NEWS

ಅಫ್ಘಾನ್ ಸೇನೆ ಪಾಕಿಸ್ತಾನದ ಸೇನಾ ನೆಲೆಗಳ ಮೇಲೆ ದಾಳಿ ; 150ಕ್ಕೂ ಹೆಚ್ಚು ಸಾವು

ಪಾಲನೆ ನ್ಯೂಸ್

ಕಾಬೂಲ್: ತಾಲಿಬಾನ್ ಆಡಳಿತದ ಅಫ್ಘಾನಿಸ್ತಾನ ಹಾಗೂ ಪಾಕಿಸ್ತಾನದ ನಡುವೆ ಕೆಲವು ದಿನಗಳಿಂದ ನಡೆಯುತ್ತಿದ್ದ ಶೀತಲ ಸಮರ ಯುದ್ಧದ ಸ್ವರೂಪ ಪಡೆದುಕೊಂಡಿದೆ. 2 ದಿನಗಳ ಹಿಂದಷ್ಟೇ ಪಾಕಿಸ್ತಾನ ನಡೆಸಿದ್ದ ವೈಮಾನಿಕ ದಾಳಿಯಿಂದ ಕೆರಳಿದ್ದ ಅಫ್ಘಾನ್ ಸೇನೆ ಪಾಕಿಸ್ತಾನದ ಸೇನಾ ನೆಲೆಗಳ ಮೇಲೆ ಗುರುವಾರ ರಾತ್ರಿಯಿಂದೀಚೆಗೆ ಹಲವು ಬಾರಿ ದಾಳಿ ನಡೆಸಿದೆ.

ಪಾಕಿಸ್ತಾನದ 55ಕ್ಕೂ ಹೆಚ್ಚು ಸೈನಿಕರನ್ನು ಹತ್ಯೆಗೈಯ್ಯಲಾಗಿದ್ದು, 2 ಸೇನಾ ನೆಲೆ, 19 ಚೆಕ್‌ಪೋಸ್ಟ್ ವಶಪಡಿಸಿಕೊಂಡಿರುವುದಾಗಿ ಅಫ್ಘಾನಿಸ್ತಾನದ ರಕ್ಷಣಾ ಸಚಿವಾಲಯ ಹೇಳಿದೆ. ಇನ್ನು ಅಪರೇಷನ್ ಗಜಬ್ ಲಿಲ್ ಹಕ್ ಹೆಸರಿನಲ್ಲಿ ಅಫ್ಘಾನಿಸ್ತಾನದ ವಿರುದ್ಧ ಕಾರ್ಯಾಚರಣೆ ಆರಂಭಿಸಿರುವ ಪಾಕಿಸ್ತಾನ ಸೇನೆ 133 ತಾಲಿಬಾನ್ ಯೋಧರನ್ನು ಹತ್ಯೆಗೈದಿರುವುದಾಗಿ ಹೇಳಿದೆ. ಗಡಿ ಪ್ರವೇಶಿಸಿದ ಆತ್ಮಾಹುತಿ ಪಡೆ ಪಾಕಿಸ್ತಾನಕ್ಕೆ ತಿರುಗೇಟು ನೀಡಲು ತಾಲಿಬಾನ್‌ನ ಆತ್ಮಾಹುತಿ ಪಡೆ ಸನ್ನದ್ಧಗೊಂಡಿದೆ. ಪಾಕಿಸ್ತಾನದ ದಾಳಿ ಮುಂದುವರಿದಲ್ಲಿ ಗಡಿಯಲ್ಲಿ ನಿಯೋಜನೆಗೊಂಡಿರುವ ಆತ್ಮಾಹುತಿ ಪಡೆ ತಕ್ಷಣ ದಾಳಿ ನಡೆಸುವುದಾಗಿ ತಾಲಿಬಾನ್ ಸರ್ಕಾರದ ವಕ್ತಾರರು ಎಚ್ಚರಿಸಿದ್ದಾರೆ.

✅ಪಾಲನೆ.ಇನ್ ವಾಟ್ಸ್ ಆ್ಯಪ್ ಗುಂಪಿಗೆ ಸೇರಿರಿ ನ್ಯೂಸ್ & ವ್ಯೂಸ್ ಓದಿರಿ. ಆಲೋಚಿಸಿ. ಸ್ಪಂದಿಸಿ.
https://chat.whatsapp.com/H1gUYgrzvnQGZAhIQSGMHn

Related posts

ಸ್ಥಳೀಯ ಸಂಸ್ಥೆಗಳ ಚುನಾವಣೆ ಬಗ್ಗೆ ಚರ್ಚೆ

ಮದ್ದೂರು ನಗರಸಭೆಗೆ ಗ್ರಾ.ಪಂ‌ಗಳ ಸೇರ್ಪಡೆ ಸಂಬಂಧ ಸಭೆ

ಜಿಲ್ಲೆಯಲ್ಲಿ ನಿರುದ್ಯೋಗ ಹೋಗಲಾಡಿಸಲು ಉದ್ಯಮಗಳಿಗೆ ಒತ್ತು ನೀಡಿ

Leave a Comment