ್ಪರ್ಧಾತ್ಮಕ ಯುಗವಾಗಿದ್ದು, ನಗರ ಪ್ರದೇಶದ ಮಕ್ಕಳಿಗೆ ಸ್ಪರ್ಧೆಯೊಡ್ಡಲು ಗ್ರಾಮೀಣ ವಿದ್ಯಾರ್ಥಿಗಳಿಗೆ ಇಂಗ್ಲಿಷ್ ಭಾಷೆ ಅನಿವಾರ್ಯವಾಗಿದ್ದು ಆಸಕ್ತಿಯಿಂದ ಕಲಿಯಬೇಕೆಂದು ಎಂದು ತಿಳಿಸಿದರು.
ಕೇಂಬ್ರಿಡ್ಜ್ ವಿದ್ಯಾಸಂಸ್ಥೆಯು ಗುಣಮಟ್ಟದ ಶಿಕ್ಷಣ ನೀಡುತ್ತಿದ್ದು, ಮುಂದಿನ ದಿನಗಳಲ್ಲಿ ಡಿಪ್ಲಮೊ ಹಾಗೂ ಇಂಜಿನಿಯರಿಂಗ್ ಸೇರಿದಂತೆ ಉದ್ಯೋಗಾಧಾರಿತ ಶಿಕ್ಷಣ ಕೇಂದ್ರ ಆರಂಭಿಸುವಂತೆ ಮನವಿ ಮಾಡಿ, ಶೈಕ್ಷಣಿಕ ಪ್ರಗತಿಗಾಗಿ ಸದಾ ಪ್ರೋತ್ಸಾಹ ನೀಡುವೆನೆಂದರು.
ಹಿರಿಯ ಪತ್ರಕರ್ತ ಅಂಶಿಪ್ರಸನ್ನಕುಮಾರ್ ಮಾತನಾಡಿ, ಪ್ರತಿಯೊಬ್ಬರಿಗೂ ಶಿಕ್ಷಣ ಮತ್ತು ಆರೋಗ್ಯ ಅತೀ ಮುಖ್ಯ, ಶಿಕ್ಷಣದಿಂದಲೇ ಎಲ್ಲವೂ ಎಂಬುದನ್ನರಿತು ಹುಣಸೂರಿನಲ್ಲಿ ನಡೆದ ನ್ಯೂ ಕೇಂಬ್ರಿಡ್ಜ್ ಪಬ್ಲಿಕ್ ಸ್ಕೂಲ್ ವಾರ್ಷಿಕೋತ್ಸವವನ್ನು ಶಾಸಕ ಹರೀಶ್ ಗೌಡ ಉದ್ಘಾಟಿಸಿದರು. ಸಂಸ್ಕೃಪಕ ಸಿದ್ದರಾಮಯ್ಯ, ಅಂಶಿಪ್ರಸನ್ನಕುಮಾರ್, ನಾರಾಯಣ್ ಮತ್ತಿತರ ಗಣ್ಯರಿದ್ದರು.
