NEWS

ಇಂದು ಹನುಮಾನ್ ಚಾಲೀಸಾ ಪಾರಾಯಣ

ಮೈಸೂರು: ಸಾಮೂಹಿಕ ಮಹಾಯಜ್ಞದಲ್ಲಿ ಅಂದಾಜು 75 ಸಾವಿರದಿಂದ 1 ಲಕ್ಷ ಮಂದಿ ಭಾಗಿ ಮೈಸೂರು: ರೈತರು, ಸೈನಿಕರು, ಜನಸಾಮಾನ್ಯರು ಸೇರಿದಂತೆ ಲೋಕ ಕಲ್ಯಾಣಕ್ಕಾಗಿ ಹಲವಾರು ವರ್ಷಗಳಿಂದ ನಡೆಸಿಕೊಂಡು ಬಂದಿರುವ ಶ್ರೀ ಹನುಮಾನ್ ಚಾಲೀಸಾ ಪಾರಾಯಣ ಮಹಾಯಜ್ಞವು ಶನಿವಾರ ಮಹಾರಾಜ ಕಾಲೇಜು ಮೈದಾನದಲ್ಲಿ ನಡೆಯಲಿದ್ದು, ಅದಕ್ಕಾಗಿ ಸಕಲ ಸಿದ್ಧತೆ ಪೂರ್ಣಗೊಂಡಿದೆ.

ಸಾಮೂಹಿಕ ಪಾರಾಯಣದಲ್ಲಿ ಅಂದಾಜು 75 ಸಾವಿರದಿಂದ 1 ಲಕ್ಷ ಮಂದಿ ಪಾಲ್ಗೊಳ್ಳಲಿದ್ದಾರೆ. ಮೈದಾನದಲ್ಲಿ ಗಣ್ಯರು, ಸ್ವಾಮೀಜಿಗಳು, ಸಂತರು ಕೂರುವು ದಕ್ಕಾಗಿ ಈಗಾಗಲೇ ವಿಶೇಷ ವೇದಿಕೆ ಸಿದ್ದಗೊಂಡಿದೆ. ಪಾರಾ ಯಣಕ್ಕಾಗಿ ಬೃಹತ್ ಶಾಮಿಯಾನ ಹಾಕಲಾಗಿದೆ. 40ರಿಂದ 50 ಸಾವಿರ ಮಂದಿ ಕುಳಿತು ಪಾರಾಯಣ ಮಾಡಲು ಆಸನದ ವ್ಯವಸ್ಥೆ ಮಾಡಲಾಗಿದೆ. ಮಠದ ವತಿಯಿಂದ ಕುಡಿಯುವ ನೀರು, ಪ್ರಸಾದ, ಹನುಮದ್ ಶ್ರೀರಕ್ಷೆ ನೀಡಲಾಗುತ್ತದೆ.

ತಾತ್ಕಾಲಿಕ ಶೌಚಾಲಯ, ತುರ್ತು ವೈದ್ಯಕೀಯ ಸೇವೆಗೆ ವ್ಯವಸ್ಥೆ ಮಾಡ ಲಾಗಿದೆ ಎಂದು ಶಾಸಕ ಟಿ.ಎಸ್.ಶ್ರೀವತ್ಸ, ಕೆ.ಹರೀಶ್‌ ಗೌಡ ಮತ್ತಿತರ ಗಣ್ಯರು ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು. ಶಾಸಕ ಟಿ.ಎಸ್.ಶ್ರೀವತ್ಸ ಮಾತನಾಡಿ, ನಗರದಲ್ಲಿ ಶನಿವಾರ ಮತ್ತು ಭಾನುವಾರ ಐತಿಹಾಸಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಅವರ ಉಪಸ್ಥಿತಿಯಲ್ಲಿ ಹನುಮಾನ್ ಚಾಲೀಸಾ ಸಾಮೂಹಿಕ ನಡೆಯಲಿದೆ. ಲೋಕಕಲ್ಯಾಣಕ್ಕಾಗಿ ನಡೆಯಲಿರುವ ಈ ಕಾರ್ಯ ಕ್ರಮದಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಜನರು ಭಾಗಿಯಾಗಲಿದ್ದಾರೆ.

