ಪಾಲನೆ ನ್ಯೂಸ್
ಪ್ರಮುಖ ಮುಖ್ಯಾಂಶಗಳು
> ಗ್ಯಾರಂಟಿ ಯೋಜನೆಗಳಿಂದ ರಾಜ್ಯದ ಆರ್ಥಿಕತೆಗೆ ವೇಗ
> ತಲಾ ಆದಾಯದಲ್ಲಿ ದೇಶದಲ್ಲೇ ಕರ್ನಾಟಕ ಮೊದಲ ಸ್ಥಾನ
> 2025-26ರ ಬಜೆಟ್ನಲ್ಲಿ 51,034 ಕೋಟಿರೂ.ಮೀಸಲು
ಬೆಂಗಳೂರು: ಗ್ಯಾರಂಟಿ ಯೋಜನೆಗಳಿಂದ (Guarantee schemes)ರಾಜ್ಯದ ಆರ್ಥಿಕತೆಗೆ ವೇಗ ಸಿಕ್ಕಿದೆ ತಲಾ ಆದಾಯದಲ್ಲಿ ದೇಶದಲ್ಲೇ ಕರ್ನಾಟಕ ಮೊದಲ ಸ್ಥಾನದಲ್ಲಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ವಿತ್ತೀಯ ಕಾರ್ಯನೀತಿ ಸಂಸ್ಥೆ ಬುಧವಾರ ಖಾಸಗಿ ಹೋಟೆಲ್‌ನಲ್ಲಿ ಆಯೋಜಿಸಿದ್ದ ಸರ್ಕಾರಿ ಖಾತರಿ ಯೋಜನೆಗಳ ಸಂಶೋಧನಾ ಫಲಿತಾಂಶಗಳ ಸಾರ್ವಜನಿಕರ ಪ್ರಸರಣ ಕಾರ್ಯಕ್ರಮದಲ್ಲಿ ಸಿಎಂ ಅವರ ಭಾಷಣವನ್ನು ಮಂಡಿಸಲಾಯಿತು.
ಅಧಿಕಾರ ವಹಿಸಿಕೊಂಡ ತಕ್ಷಣವೇ ಮತದಾರರಿಗೆಕೊಟ್ಟಿದ್ದ ಭರವಸೆ ಈಡೇರಿಸಲು ನಾವು 5 ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರಲಾಯಿತು. ಇವುಗಳ ಅನುಷ್ಠಾನಕ್ಕಾಗಿ 96 ಸಾವಿರ ಕೋಟಿ ರೂ. ಹಂಚಿಕೆ ಮಾಡಿದ್ದೇವೆ. 2025-26ರ ಬಜೆಟ್‌ನಲ್ಲಿ 51,034 ಕೋಟಿ ರೂ.ಮೀಸಲಿಟ್ಟಿದ್ದೇವೆ. 4 ಸದಸ್ಯರು ಹೊಂದಿರುವ ಕುಟುಂಬ ಮಾಸಿಕ ಸರಾಸರಿ 10 ಸಾವಿರ ರೂ.ಪ್ರಯೋಜನ ಪಡೆಯುತ್ತಿದೆ. ಇದರಿಂದ ಆರ್ಥಿಕ ಸ್ಥಿರತೆ,ಸಾಲ ಅವಲಂಬನೆ ತಗ್ಗಿಸಿದೆ. ಬಡತನ, ಅಸಮಾನತೆ ಹೋಗಲಾಡಿಸಿದೆ. ಮಹಿಳಾ ಸಬಲೀಕರಣ ಮಾತ್ರವಲ್ಲದೆ ಸಾಮಾಜಿಕ ನ್ಯಾಯವೂ ಸಿಕ್ಕಿದೆ. ನಮ್ಮ ಸರ್ಕಾರದ ಗ್ಯಾರಂಟಿ ಯೋಜನೆಗಳನ್ನು