ಪ್ರತಿಯೊಬ್ಬರು ಶಿಕ್ಷಣಕ್ಕೆ ಮಹತ್ವ ನೀಡಬೇಕು. ವಿದ್ಯಾರ್ಥಿಗಳು ಪಠ್ಯದೊಂದಿಗೆ ಪತ್ಯೇತರ ಚಟುವಟಿಕೆಗಳಿಗೆ ಆದ್ಯತೆ ನೀಡಿ. ವಿದ್ಯಾರ್ಥಿಗಳ ವ್ಯಕ್ತಿತ್ವ ನಿರ್ಮಾಣದಲ್ಲಿ ಕ್ರೀಡೆ, ಚಟುವಟಿಕೆಗಳಲ್ಲಿ ಭಾಗವಹಿಸಬೇಕು. ಗುಣಾತ್ಮಕ ಶಿಕ್ಷಣದ ಜೊತೆಗೆ ಇಂಗ್ಲಿಷ್ ಗೂ ಆದ್ಯತೆ ನೀಡಬೇಕೆಂದರು. ಸಂಸ್ಥೆಯ ಸಂಸ್ಥಾಪಕ ಸಿದ್ದರಾಮಯ್ಯ ಮಾತನಾಡಿ, ವಿದ್ಯೆ ಎಂಬುದು ಆದ್ದತೆ, ಚಿನ್ನದ ಗಣಿ ಇದ್ದಂತೆ, ಪೋಷಕರು ತಮ್ಮ ಮಕ್ಕಳಿಗೆ ಒಳ್ಳೆಯ ಶಿಕ್ಷಣ ಕೊಡಿಸಿ, ಪ್ರಭುದ್ದರನ್ನಾಗಿಸಿ, ದೇಶದ ಆಸ್ತಿಯಾಗಿಸಿ. ಈ ನಿಟ್ಟಿನಲ್ಲಿ ನಮ್ಮ ಸಂಸ್ಥೆಯು ಪೋಷಕರು ಮತ್ತು ಮಕ್ಕಳ ಕನಸನ್ನು ನನಸಾಗಿಸಲು ಶ್ರಮಿಸುತ್ತಿದೆ. ಇಲ್ಲಿ ವ್ಯಾಸಂಗ ಮಾಡಿದ ಅನೇಕ ವಿದ್ಯಾರ್ಥಿಗಳು ಇಂದು ಉನ್ನತ ಹುದ್ದೆಯಲ್ಲಿರುವುದು ಹೆಮ್ಮೆ ಎಂದು ಹೇಳಿ, ಕ್ಷೇತ್ರದ ಶಾಸಕ ಜಿ.ಡಿ.ಹರೀಶ್ ಗೌಡ ಒಬ್ಬ ಕ್ರಿಯಾಶೀಲ, ಭವಿಷ್ಯದ ನಾಯಕರೆಂದು ಬಣ್ಣಿಸಿದರು.

ಸಂಸ್ಥೆವತಿಯಿಂದ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಅಂಶಿಪ್ರಸನ್ನಕುಮಾರ್, ಜಿಲ್ಲಾ ಪ್ರಶಸ್ತಿ. ಮರಸ್ಕೃತ ಧರ್ಮಾಪುರನಾರಾಯಣ್ ರನ್ನು ಹಿರಿಯ ಸನ್ಮಾನಿಸಲಾಯಿತು. ಶಾಲೆಯ ವಿದ್ಯಾರ್ಥಿಗಳಾದ ಮೆಡಿಕಲ್ ವಿದ್ಯಾರ್ಥಿನಿ ಮಜನಿ, ವಿಜ್ಞಾನಿ ಸ್ವಾತಿಯವರನ್ನು ಗೌರವಿಸಲಾಯಿತು. ವಿದ್ಯಾರ್ಥಿಗಳು ಹಾಗೂ ಪೋಷಕರು ಸಹ ಆಕರ್ಷಕ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮಿಂದೆದ್ದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷೆ ಪ್ರಿಯಾಂಕ ಎಸ್. ರಾಮ್, ಆಡಳಿತಾಧಿಕಾರಿ ಭರತ್, ನಿವೃತ್ತ ಪೊಲೀಸ್ ಅಧಿಕಾರಿ ನಾರಾಯಣ್, ಮಹಾರಾಣಿ ಕಾಲೇಜಿನ ದೈಹಿಕಶಿಕ್ಷಣ ನಿರ್ದೇಶಕ ಡಾ.ಭಾಸ್ಕರ್, ಉದ್ಯಮಿ ಕಾಯಿಶೇಖರ್, ಪ್ರಾಂಶುಪಾಲರಾದ ರಾಣಿಮತ್ತಿತರರಿದ್ದರು. ಅಪಾರ ಸಂಖ್ಯೆಯಲ್ಲಿ ಪೋಷಕರು ಭಾಗವಹಿಸಿದ್ದರು.
ಪಾಲನೆ.ಇನ್ ವಾಟ್ಸ್ ಆಪ್ ಗುಂಪಿಗೆ ಸೇರಿರಿ.


