NEWS

ಆಪ್ತ ಸಂವಾದ: ವಿಶೇಷ ಸಾಹಿತ್ಯ ಕಾರ್ಯಕ್ರಮ

ಪಾಲನೆ ನ್ಯೂಸ್

ಮಂಡ್ಯ: ಸಾಹಿತ್ಯ, ದೃಶ್ಯ ಮಾಧ್ಯಮ ಹಾಗೂ ಶಿಕ್ಷಣ ಕ್ಷೇತ್ರದಲ್ಲಿ ಕನ್ನಡ ಮತ್ತು ಕರ್ನಾಟಕದ ಸಂಸ್ಕೃತಿ ಹಾಗೂ ಸೂಕ್ಷ್ಮ ಸಂವೇದನಾಶೀಲತೆಯನ್ನು ನಾಡಿನ ಉದ್ದಗಲಕ್ಕೂ ಹರಡಲು ಸ್ಥಾಪನೆಗೊಂಡಿರುವ ಕನ್ನಡ ಕರ್ನಾಟಕ ಫೌಂಡೇಶನ್ (ರಿ) ಡಿಜಿಟಲ್ ಮಾಧ್ಯಮ ಹಾಗೂ ಸಾಹಿತ್ಯ ಕ್ಷೇತ್ರದಲ್ಲಿ ವಿಶೇಷ ಸೇವೆ ಸಲ್ಲಿಸುತ್ತಿರುವ ಎಂಪ್ಟಿ ಪಾಕೆಟ್ ಡ್ರೀಮ್ಸ್ ಸಂಸ್ಥೆ ಜೊತೆಗೂಡಿ ಆಪ್ತ ಸಂವಾದ ಎನ್ನುವ ವಿಶೇಷ ಸಾಹಿತ್ಯ ಕಾರ್ಯಕ್ರಮವನ್ನು ಆಯೋಜಿಸುತ್ತಿದೆ.

ಪ್ರತೀ ತಿಂಗಳ ಮೊದಲನೇ ಭಾನುವಾರ ಮಂಡ್ಯದ ಗಾಂಧೀ ಭವನದಲ್ಲಿ ವರುಷವಿಡೀ ನಡೆಯುವ ಈ ಕಾರ್ಯಕ್ರಮಕ್ಕೆ ತಿಂಗಳಿಗೊಬ್ಬರು ಕನ್ನಡದ ಖ್ಯಾತ ಲೇಖಕರು ಅಥವಾ ಕನ್ನಡದಲ್ಲಿ ಪುಸ್ತಕ ತರ್ಜುಮೆಗೊಂಡಿರುವ ಇತರೆ ಭಾರತೀಯ ಭಾಷೆಯ ಅಥವಾ ಅಂತಾರಾಷ್ಟ್ರೀಯ ಲೇಖಕರೊಬ್ಬರು ಆಗಮಿಸಲಿದ್ದಾರೆ. ಅವರ ಪುಸ್ತಕವೊಂದನ್ನು ಆರಿಸಿ, ಅದನ್ನು ಆಸಕ್ತ ಓದುಗರಿಗೆ ತಲುಪಿಸಿ, ಓದುವಂತೆ ಮಾಡಿ, ಲೇಖಕರೊಂದಿಗೆ ಮುಖಾಮುಖಿ ಸಂವಾದ ನಡೆಸುವ ಏರ್ಪಾಟು ಮಾಡಲಾಗುತ್ತದೆ. ಆ ಸಂವಾದವನ್ನು ಪಾಡ್‌ಕಾಸ್ಟ್ ರೂಪದಲ್ಲಿ ವೃತ್ತಿಪರವಾಗಿ ರೆಕಾರ್ಡಿಂಗ್ ಮಾಡಿ ಇಡೀ ಜಗತ್ತಿನೆದುರು ತೆರೆದಿಡಲಾಗುತ್ತದೆ.

ಪುಸ್ತಕ ಓದಿ ಬಂದು, ಇಷ್ಟದ ಲೇಖಕರೊಂದಿಗೆ ಚರ್ಚೆ, ಸಂವಾದ, ವಾಗ್ವಾದ ನಡೆಸಲು ಹೆಸರನ್ನು ನೋಂದಾಯಿಸಿ ಹಾಗೂ ಬೆಂಬಲವಾಗಿ ನಿಲ್ಲಲು ಕೋರಲಾಗಿದೆ. 

ಕಾರ್ಯಕ್ರಮ ನಡೆಯುವ ದಿನಾಂಕ ಪ್ರತೀ ತಿಂಗಳ ಮೊದಲ ಭಾನುವಾರ, ಸಮಯ ಬೆಳಗ್ಗೆ 10:00 ರಿಂದ ಮದ್ಯಾಹ್ನ 1 ಗಂಟೆಯವೆರೆಗೆ. ಸ್ಥಳ: ಗಾಂಧೀ ಭವನ, ಮಂಡ್ಯ. ನೋಂದಣಿ ಮತ್ತಿತರ ವಿವರಗಳಿಗೆ: 9972391577

ಪಾಲನೆ.ಇನ್‌ ವಾಟ್ಸ್‌ ಆಪ್‌ ಗುಂಪಿಗೆ ಸೇರಿರಿ.

Related posts

ಶ್ರೀ ಮೇಲುಕೋಟೆ ವೈರಮುಡಿ ಜಾತ್ರಾ ಮಹೋತ್ಸವ

ಪ್ರತಿ 10 ಗ್ರಾಂ ಚಿನ್ನದ ಬೆಲೆ ₹900 ಇಳಿಕೆ

ಸಕ್ಕರೆ ನಗರಿಯಲ್ಲಿ ಹೂವಿನ ಲೋಕ: ಕೆ.ಆ‌ರ್.ನಂದಿನಿ

Leave a Comment