NEWS

ಮಮತಾ ವಿರುದ್ಧ ವಾಗ್ದಾಳಿ ಮುಂದುವರೆಸಿರುವ ಪ್ರಧಾನಿ ಮೋದಿ

ಪಾಲನೆ ನ್ಯೂಸ್

ರಾಷ್ಟ್ರಪತಿಗೆ ನೀರಿಲ್ಲದ ಟಾಯ್ಲೆಟ್? ‘ದೇಶಾದ್ಯಂತ ಮಹಿಳಾ ದಿನ ಆಚರಿಸುತ್ತಿರುವಾಗ, ಬಂಗಾಳದ ಟಿಎಂಸಿ ಸರ್ಕಾರ ರಾಷ್ಟ್ರಪತಿಗಳನ್ನು ಅವಮಾನಿಸಿದ್ದು ಕಳವಳಕಾರಿ. ಒಬ್ಬ ಬುಡಕಟ್ಟು ಮಹಿಳೆಯನ್ನು, ರಾಷ್ಟ್ರಪತಿಗಳನ್ನು ಅವಮಾನಿಸಿದ್ದಕ್ಕಾಗಿ ರಾಜ್ಯದ ಪ್ರಬುದ್ಧ ಜನರು ಟಿಎಂಸಿಯನ್ನು ಎಂದಿಗೂ ಕ್ಷಮಿಸುವುದಿಲ್ಲ’ ಎಂದಿದ್ದಾರೆ.

ಇದರ ನಡುವೆಯೇ ಕೇಂದ್ರದ ಆರೋಪಕ್ಕೆ ತಿರುಗೇಟು ನೀಡಿರುವ ಪಶ್ಚಿಮ ಬಂಗಾಳ ಸಿಎಂ, ‘2024ರ ಭಾರತ ರತ್ನ ಪ್ರಧಾನ ವೇಳೆ ರಾಷ್ಟ್ರಪತಿ ನಿಂತಿರುವಾಗ ಪ್ರಧಾನಿ ಮೋದಿ ಕುಳಿತೇ ಇದ್ದ ಫೋಟೋ ಟ್ವಿಟ್ ಮಾಡುವ ಮೂಲಕ ರಾಷ್ಟ್ರಪತಿಗೆ ಅವಮಾನ ಮಾಡುವುದು ಪ್ರಧಾನಿ ಮೋದಿಯೇ ಹೊರತೂ ತಾವಲ್ಲ ಎಂದಿದ್ದಾರೆ.

ನೋಟಿಸ್‌ ಜಾರಿ: ಶನಿವಾರ ಅಂತಾರಾಷ್ಟ್ರೀಯ ಸೆಂತಾಲ್ ಸಮ್ಮೇಳನದಲ್ಲಿ ಭಾಗವಹಿಸಲು ಮುರ್ಮು, ಸಿಲಿಗುರಿಗೆ ಆಗಮಿಸಿದ್ದರು. ಈ ವೇಳೆ ಶಿಷ್ಟಾಚಾರದಂತೆ ಮುಖ್ಯಮಂತ್ರಿ ಅಥವಾ ಸಚಿವರು ಬಂದಿರಲಿಲ್ಲ. ಮೇಯರ್ ಮೂಲಕ ರಾಷ್ಟ್ರಪತಿಗೆ ಸ್ವಾಗತ ಕೋರಲಾಗಿತ್ತು. ಜೊತೆಗೆ ರಾಷ್ಟ್ರಪತಿ ಮುರ್ಮು ಅವರಿಗೆ ವ್ಯವಸ್ಥೆ ಮಾಡಲಾಗಿದ್ದ ಶೌಚಾಲಯದಲ್ಲಿ ನೀರಿನ ವ್ಯವಸ್ಥೆ ಇರಲಿಲ್ಲ. ಅವರನ್ನು ಸಹ ಕಸದಿಂದ ತುಂಬಿಹೋಗಿತ್ತು ಎಂಬ ಆರೋಪ ಕರೆದೊಯ್ಯಲು ಆಡಳಿತವು ಆಯ್ಕೆ ಮಾಡಿದ ಮಾರ್ಗವು ಕೇಳಿಬಂದಿದೆ.

