NEWS

ರೈತರ ಬಗೆಗೆ ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ನಿರ್ಲಕ್ಷ ಜಿಲ್ಲಾಧಿಕಾರಿ ಕಚೇರಿ ಮುಂದೆ ರೈತರ ಪ್ರತಿಭಟನೆ

ಪಾಲನೆ ನ್ಯೂಸ್

ಮಂಡ್ಯ : ರೈತರ ಬಗೆಗೆ ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ನಿರ್ಲಕ್ಷ ಧೋರಣೆ ಖಂಡಿಸಿ ರೈತ ಸಂಘದ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು. ಶಕ್ತಿ ಕೇಂದ್ರವಾಗಬೇಕಿದ್ದ ಸರ್ಕಾರಿ ಕಛೇರಿಗಳು ಶಕ್ತಿ ಹೀನ ಮತ್ತು ಭ್ರಷ್ಟಾಚಾರದ ತಾಣಗಳಾಗಿವೆ. ಇದಕ್ಕೆಲ್ಲ ಕನ್ನಡಿ ಹಿಡಿದಂತೆ ಜಿಲ್ಲೆಯಲ್ಲಿ ಸುಮಾರು ಮೂವತ್ತು ಸಾವಿರ ದೂರುಗಳು ಲೋಕಾಯುಕ್ತದಲ್ಲಿ ದಾಖಲಾಗಿವೆ. ಹೀಗೆ ಹತ್ತಾರು ಸಮಸ್ಯೆಗಳು ರೈತರಿಗೆ ಎದುರಾಗಿವೆ ಎಂದು ಆರೋಪಿಸಿ ಜಿಲ್ಲಾಧಿಕಾರಿಗೆ ಮನವಿ ಅರ್ಪಿಸಿ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿದರು.

ಬೇಡಿಕೆಗಳು : ಕಬ್ಬಿನ ಎಫ್.ಆರ್.ಪಿ. ೪೫೦೦ ರೂ. ನಿಗದಿ ಆಗಬೇಕು. ರಾಜ್ಯ ಸರ್ಕಾರದ ಟನ್ ಒಂದಕ್ಕೆ ರೂ. ೫೦೦ ಪ್ರೋತ್ಸಾಹಧನ ಕೊಡಬೇಕು. ಉತ್ತರ ಕರ್ನಾಟಕ, ದಕ್ಷಿಣ ಕರ್ನಾಟಕ ಬೇಧವಿಲ್ಲದೆ ಸಾಗಾಣಿಕೆ ಮತ್ತು ಕಟಾವು ವೆಚ್ಚ (ಹೆಚ್&ಟಿ) ಕಾರ್ಖಾನೆಯವರು ಭರಿಸಬೇಕು. ಕಬ್ಬಿನ ಹಣ ೧೦೦ ಸರ್ಕಾರ ಮತ್ತು ಕಾರ್ಖಾನೆ ಮಾಲೀಕರು ಬಿಡುಗಡೆ ಮಾಡಬೇಕು. ೧ ನೇ ತರಗತಿಯಿಂದ ೧೨ ನೇ ತರಗತಿಯವರೆಗೂ ದ್ವಿಭಾಷಾ ನೀತಿಯಲ್ಲಿ, ಏಕರೂಪ ಶಿಕ್ಷಣ ಜಾರಿಯಾಗಬೇಕು.

ಸರ್ಕಾರಿ ಶಾಲೆಗಳನ್ನು ಉಳಿಸಬೇಕು. ಜಿಲ್ಲೆಯ ಎಲ್ಲಾ ತಾಲ್ಲೂಕು ಕಛೇರಿಗಳಲ್ಲಿ ಸಾರ್ವಜನಿಕ ಕೆಲಸ ಕಾರ್ಯಗಳ ವಿಳಂಬ ನಿಲ್ಲಬೇಕು ಬಗರ್ ಹುಕ್ಕುಂ ಸಾಗುವಳಿ ದಾರರಿಗೆ ಹಕ್ಕುಪತ್ರ, ಪಹಣಿ, ದುರಸ್ಥಿಗೊಳಿಸಬೇಕು. ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಬೆಳೆಸಾಲ ಪಡೆಯುವ ನಿಬಂಧನೆಗಳು
ಸಡಿಲಗೊಳ್ಳಬೇಕು ಕೃಷಿ ಪಂಪ್ ಸೆಟ್‌ಗಳ ವಿದ್ಯುತ್ ಅಕ್ರಮ ಸಕ್ರಮ ಶುಲ್ಕ ಕಡಿತಗೊಳಿಸಿ ನಿರಂತರ ಯೋಜನೆ ಜಾರಿಯಲ್ಲಿರಬೇಕು.
ಕೆ.ಆರ್.ಎಸ್.ನಲ್ಲಿ ಸಾಕಷ್ಟು ನೀರು ಲಭ್ಯವಿರುವುದರಿಂದ ಮೇ, ಜೂನ್, ತಿಂಗಳವರೆಗೆ ನಾಲೆಗಳಲ್ಲಿ ನೀರು ಹರಿಸಬೇಕು. ಬೆಳೆಗಳ ರಕ್ಷಣೆ ಮಾಡಬೇಕು ಹಾಗೂ ಮುಖ್ಯ ಸೀಳು, ಉಪನಾಲೆ, ಪಿಕಪ್, ನಾಲೆಗಳ ಆಧುನೀಕರಣ ಗೊಳಿಸಬೇಕು ಮತ್ತು ಮಂಡ್ಯ ಜಿಲ್ಲೆಯ ಕೆರೆ- ಕಟ್ಟೆಗಳ ಹೂಳು ತೆಗೆಸಿ ಒತ್ತುವರಿ ತೆರವುಗೊಳಿಸಬೇಕು.

