NEWS

ಯುವ ಜನತೆಗೆ ಕಾನೂನಿನ ಜ್ಞಾನ ಬಹಳ ಮುಖ್ಯ ಪೋಷಕರು ತಮ್ಮ ಮಕ್ಕಳ ಮೇಲೆ ನಿಗಾವಹಿಸಬೇಕು – ಹೆಚ್. ಶಶಿಧರ ಶೆಟ್ಟಿ

ಪಾಲನೆ ನ್ಯೂಸ್

ಮಂಡ್ಯ: ಯುವಜನತೆಯೂ ಕಾನೂನಿನ ಜ್ಞಾನ ಬಹಳ ಅಗತ್ಯವಾದುದು ಕಾನೂನಿನ ಮಾಹಿತಿಗಳನ್ನು ತಿಳಿದುಕೊಳ್ಳಬೇಕು. ಕಾನೂನಿನ ನಿಯಮಗಳ ಉಲ್ಲಂಘನೆಯ ಬಗ್ಗೆ ಅರಿವು ಮೂಡಿಸಬೇಕು ಎಂದು ಜಿಲ್ಲಾ ನ್ಯಾಯಾಧೀಶರು ಹಾಗೂ ಸದಸ್ಯ ಕಾರ್ಯದರ್ಶಿಗಳು, ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ, ಹೆಚ್. ಶಶಿಧರ ಶೆಟ್ಟಿ ರವರು ಹೇಳಿದರು.

ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ, ಬೆಂಗಳೂರು, ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ, ಬೆಂಗಳೂರು, ರಾಜ್ಯ ಮಕ್ಕಳ ರಕ್ಷಣಾ ನಿರ್ದೇಶನಾಲಯ ಬೆಂಗಳೂರು ಬಾಲ ನ್ಯಾಯ ಸಮಿತಿ ಕರ್ನಾಟಕ ಉಚ್ಚ ನ್ಯಾಯಾಲಯ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಂಡ್ಯ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ವಕೀಲರ ಸಂಘ (ರಿ), ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಪೊಲೀಸ್ ಇಲಾಖೆ, ಶಿಕ್ಷಣ ಇಲಾಖೆ,ಇವರ ಸಂಯುಕ್ತ ಆಶ್ರಯದಲ್ಲಿ ಜಿಲ್ಲೆಯನ್ನು “ಬಾಲ್ಯವಿವಾಹ ಮುಕ್ತ ಮಾಡುವ ಸಂಕಲ್ಪ” ಅಭಿಯಾನದ ಅಂಗವಾಗಿ ಮಕ್ಕಳ ಸಂರಕ್ಷಣೆ ಮತ್ತು ಕಾನೂನು ಕುರಿತು ಬೃಹತ್ ತರಬೇತಿ ಕಾರ್ಯಾಗಾರ ಮಂಡ್ಯ ನಗರದ ಡಾ. ಬಿ.ಆರ್ ಅಂಬೇಡ್ಕರ್ ಭವನದಲ್ಲಿ ಜಿಲ್ಲಾ ನ್ಯಾಯಾಧೀಶರು ಹಾಗೂ ಸದಸ್ಯ ಕಾರ್ಯದರ್ಶಿಗಳು, ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ, ಹೆಚ್. ಶಶಿಧರ ಶೆಟ್ಟಿ ರವರು ಕಾರ್ಯಕ್ರಮ ವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು.

ಯುವಜನತೆಯು ದೇಶಕ್ಕೆ ಪ್ರೇರಣೆಯಾಗಬೇಕು ಹೊರತು ಮಾದಕ ವಸ್ತುಗಳಿಗೆ ಮೊರೆ ಹೋಗಬಾರದು.
ಇತ್ತೀಚಿನ ದಿನಗಳಲ್ಲಿ ಡ್ರಗ್ಸ್ ಗೆ ಮಕ್ಕಳು ಮೊರೆ ಹೋಗುತ್ತಿದ್ದಾರೆ ಪೋಷಕರು ಮತ್ತು ಅಧಿಕಾರಿಗಳು ಮಕ್ಕಳ ಬಗ್ಗೆ ನಿಗ ವಹಿಸಬೇಕು ಎಂದು ಹೇಳಿದರು.

