ಪಾಲನೆ ನ್ಯೂಸ್
ಬೆಂಗಳೂರು: ನಾಯಕ ರಜತ್ ಪಾಟೀದಾರ್, ದೇವದತ್ ಪಡಿಕ್ಕಲ್ ಮತ್ತು ಟಿಮ್ ಡೇವಿಡ್ ಅವರ ಸ್ಪೋಟಕ ಬ್ಯಾಟಿಂಗ್ ನೆರವಿನಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಚೆನ್ನೈ ಸೂಪರ್ ಕಿಂಗ್ಸ್ ತಂಡದ ವಿರುದ್ದ 43 ರನ್‌ಗಳ ಜಯ ಸಾಧಿಸಿದೆ. ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಭಾನು ವಾರ ರಾತ್ರಿ ನಡೆದ ಐಪಿಎಲ್ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಆರ್‌ಸಿಬಿ ತಂಡಕ್ಕೆ ವಿರಾಟ್ ಕೊಹ್ಲಿ ಮತ್ತು ಫಿಲಿಪ್ ಸಾಲ್ಟ್ ಉತ್ತಮ ಆರಂಭ ನೀಡಿದರು. ನಂತರ ಬಂದ ದೇವದತ್ತ ಪಡಿಕ್ಕಲ್ ಅರ್ಧಶತಕ ಬಾರಿಸಿ ತಂಡಕ್ಕೆ ನೆರವಾದರು. ರಜತ್ ಪಾಟೀದಾರ್ ಅಜೇಯ 48 ರನ್ ಮತ್ತು ಟಿಮ್ ಡೇವಿಡ್ ಅಜೇಯ 70 ಅಬ್ಬರದ ಆಟ, ತಂಡದ ಮೊತ್ತವನ್ನು 250ಕ್ಕೆ ತಲುಪಿಸಿತು.
ಡೇವಿಡ್- ಪಾಟೀದಾರ್ ಆರ್ಭಟ: ಉತ್ತಮ
ಬ್ಯಾಟಿಂಗ್ ಲಯ ಕಂಡುಕೊಂಡ ಟಿಮ್ ಡೇವಿಡ್ ರಜತ್ ಪಾಟೀದಾರ್, ಕೊನೆಯ ಆರು- ಏಳು ಓವರ್ ಗಳಲ್ಲಿ ಸಿಕ್ಟರ್‌ಗಳಸುರಿಮಳೆಗೈದರು. ಕೇವಲ 25 ಎಸೆತಗಳಲ್ಲಿ 70 ರನ್ ಗಳಿಸಿದ ಡೇವಿಡ್, ಚೆನ್ನೈ SUN NOTHING ಬೌಲರ್ ಗಳ ಪಾಲಿಗೆ ಸಿಂಹಸ್ವಪ್ನವಾದರು. ಕೇವಲ 35 ಎಸೆತಗಳಲ್ಲಿ ಮುರಿಯದ 99 ರನ್ ಗಳ ಜೊತೆಯಾಟ ಆಡಿದ ರಜತ್- ಡೇವಿಡ್ ಜೋಡಿ, ತಂಡಕ್ಕೆ ದಾಖಲೆಯ ಮೊತ್ತ ಸೇರಿಸುವಲ್ಲಿ ಯಶಸ್ವಿಯಾದರು.

ಆರ್‌ಸಿಬಿ ನೀಡಿದ ಸವಾಲಿನ ಗುರಿ ಬೆನ್ನತ್ತಿದ ಸಿಎಸ್ ತಂಡ ಆರಂಭಿಕ ಹಂತದಲ್ಲಿಯೇ ಪ್ರಮುಖ ವಿಕೆಟ್‌ಗಳನ್ನು ಕಳೆದು ಕೊಂಡಿತು. ಆರ್‌ಸಿಬಿ ಬೌಲರ್‌ಗಳ ದಾಳಿಗೆ ಸಂಜು ಸ್ಯಾಮನ್ಸ್, ರುತುರಾಜ ಗಾಯಕವಾಡ್, ಆಯುಷ್ ಮಾತ್ರೆ ANG ಒಂದಂಕಿಯ ರನ್ ಗಳಿಸಲಷ್ಟೇ ಶಕ್ತರಾದರು. ನಂತರ ಬಂದ ಸರ್ಫರಾಜ್ ಖಾನ್ (50ರನ್, 25 ಎಸೆತ ) ಶಾಂತಚಿತ್ತದ ಇನ್ನಿಂಗ್ ಆಡಿ ಅರ್ಧಶತಕಗಳಿಸಿದರು. ಪ್ರಶಾಂತ್ ವೀರ್, ಜೇಮಿ ಓವರ್ಟನ್ ತಂಡಕ್ಕೆ ಬಲ ತುಂಬಿದರು.
ಸಿಎಸ್‌ಕೆ ಪರ ಶಿವಂ ದುಬೆ, ಜೇಮಿ ಓವರ್ಟನ್ ಮತ್ತು ಅನ್ಸುಲ್ ಕಾಂಬೋಜ್ ತಲಾ ಒಂದೊಂದು ವಿಕೆಟ್ ಪಡೆದುಕೊಂಡರು. ಆರ್‌ಸಿಬಿ ಪರ ಜಾಕೋಬ್ ಢಫಿ, ಭುವನೇಶ್ವರ ಕುಮಾರ್, ಕೃನಾಗ್ ಪಾಂಡ್ಯ ವಿಕೆಟ್ ಪಡೆದುಕೊಂಡರು.
✅ಪಾಲನೆ.ಇನ್ ವಾಟ್ಸ್ ಆ್ಯಪ್ ಗುಂಪಿಗೆ ಸೇರಿರಿ ನ್ಯೂಸ್ & ವ್ಯೂಸ್ ಓದಿರಿ. ಆಲೋಚಿಸಿ. ಸ್ಪಂದಿಸಿ.
https://chat.whatsapp.com/H1gUYgrzvnQGZAhIQSGMHn
