ಪಾಲನೆ ನ್ಯೂಸ್

ಬೆಂಗಳೂರು: ನಮ್ಮ ಮೆಟ್ರೋದಲ್ಲಿ ಪ್ರಯಾಣಿಸುವಾಗ ಜೇಬಿನಲ್ಲಿ ಮೆಟ್ರೋದಲ್ಲಿ ಆಟಿಕೆ ಗನ್ ಇಡ್ಕೊಂಡು ಪ್ರಾಂಕ್: ಒಬ್ಬ ವಶಕ್ಕೆ. ಪಾಂಡಿಚೇರಿ ಮೂಲದ ಅರ್ಜುನ್ ಎಂಬಾತನನ್ನು ವಶಕ್ಕೆಪಡೆದು, ಕ್ಷಮಾಪಣಾಪತ್ರ ಬರೆಸಿಕೊಂಡು ಆತನಿಗೆ ಎಚ್ಚರಿಕೆ ನೀಡಿ ಕಳು ಹಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಫೆ.6 ರಂದು ಅರ್ಜುನ್ ದೀಪಾಂಜಲಿ ನಗರ ದಿಂದನಮ್ಮ ಮೆಟ್ರೋದಲ್ಲಿ ಪ್ರಯಾಣಿಸುವಾಗ ಪ್ರಾಂಕ್ ವಿಡಿಯೋ ಮಾಡಲು ತನ್ನ ಜೇಬಿನಲ್ಲಿ ಆಟಿಕೆಯ ಗನ್ ಇಟ್ಟುಕೊಂಡಿದ್ದ. ಇದನ್ನು ಗಮನಿಸಿದ ಸಹ ಪ್ರಯಾಣಿಕರು ಗನ್ ಕಂಡು ಕೋಪಗೊಂಡು ಪೊಲೀಸರಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಬಂದ ಪೊಲೀಸರು ಮತ್ತು ಮೆಟ್ರೋ ಅಧಿಕಾರಿಗಳು ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದು, ಆತನಿಂದ ಕ್ಷಮಾಪಣಾ ಪತ್ರ ಬರೆಸಿಕೊಂಡಿದ್ದಾರೆ.
✅ಪಾಲನೆ.ಇನ್ ವಾಟ್ಸ್ ಆ್ಯಪ್ ಗುಂಪಿಗೆ ಸೇರಿರಿ ನ್ಯೂಸ್ & ವ್ಯೂಸ್ ಓದಿರಿ. ಆಲೋಚಿಸಿ. ಸ್ಪಂದಿಸಿ.
https://chat.whatsapp.com/H1gUYgrzvnQGZAhIQSGMHn

