ಪಾಲನೆ ನ್ಯೂಸ್
ಮಂಡ್ಯ: ಜಿಲ್ಲೆಯಲ್ಲಿ ದಢಾರ ಮತ್ತು ರುಬೆಲ್ಲ ನಿರ್ಮೂಲನೆಗಾಗಿ ವಿಶೇಷ ಪಾಕ್ಷಿಕ ಅಭಿಯಾನವನ್ನು ಜನವರಿ 19 ರಿಂದ 31 ವರೆಗೆ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಡಾ ಕುಮಾರ ಅವರು ಹೇಳಿದರು.
ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಆಯೋಜಿಸಿದ್ದ ಸಾರ್ವತ್ರಿಕ ಲಸಿಕಾ ಕಾರ್ಯಕ್ರಮದ ಪ್ರಗತಿ ಮತ್ತು ದಢಾರ ರುಬೆಲ್ಲಾ ನಿರ್ಮೂಲನೆ ಕಾರ್ಯಕ್ರಮ ಜಿಲ್ಲಾ ಮಟ್ಟದ ಚಾಲನಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಜಿಲ್ಲೆಯ 9 ರಿಂದ 24 ತಿಂಗಳೊಳಗಿನ ಮಕ್ಕಳಿಗೆ ಏಪ್ರಿಲ್ 2025 ರಿಂದ ಡಿಸೆಂಬರ್ 25 ವರೆಗೆ 13320 ಪೂರ್ಣ ಲಸಿಕೆ ನೀಡುವ ಗುರಿ ಹೊಂದಿದ್ದು ಈಗಾಗಲೇ ಡಿಸೆಂಬರ್ ಅಂತ್ಯಕ್ಕೆ 14493 ಲಸಿಕೆಯನ್ನು ನೀಡಲಾಗಿದೆ ಎಂದು ಹೇಳಿದರು.
ಪೂರ್ಣ ಲಸಿಕೆಯಿಂದ ಹೊರಗುಳಿದ ಮಕ್ಕಳ ಪಟ್ಟಿಯನ್ನು ಸಿದ್ಧಪಡಿಸಿ ಸದರಿ ಮಕ್ಕಳಿಗೆ ದಢಾರ ರುಬೆಲ್ಲ ನಿರ್ಮೂಲನಾ ಲಸಿಕೆ ನೀಡಿ. ಜ್ವರ ಮತ್ತು ದದ್ದುಗಳು ( Rashs) ಮಕ್ಕಳಲ್ಲಿ ಕಾಣಿಸಿಕೊಂಡರೆ ಕೂಡಲೇ ಪ್ರಕರಣ ದಾಖಲಿಸಿ ಮಗುವನ್ನು ಪರೀಕ್ಷೆಗೆ ಒಳಪಡಿಸುವಂತೆ ಅರಿವಿನ ಕಾರ್ಯಕ್ರಮಗಳನ್ನು ರೂಪಿಸಿ ಎಂದು ಹೇಳಿದರು.

ಜಿಲ್ಲೆಯಲ್ಲಿ 2025 ನೇ ಸಾಲಿನಲ್ಲಿ 198 ಜ್ವರ ಮತ್ತು ದದ್ದು ಪ್ರಕರಣ ದಾಖಲಾಗಿದ್ದು ಪರೀಕ್ಷೆ ನಡೆಸಿದ ನಂತರ 8 ರುಬೆಲ್ಲ ಪ್ರಕರಣಗಳು ದೃಢಪಟ್ಟಿದೆ. ಸದರಿ ಮಕ್ಕಳಿಗೆ ಸೂಕ್ತ ಚಿಕಿತ್ಸೆ ನೀಡಲಾಗುತ್ತಿದೆ. ದಢಾರ ರುಬೆಲ್ಲ ನಿರ್ಮೂಲನಾ ಲಸಿಕೆಯಿಂದ ಯಾವುದೇ ಮಕ್ಕಳು ಹೋರಗುಳಿಯದಂತೆ ಸೂಕ್ತ ಕ್ರಮ ವಹಿಸಿ ಎಂದು ತಿಳಿಸಿದರು.
ಸಭೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಕೆ. ಮೋಹನ್, ಆರ್.ಸಿ.ಎಚ್ ಅಧಿಕಾರಿ ಡಾ. ಕೆ. ಪಿ ಅಶ್ವತ್, ಡಾ. ಬೆಟ್ಟಸ್ವಾಮಿ ಸೇರಿದಂತೆ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.
ಪಾಲನೆ.ಇನ್ ವಾಟ್ಸ್ ಆಪ್ ಗುಂಪಿಗೆ ಸೇರಿರಿ.


