NEWS

“2025ರ ಮೇ ತಿಂಗಳ ಅಪರೇಷನ್ ಸಿಂಧೂರ್ ಸಂಘರ್ಷ ತಡೆಯದಿದ್ದರೆ 3.5 ಕೋಟಿ ಜನರು ಸಾಯುತ್ತಿದ್ದರು”

ಪಾಲನೆ ನ್ಯೂಸ್

ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತೊಮ್ಮೆ, ಭಾರತ-ಪಾಕಿಸ್ತಾನ ನಡುವಿನ 2025ರ ಮೇ ತಿಂಗಳ ಅಪರೇಷನ್ ಸಿಂಧೂರ್ ಸಂಘರ್ಷವನ್ನು ತಾನು ತಡೆಯದಿದ್ದರೆ 3.5 ಕೋಟಿ ಜನರು ಸಾಯುತ್ತಿದ್ದರು ಎಂದು ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಶರೀಫ್ ಹೇಳಿದ್ದಾಗಿ ಪ್ರತಿಪಾದಿಸಿದ್ದಾರೆ.

ದೇಶವನ್ನುದ್ದೇಶಿಸಿ ಮಂಗಳವಾರ 100 ನಿಮಿಷಕ್ಕಿಂತ ಹೆಚ್ಚು ಕಾಲ ನೀಡಿದ ತಮ್ಮ ಸ್ಟೇಟ್ ಆಫ್‌ದ ಯೂನಿಯನ್ ಭಾಷಣದಲ್ಲಿ, ಭಾರತ ಮತ್ತು ಪಾಕಿಸ್ತಾನ ನಡುವಿನ ಸಂಘರ್ಷ ಅಣುಯುದ್ಧಕ್ಕೆ ತಿರುಗುತ್ತಿತ್ತು, ಆದರೆ ನಾನು ಅದನ್ನು ತಪ್ಪಿಸಿದ್ದೇನೆ ಎಂದು ಪುನರುಚ್ಚರಿಸಿದರು. ನನ್ನ ಎರಡನೇ ಬಾರಿಯ ಆಡಳಿತದ ಮೊದಲ 10 ತಿಂಗಳಲ್ಲಿ ಎಂಟು ಟ್ರಂಪ್‌ ಭಾಷಣದ ಮುಖ್ಯಾಂಶಗಳು ಆರ್ಥಿಕತೆ ವೇಗವಾಗಿ ಬೆಳೆಯುತ್ತಿದೆ, ಗಡೆಗಳು ಸುರಕ್ಷಿತವಾಗಿವೆ ಕಳೆದ 9 ತಿಂಗಳಲ್ಲಿ ಅಕ್ರಮ ವಲಸಿಗರು ಯಾರೂ ಅಮೆರಿಕ ಪ್ರವೇಶಿಸಿಲ್ಲ ಕಾನೂನುಬದ್ದವಾಗಿ ಮಾತ್ರ ಜನರಿಗೆ ಪ್ರವೇಶ ನೀಡಲಾಗುತ್ತದೆ ನಮ್ಮ ದೇಶ ಹಿಂದಿಗಿಂತ ಶ್ರೀಮಂತ ಮತ್ತು ಬಲಿಷ್ಠವಾಗಿದೆ ಹತ್ಯೆ ಪ್ರಮಾಣ ಇತಿಹಾಸದಲ್ಲೇ ಸಾಕಷ್ಟು ಕಡಿಮೆಯಾಗಿದೆ ಕಳೆದ 12 ತಿಂಗಳಲ್ಲಿ 18 ಟ್ರಿಲಿಯನ್ ಡಾಲರ್ ಹೂಡಿಕೆ ಬಂದಿದೆ ಯುದ್ಧಗಳನ್ನು ನಿಲ್ಲಿಸಿದ್ದೇನೆ.

