NEWS

ನ್ಯಾಯಾಂಗದಲ್ಲಿ ಭ್ರಷ್ಟಾಚಾರ ಉಲ್ಲೇಖದ ಪಠ್ಯಪುಸ್ತಕ ನಿಷೇಧ ಮುದ್ರಿತ

ಪಾಲನೆ ನ್ಯೂಸ್

ನವದೆಹಲಿ: ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿ (ಎನ್‌ಸಿಇಆರ್ ಟಿ)ಯ 8ನೇ ತರಗತಿ ಪಠ್ಯಪುಸ್ತಕದಲ್ಲಿನ ‘ನ್ಯಾಯಾಂಗದಲ್ಲಿ ಭ್ರಷ್ಟಾಚಾರ’ ಉಲ್ಲೇಖದ ಬಗ್ಗೆ ಬುಧವಾರ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದ ಸರ್ವೋಚ್ಚ ನ್ಯಾಯಾಲಯ, ಸಮಾಜ ವಿಜ್ಞಾನ ಪಠ್ಯಪುಸ್ತಕದ ಮರುಮುದ್ರಣ ಅಥವಾ ಡಿಜಿಟಲ್ ರೂಪದಲ್ಲಿ ಪ್ರಸಾರವನ್ನು ನಿಷೇಧಿಸಿ ಗುರುವಾರ ಆದೇಶಿಸಿದೆ.

ಪಠ್ಯಪುಸ್ತಕದ ಮುದ್ರಿತ ಹಾಗೂ ಡಿಜಿಟಲ್ ರೂಪದಲ್ಲಿರುವ ಎಲ್ಲ ಪ್ರತಿಗಳನ್ನು ತಕ್ಷಣವೇ ಜಪ್ತಿ ಮಾಡುವಂತೆ ಸೂಚಿಸಿರುವ ನ್ಯಾಯಪೀಠವು ಎನ್ ಸಿಇಆರ್‌ಟಿ ನಿರ್ದೇಶಕ, ಶಾಲಾ ಶಿಕ್ಷಣ ಇಲಾಖೆ ಕಾರ್ಯದರ್ಶಿಗೆ ಶೋಕಾಸ್ ನೋಟಿಸ್‌ ಜಾರಿ ಮಾಡಿದೆ. ಅಲ್ಲದೆ ಈ ರೀತಿ ಬೇಜವಾಬ್ದಾರಿಯಿಂದ ನಡೆದುಕೊಂಡವರ ವಿರುದ್ಧ ನ್ಯಾಯಾಂಗ ನಿಂದನೆ ಕ್ರಮ ಏಕೆ ಜರುಗಿಸಬಾರದೆಂದು ಪ್ರಶ್ನಿಸಿ ತರಾಟೆಗೆ ತೆಗೆದುಕೊಂಡಿದೆ.

ಕ್ಷಮೆಯಾಚಿಸಿದ ಎನ್‌ಇಆರ್‌ಟಿ ಸುಪ್ರೀಂಕೋರ್ಟ್ ಆಕ್ರೋಶ ವ್ಯಕ್ತಪಡಿಸುತ್ತಲೇ ಎನ್ ಸಿಇಆರ್‌ಟಿ ಬುಧವಾರ ಕ್ಷಮೆ ಕೋರಿತ್ತು. ಪಠ್ಯಪುಸ್ತಕಗಳ ಪರಿಶೀಲನಾ ಕಾರ್ಯ ನಿರಂತರವಾಗಿ ನಡೆಯುತ್ತದೆ. ವ್ಯಾಪಕ ಸಮಾಲೋಚನೆ ಬಳಿಕ ಪಠ್ಯಪುಸ್ತಕ ಮರುರಚಿಸುವುದಾಗಿ ಎನ್ ಸಿಇಆರ್‌ಟಿ ಹೇಳಿದೆ.

✅ಪಾಲನೆ.ಇನ್ ವಾಟ್ಸ್ ಆ್ಯಪ್ ಗುಂಪಿಗೆ ಸೇರಿರಿ ನ್ಯೂಸ್ & ವ್ಯೂಸ್ ಓದಿರಿ. ಆಲೋಚಿಸಿ. ಸ್ಪಂದಿಸಿ.
https://chat.whatsapp.com/H1gUYgrzvnQGZAhIQSGMHn

Related posts

ಡಿಜಿಟಲ್ ಮಾದರಿಯಲ್ಲಿ 2027ರ ಜನಗಣತಿ

ಸಾರಾಯಿ ಕುಡಿಬೇಡ ಎಂದಿದ್ದಕ್ಕೆ 11ರ ಮಗಳನ್ನೇ ಕತ್ತು ಹಿಸುಕಿ ಕೊಂದ ತಾಯಿ!

ಭಾರತ-ಪಾಕ್ ಯುದ್ಧ ನಿಲ್ಲಿಸಿರುವೆ, ನೊಬೆಲ್‌ಗೆ ನನ್ನಷ್ಟು ಅರ್ಹ ಯಾರಿಲ್ಲ: ಟ್ರಂಪ್

Leave a Comment