ಸಾರ್ವಜನಿಕರಲ್ಲಿ ಕಾನೂನಿನ ಅರಿವಿನ ಬಗ್ಗೆ ಮಾಹಿತಿ ತಿ ಕಾನೂನಿನ ಜ್ಞಾನ ಬಹಳ ಮುಖ್ಯ ವಾಹನ ಚಲಾಯಿಸುವ ಹೆಲ್ಮೆಟ್, ಚಾಲನಾ ಪರವಾನಗಿ,ವಾಹನದ ಭದ್ರತಾ ವಿಮೆಯನ್ನು ಹೊಂದಿರಬೇಕು ಎಂದು ಹೇಳಿದರು

ಮಕ್ಕಳ ಮೇಲೆ ದೌರ್ಜನ್ಯ ನಡೆದರೆ ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಬೇಕು. ದೇಶದಲ್ಲಿ 43% ಸಣ್ಣ ಹುಡುಗರ ಮೇಲೆ ಲೈಂಗಿಕ ದೌರ್ಜನ್ಯ ನಡೆಯುತ್ತಿದೆ. ಆದ್ದರಿಂದ ಪೋಷಕರು ಮಕ್ಕಳ ಮೇಲೆ ಜ್ಞಾನ ವಹಿಸಬೇಕು ಎಂದು ಹೇಳಿದರು.

ಬಾಲ್ಯ ವಿವಾಹ ಮುಕ್ತ ಜಿಲ್ಲೆಯನಾಗಿಸಲು ಪೋಷಕರ ಪಾತ್ರ ಬಹಳ ಮುಖ್ಯ.ಮಕ್ಕಳನ್ನು ದೇಶದ ಸಂಪತ್ತನ್ನಾಗಿ ಮಾಡಬೇಕೆ ಹೊರತು ಮಕ್ಕಳ ಆಸೆ,ಆಕಾಂಕ್ಷೆ,ಭಾವನೆಯನ್ನು ಮೊಟಕುಗೊಳಿಸಬಾರದು ಎಂದು ಹೇಳಿದರು

ಮಕ್ಕಳನ್ನು ಸಾಮಾಜಿಕ ಪಿಡುಗಿನಿಂದ ಹೊರ ತರಲು ಆಶಾ ಕಾರ್ಯಕರ್ತರ ಮಹತ್ವ ಬಹಳ ಮುಖ್ಯವಾಗಿದೆ ಹಿರಿಯರನ್ನು ಮತ್ತು ಮಕ್ಕಳನ್ನು ಪ್ರೀತಿಯಿಂದ ನೋಡಿಕೊಳ್ಳಬೇಕು ಮತ್ತು ಗೌರವಿಸಬೇಕು ಎಂದು ತಿಳಿಸಿದರು

ಜಿಲ್ಲಾಧಿಕಾರಿಗಳಾದ ಡಾ. ಕುಮಾರ ರವರು ಕಾರ್ಯಕ್ರಮದ ಅಧ್ಯಕತೆಯನ್ನು ವಹಿಸಿ ಮಾತನಾಡಿ
ಪ್ರತಿ ವರ್ಷ ಸುಮಾರು 65 ರಿಂದ 70 ಬಾಲ್ಯ ವಿವಾಹ ಪ್ರಕರಣಗಳು ದಾಖಲಾಗಿದೆ ಆದರೆ ಕಳೆದ ವರ್ಷ ಕೇವಲ 14 ಪ್ರಕರಣಗಳು ಮಾತ್ರ ದಾಖಲಾಗಿವೆ ಜಿಲ್ಲೆಯಲ್ಲಿ ಬಾಲ್ಯ ವಿವಾಹ ಮುಕ್ತ ಜಿಲ್ಲೆಯನ್ನಾಗಿ ಮಾಡಲು ಹಲವು ಕಾರ್ಯಕ್ರಮಗಳನ್ನು ಮಾಡಲಾಗಿದೆ ಎಂದು ಹೇಳಿದರು.

ಸರ್ಕಾರ, ಸಂಘ ಸಂಸ್ಥೆ, ಅಧಿಕಾರಿಗಳು, ಎಲ್ಲರೂ ಸಾರ್ವಜನಿಕರು ಜೊತೆಯಾಗಿ ಬಾಲ್ಯ ವಿವಾಹವನ್ನು ತೊಡೆದು ಹಾಕಬೇಕು ಎಂದು ಹೇಳಿದರು ಹೆಣ್ಣಿಗೆ ಸಿಗಬೇಕಾದಂತಹ ಗೌರವ, ಸ್ಥಾನಮಾನ ಎಲ್ಲವೂ ಕೂಡ ಸಿಗಬೇಕು. ಎಂದು ಹೇಳಿದರು.