ಜಾರಿಗೆ ತರಲಾಯಿತು. ಇವುಗಳ ಅನುಷ್ಠಾನಕ್ಕಾಗಿ 96 ಸಾವಿರ ಕೋಟಿ ರೂ. ಹಂಚಿಕೆ ಮಾಡಿದ್ದೇವೆ. 2025-26ರ ಬಜೆಟ್‌ನಲ್ಲಿ 51,034 ಕೋಟಿ ರೂ. ಮೀಸಲಿಟ್ಟಿದ್ದೇವೆ. 4 ಸದಸ್ಯರು ಹೊಂದಿರುವ ಕುಟುಂಬ ಮಾಸಿಕ ಸರಾಸರಿ 10 ಸಾವಿರ ರೂ.ಪ್ರಯೋಜನ ಪಡೆಯುತ್ತಿದೆ. ಇದರಿಂದ ಆರ್ಥಿಕ ಸ್ಥಿರತೆ, ಸಾಲ ಅವಲಂಬನೆ ತಗ್ಗಿಸಿದೆ. ಬಡತನ, ಅಸಮಾನತೆ ಹೋಗಲಾಡಿಸಿದೆ. ಮಹಿಳಾ ಸಬಲೀಕರಣ ಮಾತ್ರವಲ್ಲದೆ ಸಾಮಾಜಿಕ ನ್ಯಾಯವೂ ಸಿಕ್ಕಿದೆ. ನಮ್ಮ ಸರ್ಕಾರದ ಗ್ಯಾರಂಟಿ ಯೋಜನೆಗಳನ್ನು ವಿಶ್ವಸಂಸ್ಥೆಯಲ್ಲಿ ಕ್ಲಾಸಲಾಗಿದೆ. ಇವುಗಳನ್ನು ಜಾರಿಗೆ ತರುವ ಮುನ್ನ ನಮ್ಮ ಪ್ರಸ್ತಾವನೆಗೆ ಒಪ್ಪಿಕೊಂಡಿದ್ದ ಕಾಂಗ್ರೆಸ್ ವರಿಷ್ಠರಿಗೆ ಕೃತಜ್ಞತೆ ಸಲ್ಲಿಸುವುದಾಗಿ ಸಿಎಂ ಹರ್ಷ ವ್ಯಕ್ತಪಡಿಸಿದರು.
ನ್ಯಾಯ, ಸಮಾನತೆ ಮತ್ತು ಸಬಲೀಕರಣ ಮೂಲಕ ಕಲ್ಯಾಣ ರಾಜ್ಯಕ್ಕಾಗಿ ಕ್ರಮಕೊಂಡಿದ್ದೇವೆ. ಈ ಯೋಜನೆಗಳು ಸಮಗ್ರ ಆಡಳಿತಕ್ಕೆ ಮಾದರಿಯಾಗಿದೆ. ಸರ್ಕಾರ ಮತ್ತು ಖಾಸಗಿ ಸಂಸ್ಥೆಗಳ ಪರಸ್ಪರ ಸಹಯೋಗದಿಂದ ನೀತಿ ನಿರೂಪಣೆಗೆ ಸಹಾಯವಾಗಿದೆ.ನಮ್ಮ ರಾಜ್ಯದಿಂದ ಕೇಂದ್ರಕ್ಕೆ ಜಿಎಸ್‌ಟಿ ಮತ್ತು ಸೆಸ್ ಮೂಲಕ ಭಾರಿ ಆದಾಯ ಸಂಗ್ರಹವಾಗುತ್ತಿದೆ. ನಾವೀನ್ಯತೆ ಉತ್ತೇಜಿಸಲು, ಬಂಡವಾಳ ಹೂಡಿಕೆಗೆ ಹಣಕಾಸಿನ ಬೆಂಬಲ ಮತ್ತು ಆದಾಯದ ಪಾಲು ನೀಡುವಂತೆ ಕೇಂದ್ರವನ್ನು ಕೇಳುತ್ತಿದ್ದೇವೆ. ಆದರೆ, ನಮ್ಮ ಬಗ್ಗೆ ಕೇಂದ್ರ ಸರ್ಕಾರ ಮಲತಾಯಿ ಧೋರಣೆ ತೋರುತ್ತಿದೆ ಸಿಎಂ ಬೇಸರ ವ್ಯಕ್ತಪಡಿಸಿದರು.
