ಪಾಲನೆ ನ್ಯೂಸ್
ಮಂಡ್ಯ : ಕೆ.ಯು.ಐ.ಡಿ.ಎಫ್.ಸಿ ವತಿಯಿಂದ, ಮಂಡ್ಯ ನಗರಸಭೆ ವ್ಯಾಪ್ತಿಯಲ್ಲಿ ರೂ.30.00 ಕೋಟಿಗಳ ಅಂದಾಜಿನಲ್ಲಿ ಒಳಚರಂಡಿ ಕಾಮಗಾರಿಯನ್ನು ಅನುಷ್ಟಾನಗೊಳಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಡಾ. ಕುಮಾರ ರವರು ತಿಳಿಸಿದರು.
ನಿನ್ನೆ ನಗರಸಭೆ ಸಭಾಂಗಣದಲ್ಲಿ ನಡೆದ ಸ್ವಚ್ಚ ಭಾರತ ಮಿಷನ್(ನಗರ)-2.0 ಯೋಜನೆ ಮತ್ತು ಮಾನ್ಯ ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ ಪರಿಸರ ಪರಿಹಾರ ನಿಧಿಯಡಿ ಬಳಸಿದ ನೀರು ನಿರ್ವಹಣೆ ಯೋಜನೆಯಡಿ ಅನುಷ್ಠಾನ ಗೊಳ್ಳುತ್ತಿರುವ ಕಾಮಗಾರಿಗಳ ಜಿಲ್ಲಾ ಮಟ್ಟದ ಅನುಷ್ಠಾನ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಯೋಜನೆಯಡಿ ಮಂಡ್ಯ ನಗರದ ಯತ್ತಗದಹಳ್ಳಿ ರಸ್ತೆಯ ತ್ಯಾಜ್ಯ ನೀರು ಸಂಸ್ಕರಣಾ ಘಟಕದ ಸಾಮರ್ಥ್ಯವನ್ನು 10 ಎಂಎಲ್‍ಡಿ ಗೆ ಹೆಚ್ಚಿಸಿ ಉನ್ನತೀಕರಿಸುವುದು.
ಚಿಕ್ಕೇಗೌಡನದೊಡ್ಡಿ ತ್ಯಾಜ್ಯ ನೀರು ಸಂಸ್ಕರಣಾ ಘಟಕವನ್ನು ಉನ್ನತೀಕರಿಸುವುದು.
2.72 ಕಿ.ಮೀ ಉದ್ದಕ್ಕೆ ವಿವಿಧ ವ್ಯಾಸದ ಪೈಪ್‍ಗಳನ್ನು ಬಳಸಿ Out Fall Sewer line ಅಳವಡಿಸುವುದು.
462 ಮೀಟರ್ ಉದ್ದದ UPVC ಕೊಳವೆ ಮಾರ್ಗವನ್ನು ಅಳವಡಿಸುವುದು.Primary Treatment Plant ಗಳನ್ನು ಉನ್ನತೀಕರಿಸುವುದು.Wet well ಗಳ ಉನ್ನತೀಕರಣ.83 ಹೆಚ್.ಪಿ ಸಾಮರ್ಥ್ಯದ ಸ್ಲಡ್ಜ್ ಪಂಪ್‍ಗಳನ್ನು ಅಳವಡಿಸುವುದು.
ಯತ್ತಗದಹಳ್ಳಿ ಮತ್ತು ಚಿಕ್ಕೇಗೌಡನದೊಡ್ಡಿ ತ್ಯಾಜ್ಯ ನೀರು ಸಂಸ್ಕರಣಾ ಘಟಕಗಳನ್ನು 5 ವರ್ಷದ ಅವಧಿಗೆ ಸಂಪೂರ್ಣವಾಗಿ ನಿರ್ವಹಣೆ ಮಾಡುವುದು.
ಈಗಾಗಲೇ 2025ರ ಮಾರ್ಚ್ ನಲ್ಲಿ ಕೆ.ಯು.ಐ.ಡಿ.ಎಫ್.ಸಿ ವತಿಯಿಂದ, ಮೇ|| ನಕ್ಷತ್ರ ಇನ್ಪ್ರಾಸ್ಟ್ರಕ್ಚರ್ ಡೆವೆಲಪ್‍ಮೆಂಟ್ ಕಾರ್ಪೋರೇಷನ್, ಬೆಂಗಳೂರು ರವರಿಗೆ ಕಾರ್ಯಾದೇಶ ನೀಡಲಾಗಿರುತ್ತದೆ.
ಆಗಸ್ಟ್ 2025ರೊಳಗೆ ಕಾಮಗಾರಿಯನ್ನು ಪೂರ್ಣಗೊಳಿಸಬೇಕಾಗಿರುತ್ತದೆ.