ಜಿಲ್ಲಾ ಬಾಲ್ಯ ವಿವಾಹ ಮುಕ್ತ ಜಿಲ್ಲೆಯನ್ನಾಗಿಸಲು ಪೋಷಕರು ಮತ್ತು ಸಮಾಜದ ಜವಾಬ್ದಾರಿ ಬಹಳ ಅಗತ್ಯ. ಬಾಲ್ಯವಿವಾಹ ಮುಕ್ತ ಜಿಲ್ಲೆಯನ್ನಾಗಿಸಲು ಶಿಕ್ಷಣದಿಂದ ಮಾತ್ರ ಸಾಧ್ಯ. ಎಂದು ಹೇಳಿದರು.

ಬಾಲ್ಯ ವಿವಾಹ ಕುರಿತು ಅಂಗನವಾಡಿಕಾರ್ಯಕರ್ತರು ಹಾಗೂ ಆಶಾಕಾರ್ಯಕರ್ತೆಯರು ಗ್ರಾಮೀಣ ಪ್ರದೇಶಗಳಲ್ಲಿ ಅರಿವು ಮೂಡಿಸುವಂತಹ ಕಾರ್ಯಕ್ರಮಗಳನ್ನು ಮಾಡಬೇಕು ಎಂದು ಸೂಚಿಸಿದರು.

ಬಾಲ್ಯ ವಿವಾಹ ಪದ್ಧತಿಯನ್ನು ಕಾನೂನಿನಿಂದ ಮಾತ್ರ ಹೋಗಲಾಡಿಸಲು ಸಾಧ್ಯವಿಲ್ಲ ಪೋಷಕರ ಮಾನವೀಯತೆ, ಹೃದಯವಂತಿಕೆದಿಂದ ಮಾತ್ರ ಸಾಧ್ಯ ಎಂದು ತಿಳಿಸಿದರು.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ,ಪ್ರಭಾರ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಅಧ್ಯಕ್ಷರಾದ ಶಿವಪ್ರಸಾದ್‌ ಮಾತನಾಡಿ ಎಲ್ಲರಿಗೂ ಸಮಾನವಾದ ಹಕ್ಕುಗಳು ಇವೆ. ಮಕ್ಕಳ ಪರಿಪೂರ್ಣ ಬೆಳವನೆಗೆ ತುಂಬಾ ಮುಖ್ಯ, ಮಕ್ಕಳ ಭಾವನೆಗಳನ್ನು ಕಟ್ಟಿ ಹಾಕಬಾರದು ಎಂದು ಹೇಳಿದರು.

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ಕೆ.ಆ‌ರ್. ನಂದಿನಿ ಮಾತನಾಡಿ ಕಾನೂನಿನ ನಿಯಮಗಳನ್ನು ಪಾಲಿಸಬೇಕು.
ಯುವಜನತೆ ಕಾನೂನಿನ ನಿಯಮಗಳನ್ನು ತಿಳಿದುಕೊಳ್ಳುವುದು ತುಂಬಾ ಅಗತ್ಯ ಎಂದು ಹೇಳಿದರು.

ಗ್ರಾಮೀಣ ಪ್ರದೇಶಗಳಲ್ಲಿ ಆಶಾ ಕಾರ್ಯಕರ್ತೆಯರು ಮತ್ತು ಅಂಗನವಾಡಿ ಕಾರ್ಯಕರ್ತೆಯ ಪಾತ್ರ ಬಹಳ ಮುಖ್ಯ.ಸಾಮಾಜಿಕವಾಗಿ ಆರ್ಥಿಕವಾಗಿ,ಧಾರ್ಮಿಕವಾಗಿ ಜಿಲ್ಲೆಯು ಶ್ರೀಮಂತ ಜಿಲ್ಲೆಯಾಗಿದೆ. ಜಿಲ್ಲೆಯಲ್ಲಿ ಬಾಲ್ಯ ವಿವಾಹ ಮುಕ್ತ ಜಿಲ್ಲೆಯನ್ನಾಗಿಸಬೇಕು ಪೋಷಕರು ಮಕ್ಕಳ ಪ್ರತಿಭೆಯನ್ನು ಗುರುತಿಸಬೇಕು ಮತ್ತು ಮಕ್ಕಳ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಬೇಕು.ಎಂದು ಹೇಳಿದರು.

