ಪಾಲನೆ ನ್ಯೂಸ್
ಸೋಮವಾರಪೇಟೆ: ರಾಜ್ಯ ಸರ್ಕಾರ ಬಡವರು ಹಾಗೂ ಕೂಲಿ ಕಾರ್ಮಿಕರ ಬಿಪಿಎಲ್ ಪಡಿತರ ಚೀಟಿಗಳನ್ನು ರದ್ದು ಪಡಿಸಿರುವುದನ್ನು ಖಂಡಿಸಿ ಭಾರತೀಯ ಜನತಾ ಪಾರ್ಟಿಯ ಸೋಮವಾರಪೇಟೆ ಮಂಡಲ ಯುವ ಮೋರ್ಚಾ ವತಿಯಿಂದ ಪಟ್ಟಣದ ತಹಸಿಲ್ದಾರ್ ಕಚೇರಿ ಎದುರು ಪ್ರತಿಭಟನೆ ನಡೆಯಿತು. ನಂತರ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾ ಡಿದ ಯುವ ಮೋರ್ಚಾ ಜಿಲ್ಲಾಧ್ಯಕ್ಷ ಮಹೇಶ್ ತಿಮ್ಮಯ್ಯ, ಕೊಡಗು ಜಿಲ್ಲೆಯಲ್ಲಿ ಸಾವಿರಾರು ಬಿಪಿಎಲ್ ಪಡಿತರ ಕಾರ್ಡ್ ಗಳು ರದ್ದಾಗಿದ್ದು, ಸೋಮವಾರ ಪೇಟೆ ತಾಲ್ಲೂಕು ವ್ಯಾಪ್ತಿಯಲ್ಲಿ 975 ಬಿಪಿಎಲ್ ಕಾರ್ಡ್‌ಗಳನ್ನು ರದ್ದು ಮಾಡಲಾಗಿದೆ.
ಇದರಲ್ಲಿ ಬಿಪಿಎಲ್ ಕಾರ್ಡ್ಗಳನ್ನು ಹೊಂದಲು ಅರ್ಹವಾಗಿರುವ ಎಷ್ಟೋ ಕುಟುಂಬಗಳು ತಮ್ಮ ಪಡಿತರ ಚೀಟಿಯನ್ನು ಕಳೆದುಕೊಂಡು ಸರ್ಕಾರದ ಸೌಲಭ್ಯಗಳಿಂದ ವಂಚಿತವಾಗಿ ಅಸಹಾಯಕತನದಿಂದ ಪರ ದಾಡುವ ಸ್ಥಿತಿ ನಿರ್ಮಾಣವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಬಿಜೆಪಿ ಸೋಮವಾರಪೇಟೆ ಮಂಡಲ ಯುವ ಮೋರ್ಚಾದಿಂದ ಪ್ರತಿಭಟನೆ ಗ್ರಾಮೀಣ ಭಾಗದಲ್ಲಿ ಕೂಡ ರೈತರ ಪಡಿ ತರಕಾರ್ಡ್ ಗಳು ರದ್ದಾಗಿವೆ. ತಾಲ್ಲೂಕಿನ ಚೌಡ್ಲು ಗ್ರಾಪಂ ವ್ಯಾಪ್ತಿಯ 95 ಕಾರ್ಡ್, ಶನಿವಾರ ಸಂತೆ 92. ಕೊಡ್ಲಿಪೇಟೆ 68, ಶಾಂತಳ್ಳಿ 63 ಗೌಡಳಿ 55, ಮಾದಾಪುರ 51, ಟೌನ್ ಪಂಚಾ ಯಿತಿ ವ್ಯಾಪ್ತಿಯ 83 ಸೇರಿದಂತೆ ಸೋಮವಾರ ಪೇಟೆ ತಾಲ್ಲೂಕಿನ ಸುಮಾರು 975 ಕಾರ್ಡ್ಗಳನ್ನು ಅನರ್ಹಗೊಳಿಸಲಾಗಿದೆ.

