ಪಾಲನೆ ನ್ಯೂಸ್
ಮಂಡ್ಯ: ಏಪ್ರಿಲ್ ಮಾಹೆಯಲ್ಲಿ ಬರುವ ಮಹನೀಯರ ಜಯಂತಿಗಳಾದ ಏಪ್ರಿಲ್ 20 ರಂದು ಬಸವ ಜಯಂತಿ, ಏಪ್ರಿಲ್ 21 ರಂದು ಶ್ರೀ ಶಂಕರಾಚಾರ್ಯ ಜಯಂತಿ, ಏಪ್ರಿಲ್ 23 ರಂದು ಶ್ರೀ ಭಗೀರಥ ಜಯಂತಿಯನ್ನು ಎಲ್ಲರ ಸಹಕಾರ ಸಮನ್ವಯತೆ ಹಾಗೂ ಸಾಮರಸ್ಯದಿಂದ ಮಹನೀಯರ ಚಿಂತನೆ ಮತ್ತು ಆದರ್ಶಗಳನ್ನು ಅಳವಡಿಸಿಕೊಳ್ಳುವ ನಿಟ್ಟಿನಲ್ಲಿ ಕಾರ್ಯಕ್ರಮವನ್ನು ಅರ್ಥ ಪೂರ್ಣವಾಗಿ ಆಚರಿಸಬೇಕು ಎಂದು ಅಪರ ಜಿಲ್ಲಾಧಿಕಾರಿ ಬಿ. ಸಿ. ಶಿವಾನಂದಮೂರ್ತಿ ರವರು ಹೇಳಿದರು.
ಇಂದು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಏಪ್ರಿಲ್ ಮಾಹೆಯಲ್ಲಿ ಬರುವ ಮಹನೀಯರು ಜಯಂತಿ ಆಚರಣೆ ಕುರಿತು ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ ಮಹನೀಯರ ಜನ್ಮ ದಿನದ ಕಾರ್ಯಕ್ರಮದ ಆಹ್ವಾನ ಪತ್ರಿಕೆಯನ್ನು ಗಣ್ಯರಿಗೆ ಹಾಗೂ ಎಲ್ಲಾ ಅಧಿಕಾರಿಗಳು ಹಾಗೂ ಸಂಘ ಸಂಘಟನೆಗಳಿಗೆ ತಲುಪಿಸುವಂತೆ ಸೂಚಿಸಿದರು.
ವೇದಿಕೆಯನ್ನು ಸ್ವಚತೆಯಿಂದ ನೋಡಿಕೊಳ್ಳುವುದು. ಮಾಹನೀಯರ ಭಾವಚಿತ್ರಗಳ ಬ್ಯಾನರ್ ಗಳನ್ನು ಅಳವಡಿಸಬೇಕು ಮತ್ತು ಸಮುದಾಯದಲ್ಲಿ ಸಾಧನೆ ಮಾಡಿರುವಂತಹ ಸಮುದಾಯದ ಗಣ್ಯರಿಗೆ ಗೌರವವನ್ನು ಸೂಚಿಸಬೇಕು. ಸಮುದಾಯದ ವಿಚಾರಕರು ಮತ್ತು ಚಿಂತಕರಿಂದ ಸಮುದಾಯದ ಅರಿವಿನ ಬಗ್ಗೆ ಉಪನ್ಯಾಸವನ್ನು ಮಾಡಿಸಬೇಕು ಎಂದು ಹೇಳಿದರು.

ವೇದಿಕೆ ಕಾರ್ಯಕ್ರಮದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ
ಮತ್ತು ವೇದಿಕೆ ಅಲಂಕಾರ-ಸೌಂಡ್ಸ್ ಲೈಟಿಂಗ್ ವ್ಯವಸ್ಥೆಯನ್ನು ಕಲ್ಪಿಸಬೇಕು ಎಂದು ಹೇಳಿದರು.
ಸಭೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರು ಬಿ. ವಿ. ನಂದೀಶ್ ವೀರ ಶೈವ ಮಹಾ ಸಭಾ ಜಿಲ್ಲಾಧ್ಯಕ್ಷರು ಆನಂದ್, ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರು ಸಿ.ಚಲುವಯ್ಯ,ಮುಖಂಡರುಗಳಾದ ಎಂ. ಶಿವಕುಮಾರ್, ಎಂ. ಬಿ. ರಾಜಶೇಖರ್, ಶಿವರುದ್ರಸ್ವಾಮಿ, ಮಂಜುನಾಥ್ ಬೆಟ್ಟಹಳ್ಳಿ, ಎಂ. ಜೆ. ಶಿವಪ್ರಕಾಶ್, ಶಂಕರ ನಾರಾಯಣ ಶಾಸ್ತ್ರೀ, ಎಲ್. ಸಂದೇಶ್, ಬಿ. ಜಿ. ಉಮಾ, ಗೋಪಾಲ್ ಅಮ್ಜದ್ ಪಾಶ, ನಾಗರತ್ನ, ಕೃಷ್ಣ, ಎಂ. ವಿ. ಧರಣೇಂದ್ರಯ್ಯ, ಮಲ್ಲಿಕಾರ್ಜುನಯ್ಯ, ಗುರುಪ್ರಸಾದ್ ಸಮುದಾಯದ ಮುಖಂಡರುಗಳು ಉಪಸ್ಥಿತರಿದ್ದರು.
✅ಪಾಲನೆ.ಇನ್ ವಾಟ್ಸ್ ಆ್ಯಪ್ ಗುಂಪಿಗೆ ಸೇರಿರಿ ನ್ಯೂಸ್ & ವ್ಯೂಸ್ ಓದಿರಿ. ಆಲೋಚಿಸಿ. ಸ್ಪಂದಿಸಿ.
https://chat.whatsapp.com/H1gUYgrzvnQGZAhIQSGMHn
