NEWS

ಹೆಲಿಪ್ಯಾಡ್‌ನಲ್ಲಿ ಮಾಧ್ಯಮದವರನ್ನು ಕಂಡು ಡಿಸಿಎಂ ಡಿಕೆಶಿ ಸಿಡಿಮಿಡಿ

ಪಾಲನೆ ನ್ಯೂಸ್

ಬಾಳೆಹೊನ್ನೂರು: ರಂಭಾಪುರಿ ಪೀಠಕ್ಕೆ ಭಾನುವಾರ ಆಗಮಿಸಿದ ಡಿಸಿಎಂ ಡಿ.ಕೆ. ಶಿವಕುಮಾ‌ರ್, ಹೆಲಿಕಾಪ್ಟರ್‌ನಿಂದ ಇಳಿದುಬಂದ ಕೂಡಲೇ ಅವರನ್ನು ಹೆಚ್ಚಿನ ಸಂಖ್ಯೆಯಲ್ಲಿ ಸುತ್ತುವರಿದ ಕಾಂಗ್ರೆಸ್ ಕಾರ್ಯಕರ್ತರು, ಮಾಧ್ಯಮದವರನ್ನು ಕಂಡು ಸಿಡಿಮಿಡಿಗೊಂಡರು.

“ನಿಮಗೇನಾದರೂ ಮಾನ-ಮರ್ಯಾದೆ ಇದೆಯೇನ್ರಿ?’ ಎಂದು ಗದರಿಸಿದ ಡಿಕೆಶಿ, ಹತ್ತಿರದಲ್ಲಿದ್ದ ಕೊಪ್ಪ ಡಿವೈಎಸ್ಪಿ ಬಾಲಾಜಿ ಸಿಂಗ್ ಅವರತ್ತ ತಿರುಗಿ, ‘ಹೆಲಿಕಾಪ್ಟರ್ ಫ್ಯಾನ್ ಇನ್ನೂ ತಿರುಗುತ್ತಿದೆ. ಆದರೂ ಇಷ್ಟೊಂದು ಜನರನ್ನು ಏಕೆ ಹೆಲಿಕಾಪ್ಟರ್ ಹತ್ತಿರ ಬಿಟ್ಟಿದ್ದೀರಾ? ಸ್ವಲ್ಪ ಸಿಬ್ಬಂದಿ ಹಾಕಲು ಆಗಲ್ವಾ?’ ಎಂದು ಗರಂ ಆದರು. ಸ್ಥಳದಲ್ಲಿದ್ದ ಮುಖಂಡರೊಬ್ಬರು ‘ಎಲ್ಲ ಎಂಎಲ್‌ಎ ಕಡೆಯವರು ಸರ್’ ಎಂದಾಗ ಮತ್ತೆ ಸಿಟ್ಟಾದ ಡಿಕೆಶಿ, ಯಾವ ಎಂಎಲ್‌ಎ ರೀ? ಇಷ್ಟೊಂದು ಜನ ಬಂದು ಏನಾದರೂ ಅನಾಹುತವಾದರೆ ಯಾರು ಹೊಣೆ? ನಿಮಗೆ ಜವಾಬ್ದಾರಿ ಇಲ್ವಾ ಎಂದು ಪ್ರಶ್ನಿಸಿದರು.‌

✅ಪಾಲನೆ.ಇನ್ ವಾಟ್ಸ್ ಆ್ಯಪ್ ಗುಂಪಿಗೆ ಸೇರಿರಿ ನ್ಯೂಸ್ & ವ್ಯೂಸ್ ಓದಿರಿ. ಆಲೋಚಿಸಿ. ಸ್ಪಂದಿಸಿ.
https://chat.whatsapp.com/H1gUYgrzvnQGZAhIQSGMHn

Related posts

ಪರಿಸರವನ್ನು ಸ್ವಚ್ಛತೆಯಿಂದ ನೋಡಿಕೊಳ್ಳುವುದು ಸಾಮಾಜಿಕ ಜವಾಬ್ದಾರಿ‌ – ಡಾ. ಕುಮಾರ

ಕತಾರ್‌ನಿಂದ ಭಾರತಕ್ಕೆ ಇಂಧನ

ಬೂದನೂರು ಉತ್ಸವದಲ್ಲಿ ಹೆಲಿಟೂರಿಸಂಗೆ ಚಾಲನೆ

Leave a Comment