NEWS

ತೆಂಗಿನ ತೋಟಗಳಲ್ಲಿ ರೋಗೋಸ್ ಬಿಳಿನೊಣ ಬಾಧೆತಡೆಗಟ್ಟುವ ಕ್ರಮಗಳ ಕುರಿತು ರೈತರಿಗೆ ಸಲಹೆ

ಪಾಲನೆ ನ್ಯೂಸ್

ತುಮಕೂರು : ತೋಟಗಾರಿಕೆ ಇಲಾಖೆ ವತಿಯಿಂದ ತೆಂಗಿನ ತೋಟಗಳಲ್ಲಿ ರೋಗೋಸ್ ಬಿಳಿ ನೊಣಗಳ ಬಾಧೆಯನ್ನು ತಡೆಗಟ್ಟುವ ಕ್ರಮಗಳ
ಕುರಿತು ರೈತರಿಗೆ ಸಲಹೆ ನೀಡಲಾಗಿದೆ.


ಹಾನಿಯ ಲಕ್ಷಣಗಳು : ಬಿಳಿನೊಣದ ಪ್ರೌಢ ಕೀಟವು ಇತರೆ ಸಾಮಾನ್ಯ ಬಿಳಿನೋಣಗಳಿಗಿಂತ ಮೂರು ಪಟ್ಟು ದೊಡ್ಡದಾಗಿರುತ್ತದೆ.
ಹೆಣ್ಣು ಬಿಳಿನೊಣವು ಎಲೆಯ ಕೆಳಭಾಗದಲ್ಲಿ ವೃತ್ತಾಕಾರವಾಗಿ ಮೊಟ್ಟೆಯನ್ನು ಇಡುತ್ತದೆ. ಕೀಟವು ಹಳದಿ ಮೈಬಣ್ಣ ಹೊಂದಿದ್ದು, ಬಿಳಿ
ಬಣ್ಣದ ರೆಕ್ಕೆಗಳ ಹಿಂಬದಿಯಲ್ಲಿ ಕಪ್ಪಾದ ಮಚ್ಚೆಗಳಿರುತ್ತದೆ. ಮರಿಗಳು ಹಾಗೂ ಪ್ರೌಢ ಕೀಟಗಳು ಎಲೆಗಳಿಂದ ರಸ ಹೀರುತ್ತವೆ.ಕೀಟಗಳು ಸಿಹಿಯಾದ ಅಂಟು ದ್ರಾವಣವನ್ನು ವಿಸರ್ಜನೆ ಮಾಡುವುದರಿಂದ ಬೂದು ಬಣ್ಣದ ಶಿಲೀಂದ್ರ ಬೆಳೆದು ಎಲೆಗಳು ಕಪ್ಪು ಬಣ್ಣಕ್ಕೆ ತಿರುಗುತ್ತದೆ.

ಹತೋಟಿ ಕ್ರಮಗಳು : ತೆಂಗಿನ ತೋಟಗಳಲ್ಲಿ ಎಕರೆಗೆ ೧೦ರಂತೆ ಹಳದಿ ಅಂಟಿನ ಬಲೆಗಳನ್ನು ಅಳವಡಿಸಬೇಕು. ೫ ಮಿ.ಲೀ. ಬೇವಿನ ಎಣ್ಣೆ ಮತ್ತು ೦.೫ ಗ್ರಾಂ ಸಾಬೂನು ಪುಡಿಯನ್ನು ಪ್ರತಿ ಲೀಟರ್ ನೀರಿನಲ್ಲಿ ಬೆರೆಸಿ ೧೫ ದಿನಗಳ ಅಂತರದಲ್ಲಿ ಮೂರು ಬಾರಿ ಸಿಂಪಡಣೆ ಮಾಡುವುದರಿಂದ ಬಿಳಿನೊಣದ ಬಾಧೆಯನ್ನು ಪರಿಣಾಮಕಾರಿಯಾಗಿ ಹತೋಟಿ ಮಾಡಬಹುದು.

ಪ್ರತಿ ಮರಕ್ಕೆ ೩ ರಿಂದ ೪ ಕೆ.ಜಿ. ಬೇವಿನ ಹಿಂಡಿ ಯನ್ನು ನೀಡುವುದರಿಂದ ಕೀಟ ಮತ್ತು ರೋಗ ನಿರೋದಕ ಶಕ್ತಿ ಹೆಚ್ಚಿಸಬಹುದು. ಇದೀಗ ಹೊಸದಾಗಿ
ಜೈವಿಕ ಶೀಲಿಂದ್ರ “ಐಸಿರಿಯ ಫ್ಯೂಮೊಸೋರೋಸಿಯಾ ೫ ಗ್ರಾಂ ಪ್ರತಿ ಲೀಟರ್‌ನಂತೆ ಬಳಸಿ ಪ್ರೌಢ ಮತ್ತು ಮರಿ ಗಳನ್ನು ನಾಶ ಮಾಡುವುದರಿಂದ
ಸಾಕಷ್ಟು ಪ್ರಮಾಣದಲ್ಲಿ ಬಿಳಿನೊಣಗಳನ್ನು ನಿಯಂತ್ರಣ ಮಾಡಬಹುದು.

✅ಪಾಲನೆ.ಇನ್ ವಾಟ್ಸ್ ಆ್ಯಪ್ ಗುಂಪಿಗೆ ಸೇರಿರಿ ನ್ಯೂಸ್ & ವ್ಯೂಸ್ ಓದಿರಿ. ಆಲೋಚಿಸಿ. ಸ್ಪಂದಿಸಿ.
https://chat.whatsapp.com/H1gUYgrzvnQGZAhIQSGMHn

Related posts

ಸರ್ಕಾರಿ ಶಾಲೆಗಳ ಉಳಿವಿಗೆ ಮೂಲ ಸೌಕರ್ಯ ಕಲ್ಪಿಸಿ

ಎಐಟಿಎ 14 ವರ್ಷದೊಳಗಿನವರ ರ್ಯಾಂಕಿಂಗ್ ಪಟ್ಟಿಯಲ್ಲಿ ಅಗ್ರ ಶ್ರೇಯಾಂಕಿತರಾಗಿರುವ ಪದ್ಮಪ್ರಿಯಾ

ಬಾಲ್ಯ ವಿವಾಹವು ಒಂದು ಸಾಮಾಜಿಕ ಪಿಡುಗು: ಡಾ. ಕುಮಾರ

Leave a Comment