ಪಾಲನೆ ನ್ಯೂಸ್
ನವದೆಹಲಿ: ಜಾಗತಿಕ ಇಂಧನ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ರಿಲಯನ್ಸ್ ಲಾಭ ಶೇ. 12.50 ಕುಸಿತ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ನಾಲ್ಕನೇ ತ್ರೈಮಾಸಿಕದಲ್ಲಿ ₹16,971 ಕೋಟಿ ನಿವ್ವಳ ಲಾಭ ಗಳಿಸಿದೆ. ತೈಲ ಮತ್ತು ರಾಸಾಯನಿಕ ವಲಯದ ಹಿನ್ನಡೆಯಿಂದಾಗಿ ಕಳೆದ ವರ್ಷಕ್ಕೆ ಹೋಲಿಸಿದರೆ ಲಾಭದಲ್ಲಿ ಶೇ. 12.5ರಷ್ಟು ಇಳಿಕೆಯಾಗಿದೆ.

ಆದರೆ, ಕಂಪನಿಯ ವಾರ್ಷಿಕ ನಿವ್ವಳ ಲಾಭ ₹80,775 ಕೋಟಿಗೆ ಏರಿದ್ದು, ಹಿಂದಿನ ವರ್ಷಕ್ಕಿಂತ ಶೇ. 16ರಷ್ಟು ಪ್ರಗತಿ ಸಾಧಿಸಿದೆ. ಇನ್ನೊಂದೆಡೆ, ರಿಲಯನ್ಸ್ ಸಮೂಹದ ಡಿಜಿಟಲ್ ವಿಭಾಗವಾದ ಜಿಯೋ ಪ್ಲಾಟ್ ಫಾರ್ಮ್ಸ್ ಲಾಭ ಶೇ. 13ರಷ್ಟು ಹೆಚ್ಚಳವಾಗಿದ್ದು, ₹7,935 ಕೋಟಿಗೆ ತಲುಪಿದೆ. ಜಿಯೋದ ಪ್ರತಿ ಬಳಕೆದಾರರಿಂದ ಬರುವ ಸರಾಸರಿ ಆದಾಯ ₹214ಕ್ಕೆ ಏರಿಕೆಯಾಗಿದೆ. ಟೆಲಿಕಾಂ ಮತ್ತು ರಿಟೇಲ್ ವಿಭಾಗಗಳ ಯಶಸ್ಸು ತೈಲ ಉದ್ಯಮದ ನಷ್ಟವನ್ನು ಸರಿದೂಗಿಸಲು ನೆರವಾಗಿದೆ.
✅ಪಾಲನೆ.ಇನ್ ವಾಟ್ಸ್ ಆ್ಯಪ್ ಗುಂಪಿಗೆ ಸೇರಿರಿ ನ್ಯೂಸ್ & ವ್ಯೂಸ್ ಓದಿರಿ. ಆಲೋಚಿಸಿ. ಸ್ಪಂದಿಸಿ.
https://chat.whatsapp.com/H1gUYgrzvnQGZAhIQSGMHn
