Uncategorized

‘ಸಬಲೀಕರಣಕ್ಕೆ ಶಿಕ್ಷಣವೊಂದೆ ಮಾರ್ಗ’ಪ್ರಸನ್ನಕುಮಾರ್ ಕೆರಗೋಡು ಅಭಿಮತ

ಪಾಲನೆ ನ್ಯೂಸ್

ಮಂಡ್ಯ: ಮಹಿಳೆಯರ ಸಬಲೀಕರಣಕ್ಕೆ ಮತ್ತು ಆರ್ಥಿಕ, ಸಾಮಾಜಿಕ ಮತ್ತು ವೈಯಕ್ತಿಕ ಸ್ವಾತಂತ್ರ್ಯಕ್ಕೆ ಶಿಕ್ಷಣವೊಂದೇ ಮಾರ್ಗ ಎಂದು ಕ್ರಿಯಾ ಸಂಸ್ಥಾಪಕ ಮತ್ತು ಮಂಡ್ಯದ‌ ಮಹಿಳಾ ಸರ್ಕಾರಿ ಕಾಲೇಜಿನ ಇಂಗ್ಲಿಷ್ ಅಧ್ಯಾಪಕ ಪ್ರಸನ್ನಕುಮಾರ್ ಕೆರಗೋಡು ಅಭಿಪ್ರಾಯಪಟ್ಟರು. ಕ್ರಿಯಾ ಸಂಸ್ಥೆಯ ವತಿಯಿಂದ ಮಂಡ್ಯದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿ ನಿಲಯದಲ್ಲಿ “ನಾನು ಸ್ತ್ರೀ” ಅಭಿಯಾನದಡಿಯಲ್ಲಿ ಹಮ್ಮಿಕೊಳ್ಳಲಾಗಿದ್ದ ವ್ಯಕ್ತಿತ್ವ ವಿಕಸನ ಮತ್ತು ಉದ್ಯೋಗ ಮಾರ್ಗದರ್ಶನ ಕಾರ್ಯಾಗಾರದಲ್ಲಿ ಅವರು ಮಾತನಾಡುತ್ತಿದ್ದರು.

ಮಂಡ್ಯ ಜಿಲ್ಲೆಯಲ್ಲಿ‌ ಹೆಚ್ಚು ಹೆಣ್ಣುಮಕ್ಕಳು ಶಾಲಾ-ಕಾಲೇಜು ಶಿಕ್ಷಣವನ್ನು ಅರ್ಧಕ್ಕೆ‌ ನಿಲ್ಲಿಸುವುದು ಮತ್ತು ಬಾಲ್ಯವಿವಾಹಕ್ಕೆ ಒಳಗಾಗುವುದು, ಇದರೊಂದಿಗೆ ಹೆಣ್ಣು ಭ್ರೂಣ ಹತ್ಯೆಯಂತ ಅನಿಷ್ಟ ಪದ್ದತಿಯೂ ಸೇರಿಕೊಂಡಿರುವ ಹಿನ್ನೆಲೆಯಲ್ಲಿ ಇಲ್ಲಿನ‌ ವಿದ್ಯಾರ್ಥಿನಿಯರಿಗೆ ಅತಿ ಹೆಚ್ಚು ಜವಾಬ್ದಾರಿ‌ ಇದೆ. ಆರ್ಥಿಕ ಮತ್ತು ಸಾಮಾಜಿಕ ಸ್ವಾತಂತ್ರ್ಯವನ್ನು ಗಳಿಸಿಕೊಳ್ಳಬೇಕಾದರೆ ಉತ್ತಮವಾದ ಒಂದು ಉದ್ಯೋಗ ಪಡೆದುಕೊಳ್ಳುವುದು ಅತ್ಯಾವಶ್ಯಕ, ಆ ಹಿನ್ನೆಲೆಯಲ್ಲಿ ಕಠಿಣ ಶ್ರಮ ವಹಿಸಿ ಉತ್ತಮ ಜೀವನ ಮಾರ್ಗ ಕಂಡುಕೊಳ್ಳುವಂತೆ ಕರೆ‌ ನೀಡಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿಗಳಾದ ಮಂಜುಳಾ ಕೆ ಮಾತನಾಡಿ ಇಲಾಖೆಯ ವತಿಯಿಂದ ಹೆಣ್ಣು ಮಕ್ಕಳ ಕಲ್ಯಾಣಕ್ಕೆ ವಸತಿ ಮತ್ತು ಊಟದ ಜೊತೆಗೆ ಅನೇಕ ಶೈಕ್ಷಣಿಕ ಅಭಿವೃದ್ಧಿ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ಆ ಎಲ್ಲಾ ಸವಲತ್ತುಗಳನ್ನು ಬಳಸಿಕೊಂಡು ಉತ್ತಮ ಜೀವನವನ್ನು ರೂಪಿಸಿಕೊಳ್ಳಬೇಕೆಂದು ಕಿವಿಮಾತು ಹೇಳಿದರು.

ಕ್ರಿಯಾದ “ನಾನು ಸ್ತ್ರೀ” ಘಟಕದ ಸಂಚಾಲಕಿ ಸುಪ್ರಿಯ ಶಿವಣ್ಣ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಇಲಾಖೆಯ ತಾಲ್ಲೂಕು ಅಧಿಕಾರಿಗಳಾದ ಮಂಜುನಾಥ ನಾಯ್ಡು, ನಿಲಯಪಾಲಕರಾದ ಯೋಗಿತಾ ಎಸ್, ಕ್ರಿಯಾ ಸಂಚಾಲಕರುಗಳಾದ ಆನಂದ್ ಎಸ್.ಎಲ್,‌ ಲೋಕೇಶ್ ಕೆ.ಎನ್ ಮತ್ತು ನಿಲಯದ ವಿದ್ಯಾರ್ಥಿನಿಯರು ಪಾಲ್ಗೊಂಡಿದ್ದರು.‌

✅ಪಾಲನೆ.ಇನ್ ವಾಟ್ಸ್ ಆ್ಯಪ್ ಗುಂಪಿಗೆ ಸೇರಿರಿ ನ್ಯೂಸ್ & ವ್ಯೂಸ್ ಓದಿರಿ. ಆಲೋಚಿಸಿ. ಸ್ಪಂದಿಸಿ.
https://chat.whatsapp.com/H1gUYgrzvnQGZAhIQSGMHn

Related posts

ನಗರಸಭೆ ಒಳಚರಂಡಿಯ ಕೊಳಚೆ ನೀರು ಕೆರೆಗೆ ಸೇರಿ ಸಾವಿರಾರು ಮೀನುಗಳು ಮೃತ

ಹಿರಿಯ ಸ್ವಾತಂತ್ರ್ಯ ಸೇನಾನಿ ಕೆ.ಚನ್ನೇಗೌಡ(ಮೂರ್ಬೆಳೆ) ನಿಧನ

ಕೊಡವ ಶೈಲಿಯ ಸೀರೆಯಲ್ಲಿ ಮಿಂಚಿದ ರಶ್ಮಿಕಾ

Leave a Comment