ಪಾಲನೆ ನ್ಯೂಸ್
ಹೋಬರ್ಟ್: ಎಫ್‌ಐಎಚ್ ಪ್ರೊ ಲೀಗ್ ಪುರುಷರ ಹಾಕಿ ಟೂರ್ನಿಯ 7ನೇ H ಆವೃತ್ತಿಯಲ್ಲಿ ಭಾರತ ತಂಡ ಕೊನೆಗೂ ಗೆಲುವಿನ ಖಾತೆ ತೆರೆದಿದೆ. ಹೋಬರ್ಟ್ ಚರಣದಲ್ಲಿ ಬುಧವಾರ ನಡೆದ ತನ್ನ 4ನೇ ಹಾಗೂ ಕೊನೇ ಪಂದ್ಯದಲ್ಲಿ ಭಾರತ ತಂಡ ಆತಿಥೇಯ ಆಸ್ಟ್ರೇಲಿಯಾ ಎದುರು ಪೆನಾಲ್ಟಿ ಶೂಟೌಟ್‌ನಲ್ಲಿ 3-1 ಅಂತರದಿಂದ ಗೆಲುವು ದಾಖಲಿಸಿದೆ.

ಇದಕ್ಕೆ ಮುನ್ನ ಪಂದ್ಯ ನಿಗದಿತ ಸಮಯದಲ್ಲಿ 1-1ಗೋಲಿನಿಂದ ಡ್ರಾ ಕಂಡಿತ್ತು. ಪಂದ್ಯದ ಮೊದಲ 3 ಕ್ವಾರ್ಟರ್ ಗೋಲುರಹಿತವಾಗಿದ್ದರೆ, 49ನೇ ನಿಮಿಷದಲ್ಲಿ ಜೆರೆಮಿ ಹೇವರ್ಡ್ ಸಿಡಿಸಿದ ಗೋಲಿನಿಂದ ಆಸೀಸ್ ಮುನ್ನಡೆ ಸಾಧಿಸಿತು. ಶಿಲಾನಂದ್ ಲಾಕ್ರಾ 51ನೇ ನಿಮಿಷದಲ್ಲಿ ಬಾರಿಸಿದ ಗೋಲಿನಿಂದ ಭಾರತ ಸಮಬಲ ಸಾಧಿಸಿ ಪಂದ್ಯವನ್ನು ಪೆನಾಲ್ಟಿ ಕಾರ್ನ‌್ರಗೆ ವಿಸ್ತರಿಸುವಂತೆ ಮಾಡುವಲ್ಲಿ ಯಶಸ್ವಿಯಾಯಿತು.
ವಿಶ್ವ ನಂ.3 ಆಸೀಸ್ ವಿರುದ್ಧದ ಈ ಗೆಲುವು ಭಾರತಕ್ಕೆ ಆತ್ಮವಿಶ್ವಾಸ ಹೆಚ್ಚಿಸಿದೆ. ಭಾರತ ಈ ಹಿಂದಿನ 7 ಪಂದ್ಯಗಳಲ್ಲಿ 5ರಲ್ಲಿ ಸೋತಿದ್ದರೆ, 2ರಲ್ಲಿ ಡ್ರಾ ಸಾಧಿಸಿ ಶೂಟೌಟ್‌ನಲ್ಲಿ ಸೋತಿತ್ತು. ಇದರಿಂದ ಇದುವರೆಗೆ ಆಡಿರುವ 8 ಪಂದ್ಯಗಳಲ್ಲಿ ಭಾರತ 4 ಅಂಕ ಗಳಿಸಿ 9ನೇ ಸ್ಥಾನದಲ್ಲಿದೆ. ಭಾರತ ಇನ್ನು ಜೂನ್ 21ರಿಂದ ನಡೆಯಲಿರುವ ರೋಟೆರ್‌ಡ್ಯಾಂ ಚರಣದಲ್ಲಿ ನೆದರ್ಲೆಂಡ್ ಮತ್ತು ಜರ್ಮನಿ ವಿರುದ್ಧ ಆಡಲಿದೆ.
✅ಪಾಲನೆ.ಇನ್ ವಾಟ್ಸ್ ಆ್ಯಪ್ ಗುಂಪಿಗೆ ಸೇರಿರಿ ನ್ಯೂಸ್ & ವ್ಯೂಸ್ ಓದಿರಿ. ಆಲೋಚಿಸಿ. ಸ್ಪಂದಿಸಿ.
https://chat.whatsapp.com/H1gUYgrzvnQGZAhIQSGMHn
