ಪಾಲನೆ ನ್ಯೂಸ್
ಮಂಡ್ಯ: ಮಂಡ್ಯ ಜಿಲ್ಲೆಯ ಕೃಷಿ ಇಲಾಖೆಯ ಆತ್ಮ ಯೋಜನೆಯಡಿ ಜಿಲ್ಲಾ ಕೃಷಿ ತರಬೇತಿ ಕೇಂದ್ರದ ಮೂಲಕ ಗ್ರಾಮೀಣ ಯುವ ರೈತರಿಗೆ/ರೈತ ಮಹಿಳೆಯರಿಗೆ ಕೌಶಲ್ಯಾಧಾರಿತ ತರಬೇತಿಯನ್ನು ನೀಡುವ ಸಲುವಾಗಿ ಕಬ್ಬಿನಲ್ಲಿ ಒಂಟಿ ಕಣ್ಣಿನ ಸಸಿ ತಯಾರಿಕೆ ಕಿರು ಉದ್ಯಮ ಮಾಡಬಯಸುವವರು, ಕಿರು ಉದ್ದಿಮೆಗಳಾದ ಭತ್ತ ನಾಟಿ ಮಾಡುವ ಯಂತ್ರ ಬಳಕೆ, ಗುಚ್ಚದಲ್ಲಿ ಭತ್ತ ಸಸಿಮಡಿ ತಯಾರಿಸುವ ವಿಧಾನ, ಎಣ್ಣೆಗಾಣ, ಅಕ್ಕಿ/ರಾಗಿ/ಖಾರದ ಪುಡಿ ಗಿರಣಿ, ಡ್ರನ್ ತಂತ್ರಜ್ಞಾನ, ಟ್ಯಾಕ್ಟರ್ ಚಾಲಿತ ಯಂತ್ರಗಳ ನಿರ್ವಹಣೆ, ಕೂಲ್ಲೋತ್ತರ ತಂತ್ರಜ್ಞಾನ ಮತ್ತು ಮೌಲ್ಯವರ್ಧನೆ ಕುರಿತಾದ ತರಬೇತಿಯನ್ನು ಆಯೋಜಿಸಿದ್ದು ಇಲಾಖಾ ಯೋಜನೆಗಳಡಿ ಸಹಾಯಧನ ಮತ್ತು ಬ್ಯಾಂಕ್ ಸಾಲ ಪಡೆಯಲು ಆಸಕ್ತ ಯುವ ರೈತರಿಗೆ ನೊಂದಣಿ ಅವಕಾಶ ಕಲ್ಪಿಸಲಾಗಿದೆ.
ಆಸಕ್ತ ಗ್ರಾಮೀಣ ಯುವಕರು ಮತ್ತು ಯುವತಿಯರು ಮಾರ್ಚ್ 04 ರ ಸಂಜೆ 5.00 ಗಂಟೆಯೊಳಗೆ ತಮ್ಮ ವ್ಯಾಪ್ತಿಯ ತಾಲ್ಲೂಕುವಾರು ಯೋಜನೆಯ ತಾಲ್ಲೂಕು ತಾಂತ್ರಿಕ ವ್ಯವಸ್ಥಾಪಕರಿಗೆ ಕರೆ ಮಾಡಿ ನೊಂದಾಯಿಸಿಕೊಳ್ಳಬಹುದು.ಪ್ರತಿ ತಾಲ್ಲೂಕಿನಿಂದ 15-20 ರೈತರನ್ನು ಆಯ್ಕೆ ಮಾಡಿಕೊಳ್ಳುವ ಕಾರಣ ಮೊದಲು ನೊಂದಣಿ ಮಾಡಿಕೊಳ್ಳುವ ರೈತರಿಗೆ ಮೊದಲ ಆದ್ಯತೆ ನೀಡಲಾಗುವುದು.

ಹೆಚ್ಚಿನ ಮಾಹಿತಿಗಾಗಿ ತಾಲ್ಲೂಕುವಾರು ದೂ. ಸಂ.ಮಂಡ್ಯ- 8684533203, ಮದ್ದೂರು – 9480102213, ಮಳವಳ್ಳಿ -9980269024. ಶ್ರೀರಂಗಪಟ್ಟಣ – 9980437240, ಪಾಂಡವಪುರ – 8050131372, ಕೆ.ಆರ್ ಪೇಟೆ – 7019897216 ಮತ್ತು ನಾಗಮಂಗಲ – 8970182059 ಅನ್ನು ಸಂಪರ್ಕಿಸಬಹುದು ಎಂದು ಜಿಲ್ಲಾ ಜಂಟಿ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
✅ಪಾಲನೆ.ಇನ್ ವಾಟ್ಸ್ ಆ್ಯಪ್ ಗುಂಪಿಗೆ ಸೇರಿರಿ ನ್ಯೂಸ್ & ವ್ಯೂಸ್ ಓದಿರಿ. ಆಲೋಚಿಸಿ. ಸ್ಪಂದಿಸಿ.
https://chat.whatsapp.com/H1gUYgrzvnQGZAhIQSGMHn