ಬಿಪಿಎಲ್ ಕಾರ್ಡ್ಗಳನ್ನು ಹೊಂದಲು ಬೇಕಿರುವ ಮಾನ ದಂಡವನ್ನು ಕೊಡಗು ಜಿಲ್ಲೆಗೆ ಸ್ವಲ್ಪ ರಿಯಾಯಿತಿ ಮಾಡಿಕೊಡಬೇಕು ಮನವಿ ಸ್ವೀಕರಿಸಿ ಮಾತನಾಡಿದ ತಹಸಿಲ್ದಾರ್ ಕೃಷ್ಣಮೂರ್ತಿ, ಇವರೆಗೆ 1,032 ಅರ್ಜಿಗಳನ್ನು ಅನರ್ಹಗೊಳಿಸಿ ಬಿಪಿಎಲ್ ನಿಂದ ಎಪಿಎಲ್ ಕಾರ್ಡ್ ಮಾಡಲಾಗಿದೆ. ಸರ್ಕಾರದ ನಿಯಮನುಸಾರ ಆದಾಯ ತೆರಿಗೆ ಪಾವತಿ, ಸರ್ಕಾರಿ ಕೆಲಸ, 6 ಎಕರೆಗಿಂತ ಹೆಚ್ಚು ಜಮೀನು ಇರಬಾರದು ಎಂಬ ಮಾನ ದಂಡವನ್ನು ಮಾಡಿದ್ದು, ಅದರ ಅನ್ವಯ ಕಾರ್ಡ್ ಗಳನ್ನು ಅನರ್ಹಗೊಳಿಸಲಾಗಿದೆ. ಸರ್ಕಾರದಿಂದ ಮತ್ತೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದ್ದು, ಬಿಪಿಎಲ್ ಕಾರ್ಡ್ ಇದ್ದು ನಂತರ ರದ್ದಾಗಿದ್ದಲ್ಲಿ ಅವರು ಮತ್ತೆ ಅಗತ್ಯ ದಾಖಲೆಗಳೊಂದಿಗೆ 45 ದಿನದೊಳಗೆ ತಹಸಿಲ್ದಾರ್ ಅವರಿಗೆ ಮನವಿ ಸಲ್ಲಿಸಿದ್ದಲ್ಲಿ ಪರಿಶೀಲನೆ ನಡೆಸಲಾಗುತ್ತಿದೆ.
ಇವರೆಗೆ 255 ಅರ್ಜಿಗಳನ್ನು ಸ್ವೀಕರಿಸಲಾಗಿದ್ದು, 90 ಅರ್ಜಿ ಗಳನ್ನು ಉಪನಿರ್ದೇಶಕರ ಕಚೇರಿಗೆ ಕಳಿಸಲಾ ಗಿದೆ. ಉಳಿದ 165 ಅರ್ಜಿಗಳನ್ನು ಸ್ಥಳ ಪರಿಶೀಲಿಸಿ ಬಗೆಹರಿಸಲಾಗುವುದು ಎಂದರು. ಯುವ ಮೋರ್ಚಾ ಸೋಮವಾರಪೇಟೆ ಮಂಡಲ ಅಧ್ಯಕ್ಷ ಮೋಹಿತ್ ತಿಮ್ಮಯ್ಯ, ಜಿಲ್ಲಾ ರೈತ ಮೋರ್ಚಾ ಕಾರ್ಯದರ್ಶಿ ಶರತ್ ಚಂದ್ರ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಮನು ಕುಮಾರ್ ರೈ, ಪಿ.ಕೆ.ಚಂದ್ರು, ದರ್ಶನ್ ಜೋಯಪ್ಪ, ಬಿ.ಜೆ.ದೀಪಕ್, ಮೋಕ್ಷಿತ್, ಶ್ರೀನಿಧಿ ಲಿಂಗಪ್ಪ, ಸೋಮೇಶ್, ಶಿಶಿರ್, ಭಾಸ್ಕರ್ ನಾಯಕ್, ಮಂಜುಳಾ ಸುಬಹ್ಮಣಿ, ತಂಗಮ್ಮ, ಚಂದ್ರಶೇಖರ್ ಹೇರೂರು, ಕೃಷ್ಣಪ್ಪ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
✅ಪಾಲನೆ.ಇನ್ ವಾಟ್ಸ್ ಆ್ಯಪ್ ಗುಂಪಿಗೆ ಸೇರಿರಿ ನ್ಯೂಸ್ & ವ್ಯೂಸ್ ಓದಿರಿ. ಆಲೋಚಿಸಿ. ಸ್ಪಂದಿಸಿ.
https://chat.whatsapp.com/H1gUYgrzvnQGZAhIQSGMHn
