NEWS

ರಷ್ಯಾದಿಂದ ತೈಲ ಆಮದು: ಭಾರತದ ಮೇಲೆ ಸುಂಕ ಏರಿಸುವ ಬೆದರಿಕೆ ಹಾಕಿದ ಟ್ರಂಪ್

ಪಾಲನೆ ನ್ಯೂಸ್

ಭಾರತದ ಮೇಲೆ ಹೇರಿರುವ ಸುಂಕವನ್ನು ಹೆಚ್ಚಿಸುವ ಎಚ್ಚರಿಕೆಯನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ ನೀಡಿದ್ದಾರೆ.

‘ರಷ್ಯಾದ ತೈಲ ಸಮಸ್ಯೆಯನ್ನು ಬಗೆಹರಿಸಲು ಸಹಾಯ ಮಾಡದಿದ್ದಲ್ಲಿ ಭಾರತದ ಮೇಲಿನ ಸುಂಕ ಹೆಚ್ಚಿಸುತ್ತೇವೆ’ ಎಂದು ಟ್ರಂಪ್‌ ಏರ್‌ಫೋರ್ಸ್ ಒನ್ ವಿಮಾನ ಪ್ರಯಾಣದ ವೇಳೆ ವರದಿಗಾರರೊಂದಿಗೆ ತಿಳಿಸಿದ್ದನ್ನು ‘ಎಎನ್‌ಐ’ ಸುದ್ದಿ ಸಂಸ್ಥೆ `ಎಕ್ಸ್’ನಲ್ಲಿ ಪ್ರಕಟಿಸಿದೆ.

‘ನನ್ನನ್ನು ಸಂತುಷ್ಠಗೊಳಿಸಬೇಕು ಎಂದು ಅವರು ಬಯಸಿದ್ದರು. ಪ್ರಧಾನಿ ನರೇಂದ್ರ ಮೋದಿ ಒಳ್ಳೆಯ ವ್ಯಕ್ತಿ. ನಾನು ಸಂತೋಷಗೊಂಡಿಲ್ಲ ಎಂದು ಅವರಿಗೆ ತಿಳಿದಿದೆ. ನನ್ನನ್ನು ಸಂತೋಷಗೊಳಿಸುವುದು ಮುಖ್ಯ. ಅವರು ವ್ಯಾಪಾರ ಮಾಡಲಿ, ಅವರ ಮೇಲಿನ ಸುಂಕವನ್ನು ನಾವು ತ್ವರಿತವಾಗಿ ಏರಿಕೆ ಮಾಡುತ್ತೇವೆ’ ಎಂದು ಹೇಳಿದ್ದಾರೆ.

ರಷ್ಯಾದಿಂದ ಭಾರತ ತೈಲ ಆಮದು ಮುಂದುವರಿಸಿರುವುದಕ್ಕೆ ಡೊನಾಲ್ಡ್ ಟ್ರಂಪ್‌ರಿಂದ ಈ ಪ್ರತಿಕ್ರಿಯೆ ಬಂದಿದೆ.

Related posts

ನಮ್ಮ ನಡೆ ಸ್ವಚ್ಛತೆ ಕಡೆ- ರನ್ ಫಾರ್ ಮಂಡ್ಯ -ಮ್ಯಾರಥಾನ್

2026ರ ಐಪಿಎಲ್ ಗಾಗಿ RCB ಜೆರ್ಸಿ ಅನಾವರಣ: ಹೊಸ ಋತುವಿಗೆ ವಿಶಿಷ್ಟ ಲೋಗೋ

ಪ್ರಸ್ತುತ ಭಾರತದಲ್ಲಿ ರಾಜಕೀಯ ಅಸ್ಪೃಶ್ಯತೆ ತೊಲಗಿಸಿ, ಮುಖ್ಯಮಂತ್ರಿ ಪ್ರಧಾನ ಮಂತ್ರಿ-ವೆಂಕಟಗಿರಿಯಯ್ಯ

Leave a Comment