ಪಾಲನೆ ನ್ಯೂಸ್
ಬೆಂಗಳೂರು: ಐಟಿಐ, ಡಿಪ್ಲೊಮಾ ಅಥವಾ ಉದ್ಯೋಗ ಆಧಾರಿತ ಕೋರ್ಸ್‌ಗಳನ್ನು ವಿದ್ಯಾರ್ಥಿಗಳು ಎಲ್ ಎಲ್ ಬಿ (ಜೆಒಸಿ) ಪೂರೈಸಿರುವ ಸೇರಲು ಪದವಿಗೆ ಅರ್ಹರು ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ. ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದ (ಕೆಎಸ್‌ಎಲ್‌ಯು) ವಿರುದ್ಧ ಮೈಸೂರಿನ ಜಾವೇದ್ ಖಾನ್ ಎಂಬುವರು ಸೇರಿ 9 ವಿದ್ಯಾರ್ಥಿಗಳು ಸಲ್ಲಿಸಿದ್ದ ಅರ್ಜಿಯನ್ನು ಪುರಸ್ಕರಿಸಿದೆ. ಈ ಕೋರ್ಸ್‌ಗಳನ್ನು ಪೂರೈಸಿದ್ದ ವಿದ್ಯಾರ್ಥಿಗಳು ರಾಜ್ಯದ ವಿವಿಧ ಕಾನೂನು ಕಾಲೇಜುಗಳಲ್ಲಿ ಎಲ್ ಎಲ್‌ಬಿಗೆ ಪ್ರವೇಶ ಪಡೆದಿದ್ದರು. ಇವರು ಪಿಯುಸಿ ಶಿಕ್ಷಣ ಪಡೆಯದ ಕಾರಣ ಪ್ರವೇಶಾತಿಯನ್ನು ಅಸಿಂಧು ಎಂದು ಕೆಎಸ್‌ಎಲ್‌ಯು ಘೋಷಿಸಿತ್ತು. ಇದರ ವಿರುದ್ದ ವಿದ್ಯಾರ್ಥಿಗಳು ಹೈಕೋರ್ಟ್ ಮೆಟ್ಟಿಲೇರಿದ್ದರು.
ಇದರಲ್ಲಿ 3 ವರ್ಷದ ಎಲ್‌ಎಲ್‌ಬಿ ಪಿಯುಸಿಗೆ ತತ್ಸಮಾನ ಜೆಒಸಿ, ಐಟಿಐ ಅಥವಾ ಡಿಪ್ಲೊಮಾ ಕೋರ್ಸ್‌ಗಳು ಪಿಯುಸಿಗೆ ಸಮಾನವಾದ ಸೀನಿಯರ್ ಸ್ಕೂಲ್ ಸರ್ಟಿಫಿಕೇಟ್ ಎಂದು ಪರಿಗಣಿಸಲ್ಪಡುವುದರಿಂದ, ಈ ವಿದ್ಯಾರ್ಥಿಗಳು ನೇರವಾಗಿ 5 ವರ್ಷದ ಕೋರ್ಸ್‌ಗೆ ಸೇರಲು ಕಾನೂನಾತ್ಮಕ ಅಡ್ಡಿಯಿಲ್ಲ. ಅಭ್ಯರ್ಥಿಗಳು ಜೆಒಸಿ, ಐಟಿಐ ಅಥವಾ ಡಿಪ್ಲೊಮಾ ಆಧಾರದ ಮೇಲೆ ಪದವಿ ಪಡೆದಿದ್ದರೆ, ಆ ಪದವಿಯೇ 3 ವರ್ಷದ ಎಲ್‌ಎಲ್‌ಬಿ ಕೋರ್ಸ್‌ಗೆ ಸೇರಲು ಅರ್ಹತೆಯಾಗುತ್ತದೆ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ. ಮತ್ತು 5 ವರ್ಷದ ಇಂಟಿಗ್ರೇಟೆಡ್ ಎಲ್‌ಎಲ್‌ಬಿ ಕೋರ್ಸ್‌ಗಳಿಗೆ ಸಂಬಂಧಿಸಿದ ಅರ್ಜಿಗಳು ಸೇರಿತ್ತು.

