NEWS

ನದಿಗಳನ್ನು ಸ್ವಚ್ಛವಾಗಿಡಿ

ಪಾಲನೆ ನ್ಯೂಸ್

ಮೈಸೂರು :‌ ಜಿಲ್ಲೆಯ ಹುಣಸೂರು ತಾಲ್ಲೂಕಿನ ಮೂಲಕ ಹರಿಯುವ ಲಕ್ಷ್ಮಣತೀರ್ಥ ನದಿ ಕಾವೇರಿ ನದಿಯ ಉಪನದಿಯಾಗಿದ್ದು, ಹುಣಸೂರು ಭಾಗದ ಬಹಳ ಮುಖ್ಯವಾದ ಜಲ ಮೂಲವಾಗಿದೆ. ಲಕ್ಷ್ಮಣತೀರ್ಥ ನದಿಯ ನೀರನ್ನು ಕೃಷಿ, ಕುಡಿಯುವ ನೀರು ಮತ್ತು ದೈನಂದಿನ ಬಳಕೆಗಾಗಿ ಜನರು ಅವಲಂಬಿಸಿದ್ದಾರೆ. ಆದರೆ 8-9 ವರ್ಷಗಳಿಂದ ನಗರದ ಕೆಲವು ಭಾಗಗಳಲ್ಲಿ ಪ್ಲಾಸ್ಟಿಕ್ ಕಸ ಮತ್ತು ಮಲಿನ ನೀರನ್ನು ನದಿಗೆ ಬಿಡುತ್ತಿರುವುದರಿಂದ ನದಿಯ ನೀರು ಕಲುಷಿತವಾಗಿದೆ.

ಇದರಿಂದ ಕುಡಿಯುವ ನೀರಿನ ಗುಣಮಟ್ಟ ಹಾಳಾಗುತ್ತಿದೆ; ಜನರ ಆರೋಗ್ಯಕ್ಕೂ ಹಾನಿ ಉಂಟಾಗುತ್ತದೆ. ಈ ಪರಿಸ್ಥಿತಿ ಮುಂದುವರಿದರೆ ಭವಿಷ್ಯದಲ್ಲಿ ಹುಣಸೂರು ಭಾಗದಲ್ಲಿ ನೀರಿನ ದೊಡ್ಡ ಸಮಸ್ಯೆ ಉಂಟಾಗುವ ಸಾಧ್ಯತೆ ಇದೆ. ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ತಕ್ಷಣ ಕ್ರಮ ಕೈಗೊಂಡು ನದಿಯ ಸ್ವಚ್ಛತೆ ಕಾಪಾಡಬೇಕು. ನದಿಗೆ ಕಸ ಮತ್ತು ಮಲಿನ ನೀರು ಬಿಡುವುದನ್ನು ತಡೆಯಬೇಕು. ನದಿಗೆ ಕಸವನ್ನು ಎಸೆಯದಂತೆ ಜನರಲ್ಲಿ ಜಾಗೃತಿ ಮೂಡಿಸಬೇಕು ಹಾಗೂ ನಿಯಮ ಉಲ್ಲಂಘಿಸುವವರಿಗೆ ದಂಡವನ್ನೂ ವಿಧಿಸಬೇಕು. ನದಿಯನ್ನು ಉಳಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ.

✅ಪಾಲನೆ.ಇನ್ ವಾಟ್ಸ್ ಆ್ಯಪ್ ಗುಂಪಿಗೆ ಸೇರಿರಿ ನ್ಯೂಸ್ & ವ್ಯೂಸ್ ಓದಿರಿ. ಆಲೋಚಿಸಿ. ಸ್ಪಂದಿಸಿ.
https://chat.whatsapp.com/H1gUYgrzvnQGZAhIQSGMHn

Related posts

ರೈತರ ಅಭಿವೃದ್ಧಿಗಾಗಿ ಮಂಡ್ಯ ಜಿಲ್ಲೆಗೆ ಕೃಷಿ ವಿಶ್ವವಿದ್ಯಾನಿಲಯ ತರಲಾಗಿದೆ

ಬೂದನೂರು ಉತ್ಸವ 2026 ಸಾಂಸ್ಕೃತಿಕ ವೈಭವ:  ಚಲುವರಾಯಸ್ವಾಮಿ

ವಿವಿಧ ಇಲಾಖೆಗಳ ಹುದ್ದೆಗಳಿಗೆ ಶೇ.17ರಿಂದ ಶೇ.15ಕ್ಕೆ ಸೀಮಿತಗೊಳಿಸಲಾಗಿದೆ

Leave a Comment