NEWS

ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನ್ ಜೊತೆಗೆ ಮುಖಾಮುಖಿ

ಪಾಲನೆ ನ್ಯೂಸ್

ವಾಷಿಂಗ್ಟನ್: ಪಾಕಿಸ್ತಾನದ ಇಸ್ಲಾಮಾಬಾದ್‌ನಲ್ಲಿ ನಡೆದ ಅಮೆರಿಕ-ಇರಾನ್ ಮಾತುಕತೆ ವಿಫಲವಾದ ನಂತರ, ಎರಡು ವಾರಗಳ ಕದನ ವಿರಾಮ ಕೊನೆಗೊಳ್ಳುವ ಮೊದಲು, ಈ ವಾರದ ಕೊನೆಯಲ್ಲಿ ಉಭಯ ರಾಷ್ಟ್ರಗಳು ಹೊಸ ಸುತ್ತಿನ ಮಾತುಕತೆಗಳನ್ನು ನಡೆಸಲು ಪ್ರಯತ್ನಿಸಬಹುದು ಎನ್ನಲಾಗಿದೆ. ಅಮೆರಿಕದ ಮಾಧ್ಯಮ ವರದಿಗಳ ಪ್ರಕಾರ, ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನ್ ಜೊತೆಗೆ ಮುಖಾಮುಖಿ ಮಾತುಕತೆಗಳನ್ನು ಪುನರಾರಂಭಿಸಲು ಮುಕ್ತರಾಗಿದ್ದಾರೆ.

ಆದರೆ, ಇರಾನ್ ಅಮೆರಿಕದ ಬೇಡಿಕೆಗಳಿಗೆ ಮಣಿಯಲು ಸಿದ್ದವಾಗಿದೆ ಎಂದು ಅವರು ಭಾವಿಸಿದರೆ ಮಾತ್ರ ಎಂದಿದೆ. విప్రిలో 21 ರಂದು ಕದನ ವಿರಾಮ ಮುಕ್ತಾಯಗೊಳ್ಳುವ ಮೊದಲು ಪಶ್ಚಿಮ ಏಷ್ಯಾದಲ್ಲಿ ಯುದ್ಧವನ್ನು ಕೊನೆಗೊಳಿಸುವ ಗುರಿಯನ್ನು ಹೊಂದಿರುವ ಒಪ್ಪಂದಕ್ಕೆ ಬರಲು ವಾಷಿಂಗ್ಟನ್ ಮತ್ತು ಟೆಹರಾನ್ ಹೊಸ ಮಾತುಕತೆಗಳನ್ನು ನಡೆಸಲು ಎದುರುನೋಡುತ್ತಿವೆ ಎಂದು ಮೂಲಗಳನ್ನು ಉಲ್ಲೇಖಿಸಿ ಅಸೋಸಿಯೇಟೆಡ್‌ ಪ್ರೆಸ್‌ ವರದಿ ಮಾಡಿವೆ.

ಅಮೆರಿಕ ಮತ್ತು ಇರಾನ್ ನಡುವೆ ಹೊಸ ಸುತ್ತಿನ ಮಾತುಕತೆ ಏರ್ಪಡಿಸುವ ಕುರಿತು ಇನ್ನೂ ಚರ್ಚೆಗಳು ನಡೆಯುತ್ತಿವೆ ಎಂದು ಕೆಲವು ಅಮೆರಿಕನ್ ಮೂಲಗಳು ತಿಳಿಸಿವೆ. ಆದರೆ ಮಧ್ಯಸ್ಥಿಕೆ ವಹಿಸುತ್ತಿರುವ ದೇಶದ ರಾಜತಾಂತ್ರಿಕರೊಬ್ಬರು ಎರಡೂ ಕಡೆಯವರು ಈಗಾಗಲೇ ಮಾತುಕತೆ ನಡೆಸಲು ಒಪ್ಪಿಕೊಂಡಿದ್ದಾರೆ ಎಂದು ಹೇಳಿದ್ದಾರೆ. ಅದೇ ಮಟ್ಟದ ನಿಯೋಗವು ಸಭೆಗೆ ಹಾಜರಾಗುವ ನಿರೀಕ್ಷೆಯಿದೆಯೇ ಎಂಬುದು ಸ್ಪಷ್ಟವಾಗಿಲ್ಲ ಎಂದು ರಾಜತಾಂತ್ರಿಕ ಮತ್ತು ಅಮೆರಿಕದ ಅಧಿಕಾರಿಗಳು ತಿಳಿಸಿದ್ದಾರೆ. ವರದಿ ಪ್ರಕಾರ, ಇಸ್ಲಾಮಾಬಾದ್ ಮತ್ತು ಜಿನೀವಾಹೊಸಸುತ್ತಿನ ಮಾತುಕತೆಗಾಗಿ ನೋಡುತ್ತಿರುವ ಸಂಭಾವ್ಯ ಸ್ಥಳಗಳಾಗಿವೆ.

✅ಪಾಲನೆ.ಇನ್ ವಾಟ್ಸ್ ಆ್ಯಪ್ ಗುಂಪಿಗೆ ಸೇರಿರಿ ನ್ಯೂಸ್ & ವ್ಯೂಸ್ ಓದಿರಿ. ಆಲೋಚಿಸಿ. ಸ್ಪಂದಿಸಿ.
https://chat.whatsapp.com/H1gUYgrzvnQGZAhIQSGMHn

Related posts

ಮೊಟ್ಟ ಮೊದಲ ಬಾರಿಗೆ ಬಸ್ ನಿಲ್ದಾಣಗಳಲ್ಲಿ ಬಜೆಟ್ ನೇರ ಪ್ರಸಾರ

ಪದ್ಮಶ್ರೀ ಪುರಸ್ಕೃತ ಅಂಕೇಗೌಡರಿಗೆ ಜಿಲ್ಲಾ ಕಸಾಪ ಅಭಿನಂದನೆ ಇಂದು ಸಂಜೆ

ಕೈಗಾರಿಕಾ ಪ್ರದೇಶಗಳ ಅಭಿವೃದ್ಧಿಗಾಗಿ ಮದ್ದೂರು ತಾಲ್ಲೂಕಿನ ಗೆಜ್ಜಲಗೆರೆ, ಕುದುರೆಗುಂಡಿ ಹಾಗೂ ಮಂಡ್ಯ ತಾಲ್ಲೂಕಿನ ನೋದೆಕೊಪ್ಪಲು ಗ್ರಾಮಗಳ ರೈತರ ಸಭೆ

Leave a Comment