ಅರ್ಜಿದಾರರ ಪರವಾಗಿ ನ್ಯಾಯವಾದಿ ನಮನ್ ವಂಕ್ಚಾರಿ ವಾದಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ | ಹೈಕೋರ್ಟ್ ಸ್ಪಷ್ಟನೆ ಇ.ಎಸ್. ಇಂದಿರೇಶ್ ಅವರಿದ್ದ ಏಕಸದಸ್ಯ ಪೀಠವು ಈ ಹಿಂದೆ ಹೈಕೋರ್ಟ್ ನೀಡಿದ್ದ ತೀರ್ಪನ್ನು ಉಲ್ಲೇಖಿಸಿ, ವಿದ್ಯಾರ್ಥಿಯು ಐಟಿಐ ಆಧಾರದ ಮೇಲೆ ಪದವಿ ಪಡೆಯಲು ಅರ್ಹನಾಗಿದ್ದ ಮೇಲೆ, ಅದೇ ಆಧಾರದಲ್ಲಿ ಎಲ್ ಎಲ್‌ಬಿ ಪ್ರವೇಶ ನಿರಾಕರಿಸಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟಿದೆ. ಬಾರ್ ಕೌನ್ಸಿಲ್ ಆಫ್ ಇಂಡಿಯಾದ ಲೀಗಲ್ ಎಜುಕೇಶನ್ ರೂಲ್ಸ್ ಅನ್ವಯ ಜೆಒಸಿ ಅಥವಾ ಐಟಿಐ ಕೋರ್ಟ್‌ಗಳನ್ನು ಸೀನಿಯರ್ ಸ್ಕೂಲ್ ಸರ್ಟಿಫಿಕೇಟ್ (10+2) ಕೋರ್ಸ್‌ಗಳಿಗೆ ಸಮಾನ ಎಂದು ಪರಿಗಣಿಸಬೇಕು ಎಂದು ನ್ಯಾಯಾಲಯ ಹೇಳಿದೆ.
ಫಲಿತಾಂಶ ಪ್ರಕಟಕ್ಕೆ ಸೂಚನೆ: ಈಗಾಗಲೇ ನ್ಯಾಯಾಲಯದ ಮಧ್ಯಂತರ ಆದೇಶದ ಮೇರೆಗೆ ಜನವರಿ ಮತ್ತು ಫೆಬ್ರವರಿಯಲ್ಲಿ ನಡೆದ ಮೊದಲ ಸೆಮಿಸ್ಟರ್ ಪರೀಕ್ಷೆಯ ಫಲಿತಾಂಶವನ್ನು ತಕ್ಷಣವೇ ಪ್ರಕಟಿಸುವಂತೆ ಕೆಎಸ್ಎಲ್‌ಯುಗೆ ನ್ಯಾಯಾಲಯ ನಿರ್ದೇಶನ ನೀಡಿದೆ. ಅಲ್ಲದೆ, ಮುಂದಿನ ಸೆಮಿಸ್ಟರ್ ಗಳಿಗೆ ಮುಂದುವರಿಯಲು ವಿದ್ಯಾರ್ಥಿಗಳಿಗೆ ಅನುಮತಿ ನೀಡಬೇಕು ಎಂದು ಆದೇಶಿಸಿದೆ.
✅ಪಾಲನೆ.ಇನ್ ವಾಟ್ಸ್ ಆ್ಯಪ್ ಗುಂಪಿಗೆ ಸೇರಿರಿ ನ್ಯೂಸ್ & ವ್ಯೂಸ್ ಓದಿರಿ. ಆಲೋಚಿಸಿ. ಸ್ಪಂದಿಸಿ.
https://chat.whatsapp.com/H1gUYgrzvnQGZAhIQSGMHn
