NEWS

ಮಹಿಳಾ ದಿನಾಚರಣೆ, ಕಾದಂಬರಿ ಬಿಡುಗಡೆ, ಮಹಿಳಾ ಸಾಧಕಿಯರಿಗೆ ಸನ್ಮಾನ ಇಂದು ಸಂಜೆ

ಕನ್ನಿಕ ಶಿಲ್ಪ ನವೋದಯ ಎಜುಕೇಷನ್‌ ಟ್ರಸ್ಟ್ ಕಾರ್ಯಕ್ರಮ

ಪಾಲನೆ ನ್ಯೂಸ್

ಮಂಡ್ಯ: ನಗರದ ಕನ್ನಿಕ ಶಿಲ್ಪ ನವೋದಯ ಎಜುಕೇಷನ್‌ ಟ್ರಸ್ಟ್(‌ರಿ.) ವತಿಯಿಂದ ಅಂತಾರಾಷ್ಡ್ರೀಯ ಮಹಿಳಾ ದಿನಾಚರಣೆ – 2026, ಕಾದಂಬರಿ ಬಿಡುಗಡೆ ಹಾಗೂ ಮಹಿಳಾ ಸಾಧಕರಿಗೆ ಸನ್ಮಾನ ಅನ್ನು ಟ್ರಸ್ಟ್ ಆವರಣದಲ್ಲಿ ಸಂಜೆ 5 ಗಂಟೆಗೆ ಹಮ್ಮಿಕೊಳ್ಳಲಾಗಿದೆ.

ಕಾರ್ಯಕ್ರಮದ ಉದ್ಘಾಟನೆಯನ್ನು ನಿವೃತ್ತ ಪ್ರಾಧ್ಯಾಪಕಿ ಪ್ರೊ. ಎಂ.ಶ್ರೀಲತಾ ನೆರವೇರಿಸಲಿದ್ದು, ಮೈಸೂರಿನ ಎಂ.ಐ.ಟಿ.ಕಾಲೇಜು ಸಹಾಯಕ ಪ್ರಾಧ್ಯಾಪಕಿ ಪ್ರೊ.ಜಿ. ಉಷಾರಾಣಿ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ.

ಹೆಚ್‌ ಆರ್.‌ ಕನ್ನಿಕ ಅವರ ಮೊದಲ ಕಾದಂಬರಿ ನೀ ಮಾಯೆಯೋ ನಿನ್ನೊಳು ಮಾಯೆಯೊ ಕಾದಂಬರಿ ಬಿಡುಗಡೆಯನ್ನು ಮಳವಳ್ಳಿಯ ಶಾಂತಿ ಕಾಲೇಜು ಕನ್ನಡ ಪ್ರಾಧ್ಯಾಪಕಿ ಅನಿತಾ ಸಿ. ಅವರು ನೆರವೇರಿಸಿ ಕೃತಿ ಕುರಿತು ಮಾತನಾಡಲಿದ್ದಾರೆ.

ಮಹಿಳಾ ಸಾಧಕರಿಗೆ ಸನ್ಮಾನ :

ಇದೇ ಸಂದರ್ಭದಲ್ಲಿ ನಾನಾ ಕ್ಷೇತ್ರ ಮಹಿಳಾ ಸಾಧಕರಿಗೆ ಸನ್ಮಾನಿಸಲಾಗುವುದು. ಡಾ.ಛಾಯಾ ಆರ್.ಪಿ. (ಜಾನಪದ), ಡಾ. ಮಂಜುಳಾ ಜಿ.ಎ.(ವೈದ್ಯಕೀಯ), ಡಾ. ದೇವಿಕಾ ಎನ್.ಎಸ್.‌(ಸಾಹಿತ್ಯ), ವರುಣ ಹೆಚ್. ಆರ್.‌(ಕೃಷಿ), ಶ್ವೇತಾ ಎಂ.ಯು.(ನಿರೂಪಣೆ), ಲಕ್ಷ್ಮಿ (ಪೌರ ಕಾರ್ಮಿಕ), ವಸಂತಾ ಟಿ.ಸಿ.(ಸಮಾಜ ಸೇವೆ), ವನಿತಾ ಎಸ್.‌ಎಸ್.‌(ರಂಗಭೂಮಿ), ವಾಣಿ ಜಿ.ಎನ್.‌(ಪ್ರಸಾದನ), ರುಕ್ಮಿಣಿ ವೈ.ಜಿ.(ಪೊಲೀಸ್‌), ಅರುಣ ಕೆಂಪರಾಜು ಎಸ್.‌ ಎನ್.‌(ಸಂಘಟನೆ), ವಾಣಿಶ್ರೀ ಎಸ್.‌ (ಶಿಕ್ಷಣ) ಹಾಗೂ ಫಾತಿಮಾ ಎಂ.(ಶುಶ್ರೂಷಕಿ) ಸನ್ಮಾನ ಸ್ವೀಕರಿಸಲಿದ್ದಾರೆ.

ಪಾಲನೆ.ಇನ್ ವಾಟ್ಸ್ ಆ್ಯಪ್ ಗುಂಪಿಗೆ ಸೇರಿರಿ ನ್ಯೂಸ್ & ವ್ಯೂಸ್ ಓದಿರಿ. ಆಲೋಚಿಸಿ. ಸ್ಪಂದಿಸಿ.
https://chat.whatsapp.com/H1gUYgrzvnQGZAhIQSGMHn

Related posts

ಕೃಷಿ ಇಲಾಖೆಯ ಸೌಲಭ್ಯಗಳ ಬಗ್ಗೆ ವ್ಯಾಪಕ ಅರಿವು ಮೂಡಿಸಲು ಕೃಷಿ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದ ಜಿ. ಪಂ. ಸಿಇಒ

ರೈತರ ಬಗೆಗೆ ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ನಿರ್ಲಕ್ಷ ಜಿಲ್ಲಾಧಿಕಾರಿ ಕಚೇರಿ ಮುಂದೆ ರೈತರ ಪ್ರತಿಭಟನೆ

18 ವರ್ಷದೊಳಗಿನವರಿಗೆ ಬಾಲಾಪರಾಧಿಯಡಿ ಸಮಾನ ಶಿಕ್ಷೆ

Leave a Comment