NEWS

ಜಿಎಸ್ಎಸ್ ಅವರು ಕುವೆಂಪು ವೈಚಾರಿಕತೆ ಮುಂದುವರಿಸಿದ್ದಾರೆ ; ಪ್ರೊ.ಮೊರಬದ ಮಲ್ಲಿಕಾರ್ಜುನ ಬಣ್ಣನೆ

ಪಾಲನೆ ನ್ಯೂಸ್

ಚಾಮರಾಜನಗರ: ಜಿ.ಎಸ್.ಎಸ್. ಅವರು ತಮ್ಮ ಸಾಹಿತ್ಯದಲ್ಲಿ ಮತ್ತು ಕಾರ್ಯದಲ್ಲಿ ಈ ಸಮಾಜಕ್ಕೆ ತಮ್ಮ ಶಕ್ತಿ ಮೀರಿ ಬೆಳಕು ನೀಡಲು ಪ್ರಯತ್ನಿಸಿದರು. ಹಾಗಾಗಿ ಅವರ ಕಾವ್ಯದಲ್ಲಿ ಹಣತೆ, ದೀವ, ಜ್ಯೋತಿ ಅನ್ನುವ ಪ್ರತಿಮೆಗಳು ಮತ್ತೆ ಮತ್ತೆ ಕಾಣಿಸಿಕೊಂಡವು ಎಂದು ಮೈಸೂರಿನ ಜೆಎಸ್‌ಎಸ್‌ ಮಹಾ ವಿದ್ಯಾಪೀಠದ ನಿರ್ದೇಶಕರಾದ ಪ್ರೊ. ಮೊರ ಬದ ಮಲ್ಲಿಕಾರ್ಜುನ ತಿಳಿಸಿದರು.

ಕುದೇರು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಹಾಗೂ ಚಕೋರ ಸಾಹಿತ್ಯ ವಿಚಾರ ವೇದಿಕೆ ವತಿಯಿಂದ ಡಾ.ಜಿ.ಎಸ್.ಶಿವರುದ್ರಪ್ಪ ರವರ ಜನ್ಮ ಶತಮಾನೋತ್ಸವದ ಪ್ರಯುಕ್ತ ನಡೆದ ಡಾ.ಜಿ.ಎಸ್.ಎಸ್. ನೆನಪುಗಳ ಹಣತೆ ಉಪನ್ಯಾಸ ಕಾರ್ಯಕ್ರಮದಲ್ಲಿ ಜಿ.ಎಸ್.ಎಸ್ ಅವರ ಸಾಹಿತ್ಯ, ವ್ಯಕ್ತಿತ್ವ ಮತ್ತು ಅವರ ಸಾಧನೆಗಳ ಬಗ್ಗೆ ಮಾತನಾಡಿದರು. ಜಿ.ಎಸ್.ಎಸ್ ಅವರು ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಮುಖ್ಯಸ್ಥರಾಗಿ ಕೆಲಸ ಮಾಡುತ್ತಿದ್ದ ಸಮಯದಲ್ಲಿ ಇಡೀ ಶಿಕ್ಷಣ ವ್ಯವಸ್ಥೆಯಲ್ಲಿ ಮೌಡ್ಯವನ್ನು ತೊಲಗಿಸಿ, ವೈಚಾರಿಕತೆಯನ್ನು ಕಟ್ಟುವುದು ಹೇಗೆ? ಇಡೀ ವಿದ್ಯಾರ್ಥಿ ಸಮೂಹವನ್ನು ವೈಚಾರಿಕವಾಗಿ ಮತ್ತು ಕಾರ್ಯಕ್ರಮಕ್ಕೆ ಸಂಗೀತದ ಸ್ಪರ್ಶ ಗಾಯಕರಾದ ಸಿ.ಎಂ.ನರಸಿಂಹಮೂರ್ತಿ, ಪ್ರೊ.ಎ.ಎಂ. ಶಿವಸ್ವಾಮಿ ಮತ್ತು ಕಾಲೇಜಿನ ಸಹಾಯಕ ಪ್ರಾಧ್ಯಾಪಕರಾದ ಸಿಂಧು ಅವರು ಜಿ.ಎಸ್.ಎಸ್. ಅವರ ಹಲವಾರು ಭಾವಗೀತೆಗಳನ್ನು ಹಾಡುವ ಮೂಲಕ ಕಾರ್ಯಕ್ರಮಕ್ಕೆ ಸಂಗೀತದ ಸ್ಪರ್ಶ ನೀಡಿದರು.

