NEWS

ಬಂಡಿಸಿದ್ದೇಗೌಡ ಫೌಂಡೇಶನ್‌ನಿಂದ ಶಾಲಾ ವಾಹನ ಕೊಡುಗೆ

ಪಾಲನೆ ನ್ಯೂಸ್


ಮಂಡ್ಯ: ಶ್ರೀರಂಗಪಟ್ಟಣ ತಾಲೂಕಿನ ಅರಕೆರೆ ಬಂಡಿಸಿದ್ದೇಗೌಡ ಫೌಂಡೇಶನ್ ವತಿಯಿಂದ ಮಂಡ್ಯದ ಮರೀಗೌಡ ಬಡಾವಣೆಯ ಆಶಾ ಸದನ ವಿಶೇಷಚೇತನ ಮಕ್ಕಳ ಶಾಲೆಗೆ ೯ ಲಕ್ಷರೂ. ವೆಚ್ಚದಉಚಿತ ನೂತನ ಶಾಲಾ ವಾಹನವನ್ನು ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ ಅಧ್ಯಕ್ಷ ಹಾಗೂ ಶ್ರೀರಂಗಪಟ್ಟಣ ವಿಧಾನಸಭಾಕ್ಷೇತ್ರ ಶಾಸಕ ಎ.ಬಿ.ರಮೇಶ ಬಂಡಿಸಿದ್ದೇಗೌಡ ವಿತರಣೆ ಮಾಡಿದರು.


ಈ ಸಂದರ್ಭದಲ್ಲಿ ಮಾತನಾಡಿದಅವರು ಬಂಡಿಸಿದ್ದೇಗೌಡ ಫೌಂಡೇಶನ್ ವತಿಯಿಂದಜನೋಪಯೋಗಿ ಕೆಲಸಕ್ಕೆ ಚಾಲನೆ ನೀಡಿದ್ದೇವೆ. ಆಶಾ ಸದನ ಶಾಲೆಯು ಈ ಭಾಗದಲ್ಲಿ ಬುದ್ಧಿ ಮಾಂದ್ಯ ಮಕ್ಕಳಿಗೆ ಒಳ್ಳೆಯ ಸೇವೆ ನೀಡುತ್ತಿದೆ. ಅಂಗವಿಕಲರು ಹಾಗೂ ಬುದ್ಧಿಮಾಂದ್ಯ ಮಕ್ಕಳಿಗೆ ಅನುಕೂಲ ಆಗುವ ನಿಟ್ಟಿನಲ್ಲಿ
ಸಣ್ಣಕೊಡುಗೆಯಾಗಿ ಬಂಡಿಸಿದ್ದೇಗೌಡ ಫೌಂಡೇಶನ್ ವತಿಯಿಂದ ಶಾಲಾವಾಹನ ವಿತರಣೆ ಮಾಡಿದ್ದೇವೆ ಎಂದು ಹೇಳಿದರು.


ಬಂಡಿಸಿದ್ದೇಗೌಡ ಫೌಂಡೇಶನ್ ವತಿಯಿಂದ ಲ್ಯಾಪ್ಟಾಪ್ವಿ ತರಣೆ ಮಾಡುವಕಾರ್ಯಕ್ರಮಕ್ಕೂ ಚಾಲನೆ ನೀಡುತ್ತಿದ್ದೇವೆ. ಈಗಾಗಲೇ ೧೩೦೦ಕ್ಕೂ ಅರ್ಜಿಗಳು ಬಂದಿದ್ದು ಮೊದಲ ಹಂತವಾಗಿ ಫೆಬ್ರವರಿ ಕೊನೆಯ ವಾರದಲ್ಲಿ ಸಮಯ ನಿಗದಿ ಮಾಡಿ ಪ್ರಥಮ ವರ್ಷದ ಬಿಇ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ೫೦೦ ಲ್ಯಾಪ್ಟಾಪ್ ಕೊಡುವ ಕಾರ್ಯಕ್ರಮಕ್ಕೂ ಚಾಲನೆ ನೀಡುತ್ತೇವೆ ಎಂದು ಹೇಳಿದರು. ಹಂತ ಹಂತವಾಗಿ ಉಳಿದವರಿಗೂ ಲ್ಯಾಪ್‌ಟಾಪ್ ಕೊಡುವ ಕಾರ್ಯಕ್ರಮಕ್ಕೂ ಚಾಲನೆ ನೀಡುತ್ತೇವೆ ಎಂದರು.


ಆಶಾಸದನದಲ್ಲಿ ೪೦ ಮಂದಿ ಸಿಬ್ಬಂದಿಗಳು ಕೆಲಸ ಮಾಡುತ್ತಿದ್ದು, ಬುದ್ಧಿಮಾಂದ್ಯ ಮಕ್ಕಳಿಗೆ ೧೦ನೇ ತರಗತಿ ವರೆಗೂ ವ್ಯಾಸಂಗ ಮಾಡಲು ಅವಕಾಶವಿದ್ದು, ನಂತರ ಕಾಳೇನ ಹಳ್ಳಿಯಲ್ಲಿ ಇವರುಗಳು ಸ್ಕಿಲ್ ತರಬೇತಿ ಪಡೆಯಲು ಅವಕಾಶವಿದೆ ಎಂದರು. ಈ ವೇಳೆ ಮುಖಂಡರಾದ ಕಾಳೇನಹಳ್ಳಿ ಮಂಜುನಾಥ್, ಎಂ.ಯಶಸ್,ಕೃಷ್ಣ,ಸೆಂಟ್‌ಥಾಮಸ್ ಮಿಷನ್ ಸೊಸೈಟಿ ಅಧ್ಯಕ್ಷ ಫಾ.ಸೌಜನ್, ಕಾರ್ಯದರ್ಶಿ ಜಿ.ಬಿ.ಅಂಟೋನಿ, ನಿರ್ದೇಶಕ ಫಾ.ಹಬಿ, ಪ್ರಾಂಶುಪಾಲ ಪಾಜಾಯಿಸ್ಟನ್ ಜೋಸ್, ಸೇರಿದಂತೆ ಇತರರು ಹಾಜರಿದ್ದರು.

✅ಪಾಲನೆ.ಇನ್ ವಾಟ್ಸ್ ಆ್ಯಪ್ ಗುಂಪಿಗೆ ಸೇರಿರಿ ನ್ಯೂಸ್ & ವ್ಯೂಸ್ ಓದಿರಿ. ಆಲೋಚಿಸಿ. ಸ್ಪಂದಿಸಿ.
https://chat.whatsapp.com/H1gUYgrzvnQGZAhIQSGMHn

Related posts

ಅನುದಾನಿತ ಶಾಲಾ ಕಾಲೇಜುಗಳ ನೌಕರರಿಂದ ಬೆಳಗಾವಿ ಚಲೋ

ಸ್ಮೃತಿ ಪಡೆಗೆ 2ನೇ ಪ್ರಶಸ್ತಿ ತವಕ | ಕ್ಯಾಪಿಟಲ್ಸ್‌ಗೆ ಒಲಿಯುವುದೇ ಲಕ್?

ಪಂಚ ಗ್ಯಾರಂಟಿ ಯೋಜನೆಯಡಿ ಐದು ವರ್ಷದಲ್ಲಿ  3 ಲಕ್ಷ ಕೋಟಿ ಹಣವನ್ನು  ಫಲಾನುಭವಿಗಳಿಗೆ ನೀಡಲಾಗುವುದು: ಸಚಿವ ಚಲುವರಾಯ ಸ್ವಾಮಿ

Leave a Comment