ಜಿಲ್ಲಾಧಿಕಾರಿಗಳು ಈವರೆವಿಗೂ ಆಗಿರುವ ಕಾಮಗಾರಿಯ ಪ್ರಗತಿಯು ನಿಗಧಿಪಡಿಸಿರುವ ಪ್ರಗತಿಗಿಂತ ಕಡಿಮೆ ಇರುವ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿ, ಕಾಮಗಾರಿಯ ಅನುಷ್ಟಾನವನ್ನು ತ್ವರಿತಗೊಳಿಸಲು ಹಾಗೂ ನಿಗಧಿಪಡಿಸಿರುವ ಕಾಲಾವಧಿಯಲ್ಲಿಯೇ ಪೂರ್ಣಗೊಳಿಸಲು ಸೂಚಿಸಿದರು.

ಕೆ.ಯು.ಐ.ಡಿ.ಎಫ್.ಸಿ, ಜಿಲ್ಲಾ ನಗರಾಭಿವೃದ್ಧಿ ಕೋಶ ಹಾಗೂ ಮಂಡ್ಯ ನಗರಸಭೆಯ ಅಧಿಕಾರಿಗಳಿಗೆ ಕಾಮಗಾರಿಯನ್ನು ಆಗಾಗ್ಗೆ ಪರಿಶೀಲಿಸಿ ವರದಿ ಸಲ್ಲಿಸುವಂತೆ ಅಧಿಕಾರಿಗಳಿಗೆ ಆದೇಶಿಸಿದರು.
ಅಮೃತ್ 2.0 ಯೋಜನೆಯಡಿ ಗುತ್ತಲು ಕೆರೆಯ ಪುನರುಜ್ಜೀವನಕ್ಕಾಗಿ ಮಂಜೂರಾಗಿರುವ ರೂ.4.00 ಕೋಟಿಗಳಿಗೆ ಕ್ರಿಯಾಯೋಜನೆಯನ್ನು ರೂಪಿಸಲು, ಸದರಿ ಕ್ರಿಯಾಯೋಜನೆಯಡಿ ಗುತ್ತಲು ಕೆರೆಯ ಮೇಲ್ಭಾಗಕ್ಕೆ (ಉತ್ತರಕ್ಕೆ) ಬರುವ ಪ್ರದೇಶಗಳ ಕೊಳಚೆ ನೀರು ಗುತ್ತಲು ಕೆರೆಗೆ ಸೇರದಂತೆ Interception & Diversion ಮೂಲಕ ತ್ಯಾಜ್ಯ ನೀರು ಸಂಸ್ಕರಣಾ ಘಟಕಕ್ಕೆ ಸೇರಿಸಲು ಡಿಪಿಆರ್ ತಯಾರಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಈ ಎಲ್ಲಾ ಯೋಜನೆಗಳು ಕಾರ್ಯಗತಗೊಂಡ ನಂತರ ಸಂಪೂರ್ಣ ತ್ಯಾಜ್ಯ ನೀರನ್ನು ಎಸ್.ಟಿ.ಪಿಗೆ ಸೇರಿಸಿ ಸಂಸ್ಕರಣೆ ಮಾಡಿದ ನಂತರ ಹಾಗೂ ಮಾಲೀನ್ಯ ನಿಯಂತ್ರಣ ಮಂಡಳಿ ಮಾನದಂಡದಂತೆ ಶುದ್ಧಿಕರಿಸಿ ಕೆರೆಗೆ ಬಿಡಲಾಗುವುದು ಇದರಿಂದ, ಕೆರೆಯ ನೀರು ಯಾವುದೇ ರೀತಿ ಮಲಿನವಾಗದಂತೆ ಕ್ರಮವಹಿಸಲಾಗುತ್ತಿದೆ ಎಂದು ತಿಳಿಸಿದರು.
ಸಭೆಯಲ್ಲಿ ನಗರಾಭಿವೃದ್ಧಿ ಕೋಶ ಯೋಜನಾ ನಿರ್ದೇಶಕರಾದ ಟಿ. ಎನ್ ನರಸಿಂಹಮೂರ್ತಿ, ನಗರಾಭಿವೃದ್ಧಿ ಪೌರಾಯುಕ್ತರು ಪಂಪಶ್ರೀ, ಕಾರ್ಯಪಾಲಕ ಅಭಿಯಂತರರು ಪ್ರತಾಪ್ ಉಪಸ್ಥಿತರಿದ್ದರು.
✅ಪಾಲನೆ.ಇನ್ ವಾಟ್ಸ್ ಆ್ಯಪ್ ಗುಂಪಿಗೆ ಸೇರಿರಿ ನ್ಯೂಸ್ & ವ್ಯೂಸ್ ಓದಿರಿ. ಆಲೋಚಿಸಿ. ಸ್ಪಂದಿಸಿ.
https://chat.whatsapp.com/H1gUYgrzvnQGZAhIQSGMHn
