NEWS

ಮಲ್ಯ ಬ್ರಿಟನ್‌ನಿಂದ ಹೊರಹೋಗಲು ನಿರ್ಬಂಧವಿದೆ

ಪಾಲನೆ ನ್ಯೂಸ್

ಮುಂಬೈ: ನಾನು ಭಾರತಕ್ಕೆ ಬರುವ ದಿನ ತಿಳಿಸಲು ಆಗದು, ಕಾನೂನು ತೊಡಕಿದೆ: ಮಲ್ಯ ಬ್ರಿಟನ್‌ನಿಂದ ಹೊರಹೋಗಲು ನಿರ್ಬಂಧವಿದೆ | ಕೋರ್ಟ್‌ಗೆ ಮಾಹಿತಿ ‘ನನ್ನ ಪಾಸ್‌ಪೋರ್ಟ್ ರದ್ದಾಗಿದೆ. ಬ್ರಿಟನ್ ನಿಂದ ಹೊರಹೋಗಲು ನನಗೆ ನಿರ್ಬಂಧವಿದೆ.

ಹೀಗಾಗಿ ಭಾರತಕ್ಕೆ ಯಾವಾಗ ವಾಪಸ್ ಆಗುತ್ತೇ ನೆಂದು ಸ್ಪಷ್ಟವಾಗಿ ಹೇಳಲು ಸಾಧ್ಯವಿಲ್ಲ’ ಎಂದು ದೇಶಭ್ರಷ್ಟ ಉದ್ಯಮಿ ವಿಜಯ್ ಮಲ್ಯ ತಿಳಿಸಿದ್ದಾರೆ. ಮಲ್ಯ ಅವರು ಭಾರತಕ್ಕೆ ವಾಪಸ್‌ ಆಗು ವವರೆಗೆ ಅವರನ್ನು ದೇಶಭ್ರಷ್ಟ ಆರ್ಥಿಕ ಅಪರಾಧಿ ಎಂದು ಘೋಷಿಸುವ ಆದೇಶದ ವಿರುದ್ಧ ಸಲ್ಲಿಸಿರುವ ಅರ್ಜಿಯನ್ನು ವಿಚಾರಣೆ ನಡೆಸು ವುದಿಲ್ಲ ಎಂದು ಬಾಂಬೆ ಹೈಕೋರ್ಟ್‌ನ ಮುಖ್ಯ ನ್ಯಾ| ಶ್ರೀ ಚಂದ್ರಶೇಖರ್ ಮತ್ತು ನ್ಯಾ| ಗೌತಂ ಅಖಂಡ್ ಅವರಿದ್ದ ಪೀಠ ಕಳೆದ ವಾರ ಹೇಳಿತ್ತು.

ಈ ಹಿನ್ನೆಲೆಯಲ್ಲಿ ಮಲ್ಯ ಅವರು ಈ ಹೇಳಿಕೆ ಸಲ್ಲಿಸಿದ್ದಾರೆ. ‘ನನ್ನ ಭಾರತೀಯ ಪಾಸ್‌ಪೋರ್ಟ್ 2016ರಲ್ಲಿ ರದ್ದಾದ ಬಳಿಕ ಯಾವುದೇ ಸಕ್ರಿಯ ಪಾಸ್‌ಪೋರ್ಟ್ ಇಲ್ಲ. ಹೀಗಾಗಿ ಭಾರತಕ್ಕೆ ಯಾವಾಗ ವಾಪಸಾಗುತ್ತೇನೆ ಎಂದು ಸ್ಪಷ್ಟವಾಗಿ ಹೇಳಲು ಸಾಧ್ಯವಿಲ್ಲ’ ಎಂದು ತಮ್ಮ ವಕೀಲ ಅಮಿತ್ ದೇಸಾಯಿ ಮೂಲಕ ಮಲ್ಯ ಅವರು ಹೇಳಿಕೆ ಸಲ್ಲಿಸಿದ್ದಾರೆ. ಆಗ ಪೀಠವು ಮಲ್ಯ ಹೇಳಿಕೆಗೆ ಸಂಬಂಧಿಸಿ ಉತ್ತರ ನೀಡುವಂತೆ ಕೇಂದ್ರಕ್ಕೆ ನಿರ್ದೇಶನ ನೀಡಿ ಪ್ರಕರಣದ ಮಾರ್ಚ್‌ಗೆ ವಿಚಾರಣೆ ಮಂದೂಡಿತು.

✅ಪಾಲನೆ.ಇನ್ ವಾಟ್ಸ್ ಆ್ಯಪ್ ಗುಂಪಿಗೆ ಸೇರಿರಿ. ನ್ಯೂಸ್ & ವ್ಯೂಸ್ ಓದಿರಿ. ಆಲೋಚಿಸಿ. ಸ್ಪಂದಿಸಿ.
https://chat.whatsapp.com/H1gUYgrzvnQGZAhIQSGMHn

Related posts

ಆರ್‌ಸಿಬಿ ಗೆ 43 ರನ್‌ಗಳ ಗೆಲುವು

ಮಂಡ್ಯದಲ್ಲಿ ಪ್ರತಿಭಾ ನಂದಕುಮಾರ್ ಕಾವ್ಯಾನುಸಂಧಾನ ಜನವರಿ 24ಕ್ಕೆ

ಯುವಜನರಲ್ಲಿ ಮಾದಕ ವ್ಯಸನದ ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸಿ

Leave a Comment