ಎಲ್ಲಾ ರೀತಿಯ ಸಿದ್ಧತೆಗಳನ್ನು ಪಾರಾಯಣ ಮಾಡಲಾಗಿದೆ ಎಂದು ತಿಳಿಸಿದರು. ಶಾಸಕ ಕೆ.ಹರೀಶ್ ಗೌಡ ಮಾತನಾಡಿ, ಮೈಸೂರು ಹಾಗೂ ಬೇರೆ ಕಡೆಗಳಲ್ಲಿ ಹನುಮಾನ್ ಮೂರ್ತಿಗಳನ್ನು ಸ್ಥಾಪಿಸಿ ಭಕ್ತರನ್ನು ಸೆಳೆಯುತ್ತಿದ್ದಾರೆ. ಪಾರಾಯಣ ಅಲ್ಲದೆ ಶಿವ ಪಾರ್ವತಿ ಕಲ್ಯಾಣವೂ ನಡೆಯಲಿದೆ. ಗಣಪತಿ ಸಚ್ಚಿದಾನಂದ ಸ್ವಾಮೀಜಿ ಅವರು ಸದಾ ಜನರ ಪರವಾಗಿ ಯೋಚಿಸುತ್ತಾರೆ. ಹನುಮನ ಭಕ್ತರಿಗೆ ಪ್ರತಿವರ್ಷ ಚಾಲೀಸಾ ಪಾರಾಯಣ ಮಾಡಿಸಿ ಭಕ್ತಿಮಾರ್ಗದ ಕಡೆಗೆ ಕೊಂಡೊಯ್ಯುತ್ತಿದ್ದಾರೆ ಎಂದರು.

ಮುಡಾ ಮಾಜಿ ಅಧ್ಯಕ್ಷ ಎಚ್.ವಿ.ರಾಜೀವ್ ಮಾತನಾಡಿ, 2016ರಲ್ಲಿ ನಡೆದಿದ್ದ ಪಾರಾಯಣ ಈಗ ಎರಡನೇ ಬಾರಿಗೆ ನಡೆಯುತ್ತಿದೆ. ಜನರು ಸ್ವಯಂಪ್ರೇರಣೆಯಿಂದ ಆಗಮಿಸುತ್ತಿದ್ದಾರೆ. ಮನುಷ್ಯರ ಒಳಿತಾಗಿ ಸಂಕಲ್ಪಗಳನ್ನು ಮಾಡುತ್ತಿರುವ ಶ್ರೀಗಳ ಕಾರ್ಯಕ್ಕೆ ಇಡೀ ನಗರದ ಜನತೆ ಬೆಂಬಲ ನೀಡಿದ್ದಾರೆ ಎಂದರು.

ಮಾಜಿ ಶಾಸಕ ಎಲ್.ನಾಗೇಂದ್ರ ಮಾತನಾಡಿ, ಪಾರ್ಕಿಂಗ್, ಪ್ರಸಾದ, ಕುಡಿಯುವ ನೀರು, ಶೌಚಾಲಯ, ವೈದ್ಯಕೀಯ ಸೇವೆ ಸೇರಿದಂತೆ ಇನ್ನಿತರೆ ಸೌಲಭ್ಯಗಳನ್ನು ಮಾಡಲಾಗಿದೆ ಎಂದು ಮಾಹಿತಿ ನೀಡಿದರು. ಮಾಜಿ ಮಹಾಪೌರ ನಾರಾಯಣ ಮಾತನಾಡಿದರು. ರಾಜ್ಯ ಬಿಜೆಪಿ ಉಪಾಧ್ಯಕ್ಷ ಎಂ.ರಾಜೇಂದ್ರ, ಅವಧೂತ ದತ್ತಪೀಠದ ಕಾರ್ಯದರ್ಶಿ ಪ್ರಸಾದ್, ಬ್ರಾಹ್ಮಣ ಮಹಾಸಭಾದ ನಂ. ಶ್ರೀಕಂಠಕುಮಾರ್ ಮತ್ತಿತರರು ಹಾಜರಿದ್ದರು.

✅ಪಾಲನೆ.ಇನ್ ವಾಟ್ಸ್ ಆ್ಯಪ್ ಗುಂಪಿಗೆ ಸೇರಿರಿ ನ್ಯೂಸ್ & ವ್ಯೂಸ್ ಓದಿರಿ. ಆಲೋಚಿಸಿ. ಸ್ಪಂದಿಸಿ.
https://chat.whatsapp.com/H1gUYgrzvnQGZAhIQSGMHn

Related posts

ಆರೋಗ್ಯ ಇಲಾಖೆಯಲ್ಲಿ ಔಷಧ ಕೊರತೆ,ಖರೀದಿಯಲ್ಲಿ ಅವ್ಯವಹಾರ: ವಿಜಯೇಂದ್ರ ಆರೋಪ

ಜಿಲ್ಲೆಯಲ್ಲಿ ನಿರುದ್ಯೋಗ ಹೋಗಲಾಡಿಸಲು ಉದ್ಯಮಗಳಿಗೆ ಒತ್ತು ನೀಡಿ

2026ರ ಐಪಿಎಲ್ ಗಾಗಿ RCB ಜೆರ್ಸಿ ಅನಾವರಣ: ಹೊಸ ಋತುವಿಗೆ ವಿಶಿಷ್ಟ ಲೋಗೋ

Leave a Comment