NEWS

₹100 ಕೋಟಿ ಚಿನ್ನ ಕದ್ದಿದ್ದಾಕೆ ಸೆರೆಮನೆಯಿಂದ ಮನೆಗೆ

ಪಾಲನೆ ನ್ಯೂಸ್

ಬೆಂಗಳೂರು : ಕಳೆದೊಂದು ವರ್ಷದಿಂದ ಚಿನ್ನ ಕಳ್ಳ ಸಾಗಣೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿದ್ದ ಚಿತ್ರ ನಟಿ, ಡಿಜಿಪಿ ರಾಮಚಂದ್ರರಾವ್ ಅವರ ಮಲ ಮಗಳು ರನ್ಯಾ ರಾವ್ ಬುಧವಾರ ಸೆರೆಮನೆಯಿಂದ ಹೊರಬಂದಿದ್ದಾರೆ.
ಕಾರಾಗೃಹದಿಂದ ಸಂಜೆ ಬಿಡುಗಡೆಗೊಂಡ ರನ್ಯಾ ರಾವ್ ತಮ್ಮ ವಕೀಲರ ತಂಡದ ಜತೆ ಕಾರಿನಲ್ಲಿ ತೆರಳಿದರು. ಈ ವೇಳೆ ಮಾಧ್ಯಮಗಳಿಗೆ ಯಾವುದೇ ಪ್ರತಿಕ್ರಿಯೆ ನೀಡದೆ ಅಂತರ ಕಾಯ್ದುಕೊಂಡರು.

ಕಳೆದ ವರ್ಷ ದುಬೈನಿಂದ 12 ಕೋಟಿ ರು. ಮೌಲ್ಯದ ಚಿನ್ನಕಳ್ಳಸಾಗಣೆ ವೇಳೆ ಸಿಕ್ಕಿಬಿದ್ದಿದ್ದ ರನ್ಯಾರಾವ್ ಬೆಂಗಳೂರು ಏರ್‌ಪೋರ್ಟ್‌ನಲ್ಲಿ ಡಿಆರ್‌ಐ ಅಧಿಕಾರಿಗಳ ತಪಾಸಣೆ ವೇಳೆ ಕಳ್ಳಸಾಗಣೆ ಬೆಳಕಿಗೆ. ಬಳಿಕ ತನಿಖೆ ವೇಳೆ 2 ವರ್ಷಗಳ ಅವಧಿಯಲ್ಲಿ ₹100 ಕೋಟಿ ಮೌಲ್ಯದ ಗೋಲ್ಡ್ ಸ್ಮಗ್ಲಿಂಗ್ ಪತ್ತೆ ಈ ಹಿನ್ನೆಲೆಯಲ್ಲಿ ಆಕೆಯ ವಿರುದ್ಧ ಕಾಫಿಪೋಸಾ ಕಾಯ್ದೆ ಜಾರಿಗೊಳಿಸಿದ್ದ ಡಿಆರ್‌ಐ ಅಧಿಕಾರಿಗಳು ಈ ಕಾಯ್ದೆ ಜಾರಿಯಾದರೆ ಕೋರ್ಟ್ ಜಾಮೀನು ನೀಡಿದರೂ ಒಂದು ವರ್ಷ ಬಿಡುಗಡೆ ಅವಕಾಶವಿಲ್ಲ ಇದೀಗ ಕಾಯ್ದೆ ಹೇರಿ ಒಂದು ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ನಟಿ ಬಿಡುಗಡೆ, ಸೀದಾ ಮನೆಗೆ.

✅ಪಾಲನೆ.ಇನ್ ವಾಟ್ಸ್ ಆ್ಯಪ್ ಗುಂಪಿಗೆ ಸೇರಿರಿ ನ್ಯೂಸ್ & ವ್ಯೂಸ್ ಓದಿರಿ. ಆಲೋಚಿಸಿ. ಸ್ಪಂದಿಸಿ.
https://chat.whatsapp.com/H1gUYgrzvnQGZAhIQSGMHn

Related posts

ಅಧ್ಯಾಪನ ಮತ್ತು ಅಧ್ಯಯನ ಸಂಶೋಧನೆಗೆ ಬಹಳ ಮುಖ್ಯವಾಗಿದೆ: ಪ್ರೊ.ಕೆ.ಶಿವಚಿತ್ತಪ್ಪ‌

ವಿನಯ್ ಕುಲಕರ್ಣಿ ಸೇರಿ ದಂತೆ ಎಲ್ಲಾ 16 ಅಪರಾಧಿಗಳಿಗೆ 82ನೇ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಜೀವಾವಧಿ ಶಿಕ್ಷೆ

ನಮ್ಮ ನಡೆ ಸ್ವಚ್ಛತೆಯ ಕಡೆರನ್ ಫಾರ್ ಮಂಡ್ಯ

Leave a Comment