ಈ ಹಿನ್ನೆಲೆಯಲ್ಲಿ ಮುರ್ಮು ಅವರ ಭೇಟಿ ಸಮಯದಲ್ಲಿ ಶಿಷ್ಟಾಚಾರ, ಸ್ಥಳ ಮತ್ತು ಸಂಚಾರ ವ್ಯವಸ್ಥೆಗಳಿಗೆ ಸಂಬಂಧಿಸಿದ ನಿಯಮಗಳ ಉಲ್ಲಂಘನೆ ಕುರಿತು ಪ್ರತಿಕ್ರಿಯೆ ನೀಡುವಂತೆ ಕೇಂದ್ರ ಸರ್ಕಾರ ಬಂಗಾಳ ಸರ್ಕಾರಕ್ಕೆ ನೋಟಿಸ್‌ನಲ್ಲಿ ಸೂಚಿಸಿದೆ. ದೀದಿ ತಿರುಗೇಟು: ‘ನಾವು ರಾಷ್ಟ್ರಪತಿ ಸ್ಥಾನ ಮತ್ತು ಸಂವಿಧಾನಕ್ಕೆ ಸಂಪೂರ್ಣ ಗೌರವ ನೀಡುತ್ತೇವೆ. ಅವರನ್ನು ನಮ್ಮ ತಾಯಿಯೆಂದು ಭಾವಿಸುತ್ತೇವೆ.

ವಿಧಾನಸಭಾ ಚುನಾವ ಣೆಗೂ ಮುನ್ನ ನಮ್ಮನ್ನು ಗುರಿಯಾಗಿಸಲಾಗಿದೆ. ರಾಷ್ಟ್ರಪತಿ ಗಳು ನಿಂತಿರುವಾಗ ಪ್ರಧಾನಿ ಮೋದಿ ಕುಳಿತಿರುವುದನ್ನು ಈ ಚಿತ್ರದಲ್ಲಿ ನೋಡಬಹುದು. ರಾಷ್ಟ್ರಪತಿಗಳನ್ನು ಅವಮಾನಿಸುವ ಸಂಸ್ಕೃತಿ ಬಿಜೆಪಿಯದ್ದೇ ಹೊರತು, ನಮ್ಮದಲ್ಲ’ ಎಂದಿದ್ದಾರೆ. ಇದಕ್ಕೆ ಪೂರಕವಾಗಿ 2024ರಲ್ಲಿ ಬಿಜೆಪಿ ಹಿರಿಯ ನಾಯಕ ಎಲ್.ಕೆ. ಅಡ್ವಾಣಿಯವರಿಗೆ ಭಾರತರತ್ನ ಪ್ರಶಸ್ತಿ ನೀಡುವ ಸಂದರ್ಭದಲ್ಲಿ ಪ್ರಧಾನಿ ಮೋದಿಯವರು ಕುಳಿತಿರುವ ಹಾಗೂ ರಾಷ್ಟ್ರಪತಿಗಳು ನಿಂತಿರುವ ಫೋಟೊವೊಂದನ್ನು ಅವರು ಪ್ರದರ್ಶಿಸಿದ್ದಾರೆ.

✅ಪಾಲನೆ.ಇನ್ ವಾಟ್ಸ್ ಆ್ಯಪ್ ಗುಂಪಿಗೆ ಸೇರಿರಿ ನ್ಯೂಸ್ & ವ್ಯೂಸ್ ಓದಿರಿ. ಆಲೋಚಿಸಿ. ಸ್ಪಂದಿಸಿ.
https://chat.whatsapp.com/H1gUYgrzvnQGZAhIQSGMHn

Related posts

ಬೂದನೂರು ಉತ್ಸವ 2026 ರಲ್ಲಿ ಹೆಲಿ ಟೂರಿಸಂ ಆಯೋಜನೆ ಮಾಡುವ ಪ್ರಯುಕ್ತ ಸ್ಥಳ ಪರಿಶೀಲನೆ

ವೈರಮುಡಿ ಬ್ರಹ್ಮೋತ್ಸವದಲ್ಲಿ ಭಕ್ತಾಧಿಗಳಿಗೆ ಮೂಲ ಸೌಕರ್ಯಗಳನ್ನು ಒದಗಿಸಲು ಅಗತ್ಯ ಕ್ರಮವಹಿಸಿ : ದರ್ಶನ್ ಪುಟ್ಟಣ್ಣಯ್ಯ

ಭಾರತ ಅಮೆರಿಕಕ್ಕೆ ಸಂಪೂರ್ಣ ಶರಣಾಗಿದೆ : ಸಿಎಂ

Leave a Comment