ವೈಜ್ಞಾನಿಕವಾಗಿ ಚಿಂತಿಸುವಂತೆ ರೂಪಿಸುವುದು ಹೇಗೆ ? ಅದಕ ಏನೇನು ಕಾರ್ಯಕ್ರಮ ಮಾಡಬೇಕು ಎಂದು ಡಾ. ಹೆಚ್.ನರಸಿಂಹಯ್ಯನವರ ಜೊತೆ ಸಮಾಲೋಚಿಸಿ ಕಾರ್ಯಕ್ರಮಗಳನ್ನು ರೂಪಿಸಿದ್ದರು ಎಂದರು. ಆದ್ದರಿಂದ ವಿಶ್ವವಿದ್ಯಾಲಯದ ವ್ಯಾಪ್ತಿಯಲ್ಲಿ ಒಂದು ಆರೋಗ್ಯ ಪೂರ್ಣ ವಾತಾವರಣ ಸೃಷ್ಟಿಯಾಯಿತು. ಆ ವಾತಾವರಣದಲ್ಲಿ ಬೆಳದ ಹಲವಾರು ವಿದ್ಯಾರ್ಥಿ, ವಿದ್ಯಾರ್ಥಿನಿಯರು ವೈಚಾರಿಕ, ವೈಜ್ಞಾನಿಕ ಚಿಂತನೆಗಳನ್ನು ಮೈಗೂಡಿಸಿಕೊಂಡು ಅದನ್ನು ಇಡೀ ನಾಡಿನಾದ್ಯಂತ ರಾಷ್ಟ್ರಕವಿ ಕುವೆಂಪು ಅವರ ಶಿಷ್ಯರಾಗಿದ್ದ ಡಾ. ಜಿ.ಎಸ್.ಎಸ್. ಅವರು ಕುವೆಂಪು ಅವರ ಆಶಯಗಳ ಮುಂದುವರಿದ ಭಾಗ ಅನ್ನುವುದು ನಿರ್ವಿವಾದ.

ಈ ಕಾರಣಗಳಿಗಾಗಿಯೇ ಕುವೆಂಪು ಅವರ ನಂತರ ರಾಷ್ಟ್ರ ಕವಿ ಅನ್ನುವ ಬಿರುದಿಗೆ ಪಾತ್ರರಾದ ಡಾ.ಜಿ.ಎಸ್.ಶಿವರುದ್ರಪ್ಪ ಅವರಿಗೆ ನೂರು ವರ್ಷಗಳು ತುಂಬಿದ ಶತಮಾನೋತ್ಸವದ ಈ ಸಂದರ್ಭದಲ್ಲಿ ಅವರ ಚಿಂತನೆಗಳನ್ನು ಅಳವಡಿಸಿಕೊಳ್ಳುವ ಮೂಲಕ ಅವರ ಆಶಯದ ನಾಡನ್ನು ನಾವೆಲ್ಲ ಕಟ್ಟಬೇಕಾಗಿದೆ. # ಮೊರಬದ ಮಲ್ಲಿಕಾರ್ಜುನ ವಿಸ್ತರಿಸತೊಡಗಿದರು ಎಂದರು. ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ಥಿಯೋಡರ್ ಲೂಥರ್ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಸಾಹಿತಿಗಳಾದ ಕೆ.ವೆಂಕಟರಾಜು ಪ್ರಾಸ್ತಾವಿಕ ನುಡಿಗಳನ್ನಾಡಿದರು. ಸಾಹಿತ್ಯ ಅಕಾಡೆಮಿಯ ಸದಸ್ಯರಾದ ಪ್ರಕಾಶರಾಜ್ ಮೇಹು ಚಕೋರ ಕಾರ್ಯಕ್ರಮದ ಉದ್ದೇಶಗಳನ್ನು ವಿವರಿಸಿದರು.

✅ಪಾಲನೆ.ಇನ್ ವಾಟ್ಸ್ ಆ್ಯಪ್ ಗುಂಪಿಗೆ ಸೇರಿರಿ ನ್ಯೂಸ್ & ವ್ಯೂಸ್ ಓದಿರಿ. ಆಲೋಚಿಸಿ. ಸ್ಪಂದಿಸಿ.
https://chat.whatsapp.com/H1gUYgrzvnQGZAhIQSGMHn

Related posts

ಸಾಮಾಜಿಕ ಜಾಲತಾಣದಿಂದ ಜೀವನ ಬದಲಾಗ್ತಾ ಇದೆಯಾ?

ರಜೆಯಲ್ಲಿರುವ ಶಿಕ್ಷಕರಿಗೆ ತಕ್ಷಣ ಕರ್ತವ್ಯಕ್ಕೆ

ಕುಸುಮ್-ಸಿ: ಮಂಡ್ಯ ಜಿಲ್ಲೆಯ ಮೊದಲ ಕಾಮಗಾರಿಗೆ ಚಾಲನೆ

Leave a Comment