ಸಿದ್ದರಾಮಯ್ಯ ಅವರನ್ನೇ ಐದು ವರ್ಷವೂ ಮುಖ್ಯಮಂತ್ರಿ ಎಂದು ಘೋಷಿಸಬೇಕೆಂದು ಎಂಬ ಒತ್ತಾಯ ಎಂಎಲ್ಸಿ ದಿನೇಶ್ ಗೂಳಿಗೌಡ, ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಉಮಾ ಮಹಾದೇವನ್, ಆರ್ಥಿಕ ಇಲಾಖೆ ಪ್ರಧಾನ ಕಾರ್ಯದರ್ಶಿ ರಿತೇಶ್ ಕುಮಾರ್ ಸಿಂಗ್, ಕಾರ್ಯದರ್ಶಿ ಆರ್.ವಿಶಾಲ್, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷ ಸೂರಜ್ ಎಂ.ಎನ್. ಹೆಗ್ಡೆ, ಕಾಂಗ್ರೆಸ್‌ನ ಪುಷ್ಪಾ ಅಮರನಾಥ್ ಮತ್ತಿತರರಿದ್ದರು.
ಮಹಿಳೆಯರಿಗೆ ಹೆಚ್ಚು ಅನುಕೂಲ:
ಗ್ಯಾರಂಟಿ ಯೋಜನೆಗಳಿಂದ ಬಡವರ ಮಾತ್ರವಲ್ಲದೆ ಮಹಿಳೆಯರಿಗೆ ಹೆಚ್ಚು ಅನುಕೂಲವಾಗಿದೆ. ನಿತ್ಯದ ವೆಚ್ಚ ಕಡಿತ, ಖಾತೆಗೆ ಹಣ ಬರುತ್ತಿರುವುದರಿಂದ ಆರ್ಥಿಕವಾಗಿ ಸಬಲರಾಗುತ್ತಿದ್ದಾರೆ. ಶಕ್ತಿ ಯೋಜನೆಯಿಂದ ಸರ್ಕಾರಿ ಬಸ್‌ಗಳಲ್ಲಿ ಪ್ರಯಾಣಿಸುವ ಮಹಿಳೆಯರ ಸಂಖ್ಯೆ ಹೆಚ್ಚಿದೆ. ಗೃಹಲಕ್ಷ್ಮಿ ಯೋಜನೆಯಿಂದ ಮಹಿಳೆಯರಿಗೆ ಸಾಕಷ್ಟು ಸಹಾಯವಾಗಿದೆ. ಅನ್ನಭಾಗ್ಯದಿಂದ ಜನ ಹಸಿವಿನಿಂದ ಕಂಗೆಡುವುದು ತಪ್ಪಿದೆ. ಉಳಿದ ಗೃಹಜ್ಯೋತಿ, ಯುವನಿಧಿಗಳು ಜನರಿಗೆ ಅನುಕೂಲವಾಗಿದೆ ಎಂದು ಎಂ.ಎಸ್.ಸ್ವಾಮಿನಾಥನ್ ಸಂಶೋಧನಾ ಫೌಂಡೇಷನ್ ಅಧ್ಯಕ್ಷೆ ಡಾ.ಸೌಮ್ಯ ಸ್ವಾಮಿನಾಥನ್ ಹೇಳಿದರು.
ಜನಗಣತಿ ಸೇರಿ ಇತರ ಅಧ್ಯಯನ ಪರಿಶೀಲಿಸಿದ್ದಾಗ ಸಂವಿಧಾನದಲ್ಲಿ ಹೇಳಲಾಗಿರುವ ಹಕ್ಕು, ಗುರಿಯನ್ನು ನಾವು ಇನ್ನೂ ಸಾಧಿಸಬೇಕಾಗಿದೆ. ಹಸಿವು ಮುಕ್ತ, ಪೌಷ್ಟಿಕ ಆಹಾರ, ಲಿಂಗ ಸಮಾನತೆ ಸುಸ್ಥಿರ ಅಭಿವೃದ್ಧಿ ಗುರಿಯಾಗಿದೆ. ಮಹಿಳಾ ಆಧಾರಿತ ಕಾರ್ಯಕ್ರಮಗಳಿಗೆ ಸರ್ಕಾರ ಹೆಚ್ಚಿನ ಒತ್ತು ನೀಡಿದೆ.ಹೊಣೆಗಾರಿಕೆ, ಸಂಪನ್ಮೂಲ ಒದಗಿಸಿದರೆ ಮಹಿಳೆಯರು, ತಮ್ಮ ಕುಟುಂಬವನ್ನು ಸಮರ್ಥವಾಗಿ ನಿಭಾಯಿಸುತ್ತಾರೆ.
