NEWS

‘ ಯುವಕರ ಪಾತ್ರ ರಾಷ್ಟ್ರ ನಿರ್ಮಾಣದಲ್ಲಿ ಅತ್ಯಂತ ಮಹತ್ವದ್ದು’

ಮೈಸೂರಿನ ಬಿಜೆಪಿ ಕಚೇರಿಯಲ್ಲಿ ಗಣರಾಜ್ಯೋತ್ಸವ ಆಚರಣೆ

ಪಾಲನೆ ನ್ಯೂಸ್

ಮೈಸೂರು: ಕಾಮೆಸೂರು ಸಭಾರತೀಯ ಸಂವಿಧಾನವು ಕೇವ ಸಮಾನತೆ, ಸ್ವಾತಂತ್ರ್ಯ ಮತ್ತು ನ್ಯಾಯದ ಮೌಲ್ಯಗಳನ್ನು ಪ್ರತಿಯೊಬ್ಬ ನಾಗರಿಕನ ಜೀವನದಲ್ಲಿ ಅಳವಡಿಸುವ ಶಕ್ತಿಯುತ ದಸ್ತಾವೇಜು ಎಂದು ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅಭಿಪ್ರಾಯಪಟ್ಟರು.

ನಗರದ ಬಿಜೆಪಿ ಕಚೇರಿಯಲ್ಲಿ ನಡೆದ ಗಣರಾಜ್ಯೋತ್ಸವ ದಿನಾಚರಣೆಯಲ್ಲಿ ಧ್ವಜಾರೋ ಹಣ ನೆರವೇರಿಸಿ ಮಾತನಾಡಿದ ಅವರು, ಗಣರಾಜ್ಯೋತ್ಸವವು ದೇಶದ ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ, ಸಂವಿಧಾನ ಶಿಲ್ಪಿಗಳ ಪರಿಶ್ರಮಮತ್ತುರಾಷ್ಟ್ರದ ಏಕತೆಯಸಂಕೇತವಾಗಿದ್ದು, ಪ್ರತಿಯೊಬ್ಬ ನಾಗರಿಕನೂ ಸಂವಿಧಾನಾತ್ಮಕ ಕರ್ತವ್ಯಗಳನ್ನು ನಿಷ್ಠೆಯಿಂದ ಪಾಲಿಸುವ ಸಂಕಲ್ಪ ಮಾಡಬೇಕಾದ ದಿನವಾಗಿದೆಯೆಂದು ಹೇಳಿದರು.

ರಾಷ್ಟ್ರ ನಿರ್ಮಾಣದಲ್ಲಿ ಯುವಕರ ಪಾತ್ರ ಅತ್ಯಂತ ಮಹತ್ವದ್ದಾಗಿದ್ದು, ಸಂವಿಧಾನದ ಆದರ್ಶಗಳನ್ನು ಜೀವನದಲ್ಲಿ ಆಳವಡಿಸಿಕೊಂಡಾಗ ಮಾತ್ರ ವಿಕಸಿತ ಭಾರತದ ಕನಸು ನನಸಾಗಲಿದೆ ಎಂದು ಹೇಳಿದರು. ಬಿಜೆಪಿ ನಗರ ಅಧ್ಯಕ್ಷ ಎಲ್.ನಾಗೇಂದ್ರ, ವಿಭಾಗೀಯ ಪ್ರಭಾರಿ ಮೈ.ವಿ.ರವಿಶಂಕರ್, ರಾಜ್ಯ ಪಕೋಷಗಳ ಸಂಚಾಲಕರಾದಮ್ ಪಗೇಶ್ ಸಿ.ಕೆ.ರುದ್ರಮೂರ್ತಿ, ಬಿ.ಎಂ.ರಘು, ಪರೀಕ್ಷಿತ್ ರಾಜೆ ಅರಸ್, ಎಂ.ಎ.ಮೋಹನ್ ಹಿನಕಲ್ ಶ್ರೀನಿವಾಸ್ ಅಂಕಲ್, ದಯಾನಂದ ಪಟೇಲ್, ಮೋನಿಕಾ, ಎಂ.ಜಿ.ಪರಶುರಾಮಪ್ಪ, ಬಿಜೆಪಿ ಚಾಮರಾಜ ಕ್ಷೇತ್ರದ ಅಧ್ಯಕ್ಷ ದಿನೇಶ್ ಗೌಡ, ನರಸಿಂಹರಾಜ ಕ್ಷೇತ್ರದ ಅಧ್ಯಕ್ಷ ಮಂಜುನಾಥ್, ಮರಿಸ್ವಾಮಿ ನಾಯಕ್, ದಾರಿಪುರ ಡಿ. ಚಂದ್ರಶೇಖರ್, ಸಂತೋಷ್ ಕುಮಾರ್, ಲೋಹಿತ್ ದೊರೆಸ್ವಾಮಿ, ಕಾರ್ತಿಕ್ ಮರಿಯಪ್ಪ, ಆಲನಹಳ್ಳಿ ಮಹದೇವಸ್ವಾಮಿ, ಹಿರಿಯಣ್ಣಯ್ಯ, ಹಿನಕಲ್ ಪಾಪಣ್ಣ, ನಂದನ್, ಸೋಮಶೇಖರ್, ಕಡಕೊಳ ಕಿರಣ್, ಪಕ್ಷದ ಪದಾಧಿಕಾರಿಗಳು, ಕಾರ್ಯಕರ್ತರು ಹಾಜರಿದ್ದರು.

✅ಪಾಲನೆ.ಇನ್ ವಾಟ್ಸ್ ಆ್ಯಪ್ ಗುಂಪಿಗೆ ಸೇರಿರಿ ನ್ಯೂಸ್ & ವ್ಯೂಸ್ ಓದಿರಿ. ಆಲೋಚಿಸಿ. ಸ್ಪಂದಿಸಿ.
https://chat.whatsapp.com/H1gUYgrzvnQGZAhIQSGMHn

Related posts

ರಾಜ್ಯದಲ್ಲಿ ಸದ್ಯಕ್ಕೆ ಸಿಎಂ ಬದಲಾವಣೆ ಇಲ್ಲ

ಅಂಡಮಾನ್-ನಿಕೋಬಾರ್ ದ್ವೀಪ, ಕಾಶ್ಮೀರದಲ್ಲಿ ಅವಳಿ ಭೂಕಂಪನ: ರಿಕ್ಟರ್ ಮಾಪಕದಲ್ಲಿ 4.6 ತೀವ್ರತೆ ದಾಖಲು

ಹೊನ್ನೇಕೊಡಿಗೆ ಸಂಪರ್ಕ ಸೇತುವೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಸೋಮವಾರ ಲೋಕಾರ್ಪಣೆಗೊಳಿಸಲಿದ್ದಾರೆ.

Leave a Comment