ಅದರಲ್ಲಿ ಪಾಕಿಸ್ತಾನ ಮತ್ತು ಭಾರತ ದೇಶಗಳ ನಡುವಿನ ಯುದ್ಧಗಳು ಕೂಡ ಸೇರಿವೆ. ಅದು ಅಣು ಯುದ್ಧವಾಗಬಹುದಾಗಿತ್ತು, ಪಾಕಿಸ್ತಾನ ಪ್ರಧಾನಿಯವರೇ ಹೇಳಿದ್ದು, ನನ್ನ ಹಸ್ತಕ್ಷೇಪ ಇರದಿದ್ದರೆ 3.5 ಕೋಟಿ ಮಂದಿ ಸಾಯುತ್ತಿದ್ದರು ಎಂದರು. ಈ ಹಿಂದೆ ಕೂಡ ಟ್ರಂಪ್ ಇದೇ ರೀತಿಯ ಹೇಳಿಕೆಗಳನ್ನು ನೀಡಿದ್ದು, ಶರೀಫ್ ತಮ್ಮನ್ನು ಲಕ್ಷಾಂತರ ಜೀವಗಳನ್ನು ಉಳಿಸಿದ ವ್ಯಕ್ತಿ ಎಂದು ಕೊಂಡಾಡಿದ್ದಾರೆ ಎಂದು ಹೇಳಿದ್ದಾರೆ.

ಹಿಂದಿನ ಸಂದರ್ಭಗಳಲ್ಲಿ ಅವರು 2.5 ಕೋಟಿ ಮತ್ತು ನಂತರ 1 ಕೋಟಿ ಜೀವಗಳು ಉಳಿದವು ಎಂದು ಕಡಿಮೆ ಅಂಕಿಗಳನ್ನು ಉಲ್ಲೇಖಿಸಿದ್ದರು. ಆದರೆ ಭಾರತವು, ಶಸ್ತ್ರಸಂಘರ್ಷ ನಿಲ್ಲಿಸುವ ಕುರಿತು ಉಭಯ ದೇಶಗಳ ಸೈನ್ಯಗಳ ಡೈರೆಕ್ಟರ್ ಜನರಲ್ ಆಫ್ ಮಿಲಿಟರಿ ಆಪರೇಷನ್ಸ್‌ಗಳ ನಡುವೆ ನೇರ ಮಾತುಕತೆಯ ಬಳಿಕವೇ ಒಪ್ಪಂದ ತಲುಪಲಾಗಿದೆ ಎಂದು ನಿರಂತರವಾಗಿ ಸ್ಪಷ್ಟಪಡಿಸಿದೆ.‌

✅ಪಾಲನೆ.ಇನ್ ವಾಟ್ಸ್ ಆ್ಯಪ್ ಗುಂಪಿಗೆ ಸೇರಿರಿ ನ್ಯೂಸ್ & ವ್ಯೂಸ್ ಓದಿರಿ. ಆಲೋಚಿಸಿ. ಸ್ಪಂದಿಸಿ.
https://chat.whatsapp.com/H1gUYgrzvnQGZAhIQSGMHn

Related posts

ಸಂತಲಾಲ್ ಮಹಾರಾಜರ ಆದರ್ಶ ಮೌಲ್ಯಗಳನ್ನು ಎಲ್ಲರೂ ಅಳವಡಿಸಿಕೊಳ್ಳಬೇಕು – ಪಿ. ರವಿಕುಮಾರ್

ಬಾಲ್ಯ ವಿವಾಹ, ವರದಕ್ಷಿಣೆ ಕಾಯ್ದೆ ಕುರಿತು ಗ್ರಾಮೀಣ ಪ್ರದೇಶಗಳಲ್ಲಿ ಅರಿವು ಕಾರ್ಯಕ್ರಮ ಹಮ್ಮಿಕೊಳ್ಳಿ

ಶಾಸಕರಿಂದ ರಸ್ತೆ ಕಾಮಗಾರಿಗೆ ಭೂಮಿಪೂಜೆ

Leave a Comment