NEWS

ರಾಜಿನಾಮೆ ನೀಡಿದ ಬಂಗಾಳ ರಾಜ್ಯಪಾಲ

ಪಾಲನೆ ನ್ಯೂಸ್

ಕೋಲ್ಕತಾ: ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಗೆ ದಿನಾಂಕ ಪ್ರಕಟವಾಗಲು ಇನ್ನೇನು ಕೆಲ ವಾರಗಳು ಬಾಕಿ ಇರುವಾಗಲೇ, ರಾಜ್ಯಪಾಲ ಸಿ.ವಿ. ಆನಂದ್ ಬೋಸ್ ಗುರುವಾರ ಸಂಜೆ ದಿಢೀರ್ ರಾಜೀನಾಮೆ ನೀಡಿದ್ದಾರೆ. ನವದೆಹಲಿ ಪ್ರವಾಸದಲ್ಲಿದ್ದಾಗಲೇ ಅವರು ತೆಗೆದುಕೊಂಡಿರುವ ಈ ಅನಿರೀಕ್ಷಿತ ನಿರ್ಧಾರ ರಾಜ್ಯ ರಾಜಕೀಯದಲ್ಲಿ ಸಂಚಲನಕ್ಕೆ ಕಾರಣವಾಗಿದೆ.

ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕೆಲವು ರಾಜಕೀಯ ಹಿತಾಸಕ್ತಿಗಳನ್ನು ಪೂರೈಸಲು ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರು ರಾಜ್ಯಪಾಲರ ಮೇಲೆ ಒತ್ತಡ ಹೇರಿರುವ ಸಾಧ್ಯತೆಯಿದೆ ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆರೋಪಿಸಿದ್ದಾರೆ. ಆದರೆ ರಾಜೀನಾಮೆಗೆ ಬೋಸ್ ಯಾವುದೇ ಸ್ಪಷ್ಟಕಾರಣ ಕೊಟ್ಟಿಲ್ಲ. ತಮಿಳುನಾಡು ರಾಜ್ಯಪಾಲರಾಗಿರುವ ಆರ್.ಎನ್. ರವಿ ಅವರಿಗೆ ಪಶ್ಚಿಮ ಬಂಗಾಳದ ಹೆಚ್ಚುವರಿ ಹೊಣೆಗಾರಿಕೆ ನೀಡಲಾಗಿದೆ. ನೂತನ ರಾಜ್ಯಪಾಲರ ನೇಮಕದ ಬಗ್ಗೆ ಸಂಪ್ರದಾಯದಂತೆ ತಮ್ಮೊಂದಿಗೆ ಯಾವುದೇ ಪೂರ್ವ ಸಮಾಲೋಚನೆ ನಡೆಸಿಲ್ಲ ಎಂದು ಸಿಎಂ ಮಮತಾ ಆರೋಪಿಸಿದ್ದಾರೆ.

ಪಾಲನೆ.ಇನ್ ವಾಟ್ಸ್ ಆ್ಯಪ್ ಗುಂಪಿಗೆ ಸೇರಿರಿ ನ್ಯೂಸ್ & ವ್ಯೂಸ್ ಓದಿರಿ. ಆಲೋಚಿಸಿ. ಸ್ಪಂದಿಸಿ.
https://chat.whatsapp.com/H1gUYgrzvnQGZAhIQSGMHn

Related posts

ಭಾರತ-ಅಮೇರಿಕ ಸಭೆಯ ಮುಂದೂಡಿಕೆ

ಜನವರಿ 25 ರಂದು 16ನೇ ರಾಷ್ಟ್ರೀಯ ಮತದಾರರ ದಿನ‌

ನೂತನ ಸರ್ಕಾರ ರಚನೆಗೆ ಹಕ್ಕು ಮಂಡಿಸಿದ ವಿಜಯ್‌

Leave a Comment