ಪಾಲನೆ ನ್ಯೂಸ್
ಗುಂಡ್ಲುಪೇಟೆ : ತಾಲೂಕಿನ ವೀರನಪುರ ಗ್ರಾಮದಲ್ಲಿ ರಾಜ್ಯ ಅರಿಶಿಣ ಬೆಳೆಗಾರರ ಒಕ್ಕೂಟ ಮತ್ತು ಶ್ರಮಸಂಜಾತ ರೈತ ಉತ್ಪಾದಕರ ಸಂಸ್ಥೆ ವತಿಯಿಂದ ಹಮ್ಮಿಕೊಂಡಿದ್ದ ವಿಜ್ಞಾನ ಸಂಜೆ ಮತ್ತು ಕೃಷಿ ವಿಜ್ಞಾನಿಗಳಗ್ರಾಮ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ತಾಲೂಕಿನಲ್ಲಿ ರೈತರು ಆಸಕ್ತಿಗೆ ಅನುಗುಣವಾಗಿ ಬೆಳೆ ಮಾಡುವುದನ್ನು ರೂಢಿಸಿಕೊಂಡು ಬಂದಿದ್ದೀರಿ.
ಆದರೆ ಬೆಳೆ ಮಾಡುವ ಮೊದಲು ಮಣ್ಣು ಪರೀಕ್ಷೆ ಮಾಡಿಸಿದರೆ ಅನುಕೂಲವಾಗುತ್ತದೆ ಎಂದು ತಿಳಿಸಿದರು. ರೈತರು ಬೆಳೆಯುವ ಬೆಳೆಗೆ ಒದಗಿಸ
ಬೇಕಾದ ಪೋಷಕಾಂಶಗಳ ಸಮಗ್ರ ಮಾಹಿತಿ ಮಣ್ಣು ಪರೀಕ್ಷೆಯಿಂದ ದೊರೆಯುತ್ತದೆ. ಮಣ್ಣು ಪರೀಕ್ಷೆ ನಂತರ ಬೆಳೆಯಲ್ಲಿ ನಿರೀಕ್ಷಿತ ಇಳುವರಿ ಸಾಧ್ಯವಿದೆ.
ಆದ್ದರಿಂದ ಪ್ರತಿಯೊಬ್ಬ ರೈತರು ಮಣ್ಣು ಪರೀಕ್ಷೆ ಮಾಡಿಕೊಳ್ಳಬೇಕು ಎಂದರು. ಶ್ರಮ ಸಂಜಾತ ರೈತ ಉತ್ಪಾದಕರ ಸಂಸ್ಥೆ ಅಧ್ಯಕ್ಷ ಮತ್ತು ಅರಿಶಿನ ಬೆಳೆಗಾರರ
ಒಕ್ಕೂಟ ಸಂಚಾಲಕ ಎಸ್.ಎಂ. ನಾಗಾರ್ಜುನ್ ಕುಮಾರ್ ಮಾತನಾಡಿ, ಬದಲಾದ ಸನ್ನಿವೇಶದಲ್ಲಿ ಮಾನವ ಶ್ರಮದ ಮೂಲಕ ಕೃಷಿ ನಿರ್ವಹಿಸುವುದು
ಕಷ್ಟವಾಗುತ್ತದೆ.

ಆದ್ದರಿಂದ ರೈತರು ವೈಜ್ಞಾನಿಕ ಪದ್ಧತಿಯ ಮಹತ್ವ ತಿಳಿದುಕೊಳ್ಳಬೇಕು ಎಂದು ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಕೃಷಿ ವಿಜ್ಞಾನಿ
ತನುಜಾ, ಗ್ರಾಪಂ ಮಾಜಿ ಸದಸ್ಯ ಗುರು ಪ್ರಸಾದ್, ನಿರ್ದೇಶಕ ವಿ.ಎನ್.ಚಿದಾನಂದಸ್ವಾಮಿ, ನಾಗರಾಜು, ಮಂಜಣ್ಣ, ಬಸವಣ್ಣ, ಶಿವಣ್ಣ, ಮಹೇಶ್, ಮಂಜು
ನಾಥ್, ಗುಂಡಣ್ಣ, ಚಂದ್ರಪ್ಪ, ಶಂಭಪ್ಪ ಹಾಜರಿದ್ದರು.
✅ಪಾಲನೆ.ಇನ್ ವಾಟ್ಸ್ ಆ್ಯಪ್ ಗುಂಪಿಗೆ ಸೇರಿರಿ ನ್ಯೂಸ್ & ವ್ಯೂಸ್ ಓದಿರಿ. ಆಲೋಚಿಸಿ. ಸ್ಪಂದಿಸಿ.
https://chat.whatsapp.com/H1gUYgrzvnQGZAhIQSGMHn
