ಪಾಲನೆ ನ್ಯೂಸ್
ಬೆಂಗಳೂರು: ಇಂಡಿಯಾ ಯಮಹಾ ಮೋಟಾರ್ ಪ್ರೈವೇಟ್ ಲಿಮಿಟೆಡ್ ವತಿಯಿಂದ ನಗರದಲ್ಲಿ ಮೊದಲ ಬಾರಿಗೆ ‘ಮೆಗಾ ಮೈಲೇಜ್ ಚಾಲೆಂಜ್’ ಆಯೋಜಿಸಲಾಗಿತ್ತು. ಎಫ್‌ಝಡ್ ಎಸ್‌ಎಫ್‌ಐ ಹೈಬ್ರಿಡ್ ಬೈಕ್ ಹಾಗೂ 125ಸಿಸಿ ಹೈಬ್ರಿಡ್ ಸ್ಕೂಟರ್‌ಗಳಾದ ಫ್ಯಾಸಿನೋ ಮತ್ತು ರೇಝಡ್ ಮಾದರಿಗಳ ಸಾಮರ್ಥ್ಯವನ್ನು ಗ್ರಾಹಕರಿಗೆ ಪರಿಚಯಿಸಲು ಹಮ್ಮಿಕೊಳ್ಳಲಾಗಿತ್ತು. ಐ ಆಟೋಮೊಬೈಲ್ಸ್, ವೈಟ್‌ಫೀಲ್ಡ್ ಯಮಹಾ, ಗರುಡ ಮೋಟಾರ್ ಸೈಕಲ್ಸ್, ವಿನಾಯಕ ಮೋಟರ್ಸ್ ಮತ್ತು ಪ್ಯಾನಾಶ್ ಎಂಟರ್‌ಪೈಸಸ್ ಸಹಯೋಗದಲ್ಲಿ ನಡೆದ ಚಾಲೆಂಜ್‌ನಲ್ಲಿ ಗ್ರಾಹಕರು ಕುಟುಂಬ ಸಮೇತ ಉತ್ಸಾಹದಿಂದ ಪಾಲ್ಗೊಂಡರು.

ಹೈಬ್ರಿಡ್ ತಂತ್ರಜ್ಞಾನದ ಸ್ಮಾರ್ಟ್ ಮೋಟರ್ ಜನರೇಟರ್ ಮತ್ತು ಸ್ಟಾಪ್-ಸ್ಟಾರ್ಟ್ ಸಿಸ್ಟಮ್ ಇಂಧನ ಉಳಿತಾಯ ಹೆಚ್ಚಿಸುವ ಜತೆಗೆ ಉಳಿತಾಯದೊಂದಿಗೆ ಪರಿಸರದ ಮೇಲಿನ ಪರಿಣಾಮವನ್ನು ಕಡಿಮೆ ಮಾಡುತ್ತದೆ. ಉತ್ತಮ ವೇಗ ಹಾಗೂ ಇಂಧನ ಉಳಿವು ಇದರ ವಿಶೇಷತೆ. ಸ್ಕೂಟರ್ ವಿಭಾಗದಲ್ಲಿ ಶಶಿಧರ್ (115.15 ಕಿಮೀ/ಲೀ) ಮೊದಲ ಸ್ಥಾನ ಪಡೆದರೆ, ದುರ್ಗಪ್ಪ, ಗೌತಮ್, ಸತ್ಯರಾಜ್, ನರಸಿಂಹ ಮುಂದಿನ ಸ್ಥಾನಗಳಲ್ಲಿ ಹೊರಹೊಮ್ಮಿದರು. ಬೈಕ್ ವಿಭಾಗದಲ್ಲಿ ಪ್ರಭಾಕರನ್ (103.7 ಕಿಮೀ/ಲೀ) ಮೊದಲ ಸ್ಥಾನ, ರಕ್ಷಿತ್ ಹಾಗೂ ಅಂಬರೀಷ್ ನಂತರದ ಸ್ಥಾನ ಗಳಿಸಿದರು. ವಿಜೇತರಿಗೆ ಟ್ರೋಫಿ ಮತ್ತು ಪ್ರಮಾಣಪತ್ರ ನೀಡಲಾಯಿತು.
✅ಪಾಲನೆ.ಇನ್ ವಾಟ್ಸ್ ಆ್ಯಪ್ ಗುಂಪಿಗೆ ಸೇರಿರಿ ನ್ಯೂಸ್ & ವ್ಯೂಸ್ ಓದಿರಿ. ಆಲೋಚಿಸಿ. ಸ್ಪಂದಿಸಿ.
https://chat.whatsapp.com/H1gUYgrzvnQGZAhIQSGMHn
