NEWS

ಎಐಟಿಎ 14 ವರ್ಷದೊಳಗಿನವರ ರ್ಯಾಂಕಿಂಗ್ ಪಟ್ಟಿಯಲ್ಲಿ ಅಗ್ರ ಶ್ರೇಯಾಂಕಿತರಾಗಿರುವ ಪದ್ಮಪ್ರಿಯಾ

ಪಾಲನೆ ನ್ಯೂಸ್

ಮೈಸೂರು: ಐಟಿಎಫ್ ಏಷ್ಯಾ 14 ಮತ್ತು ಅಂಡರ್ ಡೆವಲಪ್‌ಮೆಂಟ್ ಚಾಂಪಿಯನ್‌ಷಿಪ್ ಫೈನಲ್ ಪ್ರವೇಶಿಸಿದ ಪದ್ಮಪ್ರಿಯಾ ರಮೇಶ್‌ಕುಮಾ‌ರ್ ಸೇರಿದಂತೆ ಕರ್ನಾಟಕದ ಮೂವರು ಟೆನ್ನಿಸ್ ಪಟುಗಳು ಶ್ರೀಲಂಕಾದ ಕೊಲಂಬೋದಲ್ಲಿ ಮಾ.29ರಿಂದ ಏ.10ರವರೆಗೆ ನಡೆಯಲಿರುವ ಐಟಿಎಫ್ ಏಷ್ಯಾ 14 ಮತ್ತು ಅಂಡರ್ ಡೆವಲಪ್‌ಮೆಂಟ್ ಚಾಂಪಿಯನ್‌ಷಿಪ್-2026 ಫೈನಲ್ಸ್‌ರಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ.

ಬಾಲಕರ ವಿಭಾಗದಲ್ಲಿ ಪುನೀತ್ ಮನೋಹರ್ ಮತ್ತು ತಾನಿಷ್ ನಂದಾ, ಹಾಗೆಯೇ ಬಾಲಕಿಯರ ವಿಭಾಗದಲ್ಲಿ ಸೃಷ್ಟಿ ಕಿರಣ್ ಮತ್ತು ಪದ್ಮಪ್ರಿಯಾ ರಮೇಶ್‌ಕುಮಾರ್ ಅವರು ಆಯ್ಕೆಯಾಗಿದ್ದಾರೆ. ಅಮೃತಾ ಮುಖರ್ಜಿ ಅವರು ತಂಡದ ಕೋಚ್ ಆಗಿ ಕಾರ್ಯನಿರ್ವಹಿಸಲಿದ್ದಾರೆ. ಐಟಿಎಫ್ ಏಷ್ಯಾ 14 ಮತ್ತು ಅಂಡರ್ ಡೆವಲಪ್‌ಮೆಂಟ್ ಚಾಂಪಿಯನ್‌ಷಿಪ್ ಫೈನಲ್ಸ್‌ನ ಬಾಲಕಿಯರ ವಿಭಾಗದಲ್ಲಿ ಭಾರತವನ್ನು ಪ್ರತಿನಿಧಿಸಲಿರುವ ಎಟಿಎಫ್ ಏಷ್ಯಾ 2ನೇ ರ್ಯಾಂಕಿಂಗ್ ಹೊಂದಿರುವ ಪದ್ಮಪ್ರಿಯಾ ರಮೇಶ್ ಕುಮಾ‌ರ್ ಅವರು, ಮಲೇಷಿಯಾ ಕುಚಿಂಗ್‌ನಲ್ಲಿ ಏಪ್ರಿಲ್ 21ರಿಂದ ಏಪ್ರಿಲ್ 26ರವರೆಗೆ ನಡೆಯಲಿರುವ ಐಟಿಎಫ್ ವಿಶ್ವ ಜ್ಯೂನಿಯರ್ ಟೀಂ ಸ್ಪರ್ಧೆಯ ಫೈನಲ್ ಅರ್ಹತಾ ಪಂದ್ಯದಲ್ಲೂ ದೇಶವನ್ನು ಪ್ರತಿನಿಧಿಸಲಿದ್ದಾರೆ.

✅ಪಾಲನೆ.ಇನ್ ವಾಟ್ಸ್ ಆ್ಯಪ್ ಗುಂಪಿಗೆ ಸೇರಿರಿ ನ್ಯೂಸ್ & ವ್ಯೂಸ್ ಓದಿರಿ. ಆಲೋಚಿಸಿ. ಸ್ಪಂದಿಸಿ.
https://chat.whatsapp.com/H1gUYgrzvnQGZAhIQSGMHn

Related posts

ಯುವ ಜನತೆ ರಸ್ತೆ ಸುರಕ್ಷತಾ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು: ಡಾ. ವಿ. ಜೆ. ಶೋಭರಾಣಿ

ಏ.8ರಿಂದ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಮೌಲ್ಯಮಾಪನ ಆರಂಭ

ಡೊನಾಲ್ಡ್ ಟ್ರಂಪ್ ಅಪಘಾತದಿಂದ ಪಾರು

Leave a Comment