ಗಂಡು – ಹೆಣ್ಣು ಎಂಬ ತಾರತಮ್ಯವಿಲ್ಲದೆ ಎಲ್ಲರಿಗೂ ಸಮಾನವಾದ ರೀತಿಯಲ್ಲಿ ನೋಡಬೇಕು ಹೆಣ್ಣು ಮಕ್ಕಳನ್ನ ದೇಶವನ್ನು ಪ್ರತಿನಿಧಿಸುವಂತಹ ಸ್ಥಾನಮಾನವನ್ನು ದೊರಕಿಸಬೇಕು ಎಂದು ಹೇಳಿದರು.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಸದಸ್ಯ ಕಾರ್ಯದರ್ಶಿಗಳಾದ ಆನಂದ.ಎಂ ರವರು ಮಾತನಾಡಿ ಜಿಲ್ಲೆಯನ್ನು ಬಾಲ್ಯ ವಿವಾಹ ಮುಕ್ತ ಜಿಲ್ಲಾಯಾಗಿ ಮಾಡಬೇಕು ಮತ್ತು ಭ್ರೂಣ ಹತ್ಯೆಯನ್ನು ತಡೆಯಬೇಕು.ಹೆಣ್ಣು ಮಕ್ಕಳ್ನನು ಗೌರವಿಸಬೇಕು ಮಕ್ಕಳನ್ನು ಪ್ರೇರಣೆ ಆಗುವಂತೆ ಮಾಡಬೇಕು.ವ್ಯಾಜ್ಯ ಮುಕ್ತ ಜಿಲ್ಲೆಯಾಗಿ ಮಾಡಬೇಕು ದೋರಣೆಯನ್ನು ತೊಲಗಿಸಬೇಕು ಸಾರ್ವಜನಿಕರು ಭಾರತ ಸಂವಿಧಾನ ಬದ್ದವಾಗಿ ಕಾರ್ಯವನ್ನು ನಿರ್ವಹಿಸಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯರಾದ ವೆಂಕಟೇಶ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ನಿರ್ದೇಶನಾಲಯ ಜಂಟಿ ನಿರ್ದೇಶಕರಾದ ನಿಶ್ಚಲ್ ಬಿ.ಹೆಚ್, ಮಕ್ಕಳ ರಕ್ಷಣಾ ನಿರ್ದೇಶನಾಲಯ ನಿರ್ದೇಶಕರಾದ ಡಾ.ಸ್ನೇಹ ಸಿ.ವಿ ವಕೀಲರ ಸಂಘ,ಅಧ್ಯಕ್ಷರಾದ ಸತ್ಯಾನಂದ.ಟಿ.ಎಸ್‌. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಉಪ ನಿರ್ದೇಶಕರಾದ ಆಶಾ, ರಶ್ಮಿ ರವರು ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು.

✅ಪಾಲನೆ.ಇನ್ ವಾಟ್ಸ್ ಆ್ಯಪ್ ಗುಂಪಿಗೆ ಸೇರಿರಿ ನ್ಯೂಸ್ & ವ್ಯೂಸ್ ಓದಿರಿ. ಆಲೋಚಿಸಿ. ಸ್ಪಂದಿಸಿ.
https://chat.whatsapp.com/H1gUYgrzvnQGZAhIQSGMHn

Related posts

ಮರ ಸಂರಕ್ಷಣಾ ಸಮಿತಿ ರಚನೆಗೆ ಮೈಸೂರು ಗ್ರಾಹಕರ ಪರಿಷತ್ ನಿಯೋಗ ಮನವಿ

ಪಾಂಡವಪುರವನ್ನು ಸಂಪೂರ್ಣ ಸಾವಯವ ತಾಲ್ಲೂಕಾಗಿ ಪರಿವರ್ತನೆ ಮಾಡಲು ಘೋಷಣೆ

ಏ. 15 ರಂದು ಆದಿಚುಂಚನಗಿರಿಗೆ ಪ್ರಧಾನಮಂತ್ರಿಗಳ ಆಗಮನ

Leave a Comment