NEWS

ಮೈಸೂರು ಕನ್ನಡ ವೇದಿಕೆ ವತಿಯಿಂದ ರಾಜ್ ಕುಮಾ‌ರ್ ಉದ್ಯಾನವನದಲ್ಲಿ ಪ್ರತಿಭಟನೆ

ಪಾಲನೆ ನ್ಯೂಸ್

ಮೈಸೂರು: ವರನಟ ಡಾ. ರಾಜಕುಮಾರ್ ವಿರುದ್ಧ ನಟ ಚೇತನ ಅಹಿಂಸಾ ಹೇಳಿಕೆ ಖಂಡಿಸಿ ಮೈಸೂರು ಕನ್ನಡ ವೇದಿಕೆ ವತಿಯಿಂದ ರಾಜ್ ಕುಮಾ‌ರ್ ಉದ್ಯಾನವನದಲ್ಲಿ ಪ್ರತಿಭಟನೆ ನಡೆಸಲಾಯಿತು. ಚೇತನ್ ಇತ್ತೀಚೆಗೆ ಆತ ಕೆಲವು ವಿಷಯಗಳಲ್ಲಿ ದ್ವಂದ್ವ ಹೇಳಿಕೆ ನೀಡುತ್ತಿ ದ್ದಾನೆ. ಸರ್ಕಾರ ದಯವಿಟ್ಟು ಈತನನ್ನು ನಿಮಾನ್ಸ್ ಆಸ್ಪತ್ರೆಗೆ ಸೇರಿಸಬೇಕು. ನಾಡು, ನುಡಿ, ಜಲದ ಬಗ್ಗೆ ಅಪಾರ ಅಭಿಮಾನ ಹೊಂದಿದ್ದ ರಾಜ್ ಕುಮಾರ್ ಅಂದು ಗೋಕಾಕ್ ಚಳುವಳಿಯಲ್ಲಿ ಭಾಗವಹಿಸದೇ ಇದ್ದರೆ ಇಂದು ನಮ್ಮ ಕರ್ನಾಟಕ ಹೊರ ರಾಜ್ಯದ ಪಾಲಾಗುತ್ತಿತ್ತು.

ಅಂದು ಪರ ರಾಜ್ಯಗಳ ಚಿತ್ರಗಳು ವಿಜೃಂಭಿಸುತ್ತಿದ್ದವು. ಕನ್ನಡ ಸಿನಿಮಾಗಳು ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗುತ್ತಿರಲಿಲ್ಲ. ರಾಜ್‌ಕುಮಾ‌ರ್ ಹೋರಾಟದ ಫಲವಾಗಿ ಅವಕಾಶ ಲಭಿಸಿತು. ಇದು ಚೇತನ್‌ಗೆ ಅರಿವಿಲ್ಲ ಎಂದರು. ವೇದಿಕೆ ಅಧ್ಯಕ್ಷ ಎಸ್. ಬಾಲಕೃಷ್ಣ, ಡಾ. ರಾಜ್ ಅಭಿಮಾನಿಗಳ ಸಂಘದ ಅಧ್ಯಕ್ಷ ಮಹಾದೇವ ಸ್ವಾಮಿ, ಎಲ್‌ಐಸಿ ಸಿದ್ದಪ್ಪ, ಗೋವಿಂದರಾಜು, ಹೊನಕೆರೆ ಸ್ವಾಮಿ, ಬೋಗಾದಿ ಸಿದ್ದೇಗೌಡ, ಚಾಮರಾಜು ಮಂಟಕಳ್ಳಿ, ಪ್ಯಾಲೆಸ್ ಬಾಬು, ಮಾದಪ್ಪ, ಶಿವಗೌಡ, ಸ್ವಾಮಿಗೈಡ್, ಬೀಡ ಬಾಬು, ಚಂದ್ರು ಸೇರಿದಂತೆ ಹಲವರು ಭಾಗವಹಿಸಿದ್ದರು.

✅ ಪಾಲನೆ.ಇನ್ ವಾಟ್ಸ್ ಆ್ಯಪ್ ಗುಂಪಿಗೆ ಸೇರಿರಿ ನ್ಯೂಸ್ & ವ್ಯೂಸ್ ಓದಿರಿ. ಆಲೋಚಿಸಿ. ಸ್ಪಂದಿಸಿ.
https://chat.whatsapp.com/H1gUYgrzvnQGZAhIQSGMHn

Related posts

ವೆನಿಜುವೆಲಾದಲ್ಲಿ ಅಮೇರಿಕ ನಡೆಸಿದ ವಾಯುದಾಳಿಯಲ್ಲಿ 40 ಜನ ಸಾವು-

ಅಧಿವೇಶನ ವೇಳೆ ಕಾಂಗ್ರೆಸ್ ಶಾಸಕರಿಂದ ಗೂಂಡಾ ವರ್ತನೆ: ಯದುವೀ‌ರ್ ಆರೋಪ

ವಿಶೇಷ ಚೇತನರನ್ನು ಗುರುತಿಸಿ ಸಮಾಜದ ಮುಖ್ಯವಾಹಿನಿಗೆ ತರಬೇಕು: ಡಾ. ಕುಮಾರ

Leave a Comment