NEWS

ಒಳ ಮೀಸಲು ವರ್ಗೀಕರಣಕ್ಕೆ ಒತ್ತಾಯ

ಪಾಲನೆ ನ್ಯೂಸ್

ಬೆಂಗಳೂರು: ಒಳ ಮೀಸಲಾತಿ ಪ್ರಮಾಣವನ್ನು ಶೇ. 50ರ ಅಡಿಯೇ ಪರಿಶಿಷ್ಟ ಜಾತಿಯವರಿಗೆ ವರ್ಗೀಕರಣ ಮಾಡಿ ಸರ್ಕಾರಿ ಹುದ್ದೆಗಳನ್ನು ಭರ್ತಿ ಮಾಡಲು ರಾಜ್ಯ ಸರ್ಕಾರ ಮುಂದಾಗ ಬೇಕೆಂದು ದಲಿತ ಸಮುದಾಯದ ಎಡಗೈ ಬಣದ ಸಚಿವರು ಮತ್ತು ಮುಖಂಡರು ಒತ್ತಾಯಿಸಿದ್ದಾರೆ. ‌

ಗುರುವಾರ ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಈ ಕುರಿತು ರಾಜ್ಯ ಸರ್ಕಾರದಿಂದ ಸ್ಪಷ್ಟವಾದ ನಿರ್ಧಾರ ಹೊರಬಾರದೆ ಇದ್ದರೆ, ಮುಂದಿನ ಹೋರಾಟಗಳ ಬಗ್ಗೆ ತೀರ್ಮಾನಿಸುವುದಾಗಿ ಎಚ್ಚರಿಕೆ ಯನ್ನೂ ನೀಡಿದ್ದಾರೆ. ಮಾದಿಗ ಸಮುದಾಯಕ್ಕೆ ಒಳಮೀಸಲು ಕಲ್ಪಿಸುವ ವಿಷಯವಾಗಿ ಡಿಸಿಎಂ ಡಿ.ಕೆ.ಶಿವ ಕುಮಾರ್ ಅವರನ್ನು ಸಚಿವ ಕೆ.ಎಚ್.ಮುನಿಯಪ್ಪ ಭೇಟಿ ಮಾಡಿ ಚರ್ಚೆ ನಡೆಸಿದರು.

ಮಂಗಳವಾರ ಪತ್ರಿಕಾಗೋಷ್ಠಿ ನಡೆಸಿದ ಸಚಿವರಾದ ಕೆ.ಎಚ್.ಮುನಿ ಯಪ್ಪ ಆರ್.ಬಿ.ತಿಮ್ಮಾಪುರ ಶಾಸಕ ಬಸವಂತಪ್ಪ, ಮಾಜಿ ಸಚಿವ ಹೆಚ್. ಆಂಜನೇಯ, ಮಾಜಿ ಸಂಸದರಾದ ಚಂದ್ರಪ್ಪ, ಎಲ್.ಹನುಮಂತಯ್ಯ, ಆ‌ರ್.ಧರ್ಮಸೇನ ಮತ್ತಿತರರು ಸರ್ಕಾರದಿಂದಲೇ ನಮ್ಮ ಸಮು ದಾಯಕ್ಕೆ ಅನ್ಯಾಯವಾಗುತ್ತದೆ ಎಂಬ ಅನುಮಾನ ವ್ಯಕ್ತಪಡಿಸಿದರು.

4 ವಿಧಾನಸಭೆ ಚುನಾವಣೆಗೂ ಮುನ್ನ ಒಳ ಮೀಸಲಾತಿ ಯನ್ನು ಜಾರಿ ಮಾಡುತ್ತೇವೆ ಎಂದು ಸರ್ಕಾರ ರಾಜ್ಯದ ಜನತೆಗೆ ಆಶ್ವಾಸನೆ ಕೊಟ್ಟಿತ್ತು. ಅದರಂತೆ ನಮ್ಮ ಸಮು ದಾಯದವರು ಕಾಂಗ್ರೆಸ್ ಪಕ್ಷದ ಮೇಲೆ ನಂಬಿಕೆ ಇಟ್ಟು ಮತ ಹಾಕಿದ್ದಾರೆ. ಸಚಿವ ಸಂಪುಟ ಸಭೆಯಲ್ಲಿ ಸ್ಪಷ್ಟ ನಿರ್ಧಾರ ಪ್ರಕಟವಾಗದಿದ್ದರೆ ಮುಂದಿನ ಹೋರಾಟಗಳ ಬಗ್ಗೆ ತೀರ್ಮಾನಿಸುತ್ತೇವೆ. -ಎಲ್.ಹನುಮಂತಯ್ಯ ರಾಜ್ಯಸಭಾ ಮಾಜಿ ಸದಸ್ಯ.

✅ಪಾಲನೆ.ಇನ್ ವಾಟ್ಸ್ ಆ್ಯಪ್ ಗುಂಪಿಗೆ ಸೇರಿರಿ ನ್ಯೂಸ್ & ವ್ಯೂಸ್ ಓದಿರಿ. ಆಲೋಚಿಸಿ. ಸ್ಪಂದಿಸಿ.
https://chat.whatsapp.com/H1gUYgrzvnQGZAhIQSGMHn

Related posts

ಮಹಾವೀರರ ತತ್ವ ಸಿದ್ಧಾಂತಗಳನ್ನು ಜೀವನದಲ್ಲಿ ರೂಡಿಸಿಕೊಳ್ಳಿ : ಪಿ. ರವಿಕುಮಾರ್

ಜ.30 ರಂದು ಪ್ರತಿಭಟನೆ: ಹೊರ ಗುತ್ತಿಗೆ ನೌಕರರ ಎಚ್ಚರಿಕೆ

‘ಆಪ್ತ ಸಂವಾದ’ದ ಮೊದಲ ಸಂಚಿಕೆ ಫೆಬ್ರವರಿ 1

Leave a Comment