NEWS

ಕಾಡಾನೆಗಳ ದಾಳಿಗೆ ಬೆಳೆ ಹಾನಿ

ಪಾಲನೆ ನ್ಯೂಸ್

ನಾಪೋಕ್ಲು: ನರಿಯಂದಡ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚೇಲಾವರ ಹಾಗೂ ಕೊಕೇರಿ ಗ್ರಾಮದಲ್ಲಿ ಕಾಡಾನೆ ಹಾವಳಿ ಮುಂದುವರೆದಿದ್ದು ಬೆಳೆಗಾರರ ತೋಟಗಳಿ ಲಗ್ಗೆ ಇಟ್ಟ ಕಾಡಾನೆಗಳ ಹಿಂಡು ಕೃಷಿಗಳು ಗಿಡಗಳನ್ನು ತೊಳೆದು ನಾಶಪಡಿಸಿ ನಷ್ಟ ಉಂಟುಮಾಡಿದೆ.
ಚೇಲಾವರ ಗ್ರಾಮದ ಮುಂಡಿಯೊಳಂಡ ದರ್ಶನ್ ನಾಚಪ್ಪ ಹಾಗೂ ಮುಂಡಿಯೊಳಂಡ ಕುಟುಂಬಸ್ಥರ ತೋಟಗಳಿಗೆ ಹಾಗೂ ಕೋಕೇರಿ ಗ್ರಾಮದ ಸುಮತಿ ಕುಂಪ್ಪ ಎಂಬುವವರ ತೋಟಕ್ಕೆ ಲಗ್ಗೆ ಇಟ್ಟ ಕಾಡಾನೆಗಳ ಹಿಂಡು ಕಾಫಿ, ಬಾಳೆ, ಅಡಿಕೆ ಹಾಗೂ ಮನೆ ಸಮೀಪದಲ್ಲಿ ಬೆಳೆದಿದ್ದ ಹಣ್ಣಿನ ಗಿಡಗಳನ್ನು ತುಳಿದು ನಾಶ ಪಡಿಸಿದ್ದು ಅಪಾರ ಪ್ರಮಾಣದಲ್ಲಿ ನಷ್ಟ ಸಂಭವಿಸಿದೆ.

ಈ ವ್ಯಾಪ್ತಿಯಲ್ಲಿ ನಿರಂತರ ಕಾಡಾನೆಗಳ ಹಾವಳಿಯಿಂದ ಕಾರ್ಮಿಕರು ತೋಟಗಳಿಗೆ ತೆರಳಲು ಹಿಂದೇಟು ಹಾಕುತ್ತಿದ್ದಾರೆ. ಇದರಿಂದ ಗ್ರಾಮದಲ್ಲಿ ನಡೆದಾಡಲು ಭಯದ ವಾತಾವರಣ ನಿರ್ಮಾಣವಾಗಿದೆ.ಹಲವಾರು ಬಾರಿ ಕಾಡಾನೆ ಈ ವ್ಯಾಪ್ತಿಯ ರೈತರ ಹಾಗೂ ಕಾರ್ಮಿಕರ ಮೇಲೆ ದಾಳಿ ನಡೆಸಿದ್ದು, ಮುಂದೆ ಜೀವ ಬಲಿ ಪಡೆಯುವ ಮುನ್ನ ಅರಣ್ಯ ಇಲಾಖೆ ಕಾಡಾನೆ ಹಾವಳಿ ನಿಯಂತ್ರಿಸಲು ಕ್ರಮ ಕೈಗೊಳ್ಳಬೇಕು. ನಷ್ಟ ಅನುಭವಿಸಿದ ತೋಟದ ಮಾಲೀಕರಿಗೆ ಸೂಕ್ತ ಪರಿಹಾರ ಒದಗಿಸಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

✅ ಪಾಲನೆ.ಇನ್ ವಾಟ್ಸ್ ಆ್ಯಪ್ ಗುಂಪಿಗೆ ಸೇರಿರಿ ನ್ಯೂಸ್ & ವ್ಯೂಸ್ ಓದಿರಿ. ಆಲೋಚಿಸಿ. ಸ್ಪಂದಿಸಿ.
https://chat.whatsapp.com/H1gUYgrzvnQGZAhIQSGMHn

Related posts

103° ಜ್ವರದಲ್ಲೂ ಫೈನಲ್ ಆಡಿದ ಆರ್‌ ಸಿ ಬಿ ನಾಯಕಿ ಸ್ಮೃತಿ ಮಂಧನಾ!

ಮಂಡ್ಯ ತಾಲ್ಲೂಕು ಕಚೇರಿಗೆ ಜಿಲ್ಲಾಧಿಕಾರಿ ದಿಡೀರ್ ಭೇಟಿ, ಸಾರ್ವಜನಿಕರಿಂದ ಅಹವಾಲು ಸ್ವೀಕಾರ

ಬೆಳೆ ಬೆಳೆಯುವ ಮೊದಲು ಮಣ್ಣು ಪರೀಕ್ಷೆಯನ್ನು ಕಡ್ಡಾಯವಾಗಿ ಮಾಡಿಸಬೇಕೆಂದು ರೈತರಿಗೆ ಕೃಷಿ ವಿಜ್ಞಾನಿ ಸಚಿತಾನಾಥಮ್ ಸಲಹೆ ನೀಡಿದರು.

Leave a Comment