ಪಾಲನೆ ನ್ಯೂಸ್
ನವದೆಹಲಿ: ಕಳೆದ ತಿಂಗಳಿನಲ್ಲಿ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಸಂಗ್ರಹ ₹2.43 ಲಕ್ಷ ಕೋಟಿ ತಲುಪಿ ಸಾರ್ವಕಾಲಿಕ ದಾಖಲೆ ನಿರ್ಮಿಸಿದೆ. ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಶೇ. 8.7 ಏರಿಕೆಯಾಗಿದೆ.
ಈ ಬಾರಿ ಆಮದು ಆಧಾರಿತ ತೆರಿಗೆ *57,580 ಕೋಟಿ ಸಂಗ್ರಹವಾಗಿದೆ. ದೇಶೀಯ ವಹಿವಾಟುಗಳಿಂದ ಬಂದ ಆದಾಯ ₹1.85 ಲಕ್ಷ ಕೋಟಿ ದಾಟಿದ್ದು, ಶೇ. 4.3ರಷ್ಟು ವೃದ್ಧಿ ಕಂಡಿದೆ. ಒಟ್ಟು ಸಂಗ್ರಹದಲ್ಲಿ ಕೇಂದ್ರ ಜಿಎಸ್‌ಟಿ ₹52,140 ಕೋಟಿ ಹಾಗೂ ರಾಜ್ಯ ಜಿಎಸ್‌ಟಿ ₹61,331 ಕೋಟಿ ಇದೆ. ಅಂತಾರಾಜ್ಯ ವಹಿವಾಟಿನ ಸಮಗ್ರ ಜಿಎಸ್‌ಟಿ (ಐಜಿಎಸ್‌ಟಿ) ₹1.29 ಲಕ್ಷ ಕೋಟಿ ದಾಟಿದೆ.
ಏಪ್ರಿಲ್‌ನಲ್ಲಿ ಸರ್ಕಾರ ₹31,793 ಕೋಟಿಗಳಷ್ಟು ರೀಫಂಡ್ ನೀಡಿದ್ದು, ಇದರ ನಂತರದ ನಿವ್ವಳ ಜಿಎಸ್‌ಟಿ ಸಂಗ್ರಹ ಶೇ. 7.3ರಷ್ಟು ಹೆಚ್ಚಳದೊಂದಿಗೆ ₹2.11 ಲಕ್ಷ ಕೋಟಿ ಆಗಿದೆ. ಪಶ್ಚಿಮ ಏಷ್ಯಾದ ಬಿಕ್ಕಟ್ಟು ಮತ್ತು ಜಾಗತಿಕ ಅನಿಶ್ಚಿತತೆಯ ನಡುವೆಯೂ ಭಾರತದ ಆಮದು ವ್ಯವಹಾರ ದೃಢವಾಗಿರುವುದು ಈ ಅಂಕಿಅಂಶಗಳಿಂದ ಸ್ಪಷ್ಟವಾಗಿದೆ.

3ನೇ ಸ್ಥಾನದಲ್ಲಿ ಮಹಾರಾಷ್ಟ್ರ ₹22,929 ಕೋಟಿ ಸಂಗ್ರಹಿಸುವ ಮೂಲಕ ಮೊದಲ ಸ್ಥಾನ ಕಾಯ್ದುಕೊಂಡಿದ್ದು, ಶೇ 40ರಷ್ಟು ವಾರ್ಷಿಕ ಬೆಳವಣಿಗೆ ಸಾಧಿಸಿದೆ. ಉತ್ತರ ಪ್ರದೇಶ ₹10,178 ಕೋಟಿ ಆದಾಯದೊಂದಿಗೆ ಎರಡನೇ ಸ್ಥಾನದಲ್ಲಿದ್ದರೆ. ಕರ್ನಾಟಕ ₹9,958 ಕೋಟಿ ಸಂಗ್ರಹಿಸಿ ಮೂರನೇ ಸ್ಥಾನದಲ್ಲಿದೆ. ವಿಶೇಷವೆಂದರೆ, ಕರ್ನಾಟಕ ಕಳೆದ ವರ್ಷಕ್ಕಿಂತ ಶೇ. 42ರಷ್ಟು ಪ್ರಗತಿ ದಾಖಲಿಸುವ ಮೂಲಕ ಆರ್ಥಿಕ ಸದೃಢತೆ ಪ್ರದರ್ಶಿಸಿದೆ.
✅ಪಾಲನೆ.ಇನ್ ವಾಟ್ಸ್ ಆ್ಯಪ್ ಗುಂಪಿಗೆ ಸೇರಿರಿ ನ್ಯೂಸ್ & ವ್ಯೂಸ್ ಓದಿರಿ. ಆಲೋಚಿಸಿ. ಸ್ಪಂದಿಸಿ.
https://chat.whatsapp.com/H1gUYgrzvnQGZAhIQSGMHn
