NEWS

ಮೇ 18ರೊಳಗೆ ಜೈಲುಗಳ ಸ್ಥಿತಿಯ ಬಗ್ಗೆ ಮಾಹಿತಿಗೆ ಸುಪ್ರೀಂ ಕೋರ್ಟ್ ಆದೇಶ

ಪಾಲನೆ ನ್ಯೂಸ್

ಹೊಸದಿಲ್ಲಿ: ದೇಶದ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ತಮ್ಮ ವ್ಯಾಪ್ತಿಯಲ್ಲಿರುವ ಜೈಲುಗಳ ಕುರಿತು ನವೀಕೃತ ಕ ಮಾಹಿತಿಯನ್ನು ಮೇ 18ರೊಳಗೆ ಸಲ್ಲಿಸಬೇಕು ಎಂದು ಸರ್ವೋಚ್ಚ ನ್ಯಾಯಾಲಯ ನಿರ್ದೇಶನ ನೀಡಿದೆ. ನ್ಯಾಯಮೂರ್ತಿಗಳಾದ ವಿಕ್ರಮ್‌ ನಾಥ್ ಮತ್ತು ಸಂದೀಪ್ ಮೆಹ್ರಾ ಅವರನ್ನೊಳಗೊಂಡ ಪೀಠ, ಪ್ರತಿಜೈಲಿನ ಅನುಮೋದಿತ ಸಾಮರ್ಥ್ಯ ಕೈದಿಗಳ ಸಂಖ್ಯೆ, ಅಧಿಕ ಸಾಂದ್ರತೆ (ಒವರ್ ಕೌಡಿಂಗ್) ತಡೆಗೆ ಕೈಗೊಂಡ ಕ್ರಮಗಳು ಸೇರಿದಂತೆ ಸಂಪೂರ್ಣ ವಿವರಗಳನ್ನು ನೀಡುವಂತೆ ಸೂಚಿಸಿದೆ.

ಮಹಿಳಾ ಜೈಲುಗಳ ಸಂಖ್ಯೆ, ಮಹಿಳಾ ಕೈದಿಗಳೊಂದಿಗೆ ವಾಸಿಸುವ ಮಕ್ಕಳ ಶಿಕ್ಷಣ ಹಾಗೂ ಅವರ ಕಲ್ಯಾಣಕ್ಕೆ ಒದಗಿಸಿರುವ ಸೌಲಭ್ಯಗಳ ವಿವರಗಳನ್ನೂ ನೀಡಬೇಕೆಂದು ನ್ಯಾಯಾಲಯ ಹೇಳಿದೆ. ಜೈಲುಗಳ ಅಮಾನವೀಯ ಪರಿಸ್ಥಿತಿಗಳ ಕುರಿತ ಸ್ವಯಂ ಪ್ರೇರಿತ (ಸುಮೊಟೋ) ಪ್ರಕರಣದಲ್ಲಿ ನ್ಯಾಯಾಲಯಕ್ಕೆ ಸಹಾಯ ಮಾಡುತ್ತಿರುವ ಅಮಿಕಸ್ ಕ್ಯೂರಿ ಗೌರವ್ ಅಗ್ರವಾಲ್ ಸಲ್ಲಿಸಿದ ಮಾಹಿತಿಯು 2023ರ ಅಂಕಿಅಂಶಗಳಿಗೆ ಸಂಬಂಧಿಸಿದೆ ಎಂದು ಪೀಠ ಗಮನಿಸಿದೆ. ಆದ್ದರಿಂದ ನವೀಕೃತ ಮಾಹಿತಿಯ ಅಗತ್ಯವಿದೆ ಎಂದು ನ್ಯಾಯಾಲಯ ತಿಳಿಸಿದೆ.

ಪಾಲನೆ.ಇನ್ ವಾಟ್ಸ್ ಆ್ಯಪ್ ಗುಂಪಿಗೆ ಸೇರಿರಿ ನ್ಯೂಸ್ & ವ್ಯೂಸ್ ಓದಿರಿ. ಆಲೋಚಿಸಿ. ಸ್ಪಂದಿಸಿ.
https://chat.whatsapp.com/H1gUYgrzvnQGZAhIQSGMHn

Related posts

ಅರ್ಜುನ ಸ್ಮಾರಕ ಲೋಕಾರ್ಪಣೆ

ಪುಸ್ತಕ ನಮ್ಮ ಜ್ಞಾನವನ್ನು ಹೆಚ್ಚಿಸುವ ಪರಮಾಪ್ತ ಮಿತ್ರ ಎಂದು ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ.ಮಾನಸ ಅಭಿಪ್ರಾಯಪಟ್ಟರು.

ಸಮಾಜಕ್ಕೆ ಶಾಂತಿ ಸಂದೇಶವನ್ನು ಸಾರಿದ ಮಹಾನ್ ಚೇತನ ಭಗವಾನ್ ಬುದ್ಧ

Leave a Comment