ಜಿಲ್ಲೆಯೆಲ್ಲೆಡೆ ಅಕ್ರಮ ಗಣಿಗಾರಿಕೆ ನಿಲ್ಲಬೇಕು ಬೇಸಿಗೆಯಲ್ಲಿ ತೆಂಗಿನ ಮರಗಳು ನುಸಿ ಕೀಟ ಬಾಧೆಯಿಂದ ನಾಶವಾಗುತ್ತಿದ್ದು, ಒಂದು ಮರಕ್ಕೆ ೨೫,೦೦೦ ಸಾವಿರ ಜೀವಿತಾವಧಿ ಪರಿಹಾರ ಕೊಡಬೇಕು ಬೆಂಗಳೂರಿಗೆ ಮಂಡ್ಯ ಜಿಲ್ಲೆಯ ಕಾವೇರಿ ನದಿಯಿಂದ ೬ನೇ ಹಂತ ಯೋಜನೆ ಕೈ
ಬಿಡಬೇಕು ಎಂಬ ಹಕ್ಕೊತ್ತಾಯಗಳನ್ನು ಮುಂದಿರಿಸಿದ್ದಾರೆ. ಪ್ರತಿಭಟನೆಯಲ್ಲಿ ಸಂಘದ ಜಿಲ್ಲಾಧ್ಯಕ್ಷ ಇಂಡುವಾಳು ಚಂದ್ರಶೇಖರ್, ಪ್ರಧಾನ
ಕಾರ್ಯದರ್ಶಿ ಮಂಜೇಶ್ ಗೌಡ,ಶಿವಳ್ಳಿ ಚಂದ್ರಶೇಖರ್, ಸೊ.ಸಿ.ಪ್ರಕಾಶ್, ಎಲ್. ಸುರೇಶ್, ಬಿ.ಸಿ.ಪುಟ್ಟಸ್ವಾಮಿ ಮುಂತಾದವರಿದ್ದರು.

✅ಪಾಲನೆ.ಇನ್ ವಾಟ್ಸ್ ಆ್ಯಪ್ ಗುಂಪಿಗೆ ಸೇರಿರಿ ನ್ಯೂಸ್ & ವ್ಯೂಸ್ ಓದಿರಿ. ಆಲೋಚಿಸಿ. ಸ್ಪಂದಿಸಿ.
https://chat.whatsapp.com/H1gUYgrzvnQGZAhIQSGMHn

Related posts

ಆದಾಯಕ್ಕೂ ಮೀರಿ ಆಸ್ತಿ ಗಳಿಕೆ ಆರೋಪ ; ಚಂದ್ರಶೇಖ‌ರ್, ಜಕಾರ್ತಿ ಲೋಕಾಯುಕ್ತ ಬಲೆಗೆ

ಎಸ್.ಎಸ್.ಎಲ್.ಸಿ. ಪರೀಕ್ಷಾ ಫಲಿತಾಂಶ ಹೆಚ್ಚಿಸಲು ಕಾರ್ಯೋನ್ಮುಖರಾಗುವಂತೆ ಜಿ.ಪಂ. ಸಿಇಓ ಸೂಚನೆ ಫಲಿತಾಂಶ ಹೆಚ್ಚಳ ಸಂಬಂಧ 56 ನೋಡಲ್ ಅಧಿಕಾರಿಗಳ ನೇಮಕ

ಮಾನ್ಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ಅಧ್ಯಕ್ಷತೆಯಲ್ಲಿ ನಡೆದ ಜಿಲ್ಲಾ ಮಟ್ಟದ ಬ್ಯಾಂಕುಗಳ ಪ್ರಗತಿ ಪರಿಶೀಲನಾ ಸಮಿತಿ ಸಭೆ.

Leave a Comment