NEWS

ಎನ್‌ಟಿಆರ್ ನೋಡಲು ಮುಗಿಬಿದ್ದ ಫ್ಯಾನ್ಸ್

ಪಾಲನೆ ನ್ಯೂಸ್

ಬೆಂಗಳೂರು : ನಟ ಜೂನಿಯ‌ರ್ ಎನ್‌ಟಿಆರ್ ದರ್ಶನಕ್ಕೆ ಮುಗಿಬಿದ್ದ ಫ್ಯಾನ್ಸ್, ಪೊಲೀಸರಿಂದ ಲಾಠಿ ಪ್ರಹಾರ ಖಾಸಗಿ ಆಸ್ಪತ್ರೆ ಉದ್ಘಾಟನೆ ವೇಳೆ ಜನ ನೂಕುನುಗ್ಗಲು ಬೆಂಗಳೂರು ಪರಪ್ಪನ ಅಗ್ರಹಾರ ಸಮೀಪದ ನೂತನ ವಾಗಿ ನಿರ್ಮಾಣವಾಗಿರುವ ಖಾಸಗಿ ಆಸ್ಪತ್ರೆ ಉದ್ಘಾಟನೆಗೆ ಭಾನುವಾರ ಬಂದಿದ್ದ ಟಾಲಿ ವುಡ್ ನಟ ಜೂನಿಯರ್‌ಎನ್ ಟಿಆರ್‌ಅವ ರನ್ನು ನೋಡಲು ಅಭಿಮಾನಿಗಳು ಮುಗಿಬಿ ದ್ದಿದ್ದು, ಈ ವೇಳೆ ಅಭಿಮಾನಿ ಗಳನ್ನು ಚದುರಿಸಲುಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದ್ದಾರೆ.

ನಟನನ್ನು ನೋಡಲು ಭಾರಿ ಸಂಖ್ಯೆಯಲ್ಲಿ ಅಭಿಮಾನಿಗಳು ಜಮಾಯಿ ಸಿದ್ದರಿಂದ ನೂಕುನುಗ್ಗಲು ಉಂಟಾಗಿತ್ತು. ಜೂನಿಯರ್‌ಎನ್ ಟಿಆರ್ ಅವರನ್ನು ಹತ್ತಿರದಿಂದ ನೋಡ ಬೇಕೆಂಬ ಆಸೆಯಿಂದ ಹಲ ಮಂದಿ ಆಸ್ಪತ್ರೆಯ ಒಳಗೆ ನುಗ್ಗಿದ್ದರು. ಅದರಿಂದ ಆಸ್ಪತ್ರೆಯ ಎಸ್ಕಲೇಟರ್‌ಗೆ ಹಾನಿಯಾ ಯಿತು. ಕೆಲವರು ಬ್ಯಾರಿಕೇಡ್ ಹಾಗೂ ಕಾಂಪೌಂಡ್ ಹಾರಿ ಒಳಕ್ಕೆ ನುಗ್ಗಿದ್ದರು. ಹೀಗಾಗಿ ಲಘು ಲಾಠಿ ಪ್ರಹಾರವನ್ನು ನಡೆಸಿ ಗುಂಪನ್ನು ಚದುರಿಸಲಾಗಿದೆ. ಪರಪ್ಪನ ಅಗ್ರಹಾರ ಬಳಿಯ ಖಾಸಗಿ ಆಸ್ಪತ್ರೆ ಉದ್ಘಾಟ ನೆಗೆ ಬಂದಿದ್ದ ನಟ ನಂತರ ಬಿಗಿ ಭದ್ರತೆಯ ನಡುವೆ ಜೂನಿಯರ್‌ಎನ್ ಟಿಆರ್‌ಅವರನ್ನು ಪೊಲೀಸರು ಕರೆದೊ ಯ್ದರು. ಇದಕ್ಕೂ ಮೊದಲು ಮಹದೇವಪು ರದಲ್ಲೂ ಮತ್ತೊಂದು ಘಟಕವನ್ನು ಜ್ಯೂನಿಯ‌ರ್ ಎನ್ ಟಿಆ‌ರ್ ಅವರು ಉದ್ಘಾಟನೆ ನೆರವೇರಿಸಿದ್ದರು.

ಪಾಲನೆ.ಇನ್ ವಾಟ್ಸ್ ಆ್ಯಪ್ ಗುಂಪಿಗೆ ಸೇರಿರಿ ನ್ಯೂಸ್ & ವ್ಯೂಸ್ ಓದಿರಿ. ಆಲೋಚಿಸಿ. ಸ್ಪಂದಿಸಿ.
https://chat.whatsapp.com/H1gUYgrzvnQGZAhIQSGMHn

Related posts

ಯುವನಿಧಿ ಯೋಜನೆ ಕುರಿತು ಹೆಚ್ಚಿನ ಪ್ರಚಾರ ಮಾಡಿ: ಚಿಕ್ಕಲಿಂಗಯ್ಯ

ಮಾಡು ಇಲ್ಲವೆ ಮಡಿ ಪಂದ್ಯಕ್ಕೆ ಸಜ್ಜಾದ ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಕೋಲ್ಕತಾ ನೈಟ್ ರೈಡರ್ಸ್

ಡಿ. 21ರಿಂದ 24ರವರೆಗೆ ರಾಷ್ಟ್ರೀಯ ಪಲ್ಸ್ ಪೋಲಿಯೊ ಕಾರ್ಯಕ್ರಮ : ವಿಶ್ವನಾಥ್

Leave a Comment