ಶ್ರೀಪುರುಷ ಎಂಬ ಹೆಸರಿನಲ್ಲಿ “ಕನ್ನಡ ಭವನ” ನಾಮಾಂಕಿತ
- ಎನ್ ಚಲುವರಾಯಸ್ವಾಮಿ
ಪಾಲನೆ ನ್ಯೂಸ್

ಮಂಡ್ಯ: 800 ವರ್ಷಗಳ ಹಿಂದೆ ಗಂಗಾ ಸಾಮ್ರಾಜ್ಯವನ್ನು ಕಟ್ಟಿ ಸಾಹಿತ್ಯ ಲೋಕಕ್ಕೆ ಕಾಣಿಕೆಯನ್ನು ನೀಡಿದ ಗಂಗ ಸಾಮ್ರಾಟ ಶ್ರೀಪುರುಷ ಹೆಸರಿನಲ್ಲಿ ಕನ್ನಡ ಭವನ ಕಟ್ಟಬೇಕು. ಶ್ರೀಪುರುಷ ಕನ್ನಡ ಭವನವನ್ನು 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸವಿ ನೆನಪಿಗಾಗಿ ಎನ್ನುವುದನ್ನು ಬರೆದು, ಅದರ ಜೊತೆಗೆ ಶ್ರೀಪುರುಷ ಕನ್ನಡ ಭವನ ಎಂಬ ನಾಮಾಂಕಿತವನ್ನು ಮಾಡಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ಎನ್. ಚೆಲುವರಾಯಸ್ವಾಮಿ ಅವರು ತಿಳಿಸಿದರು.
ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಗರಸಭೆ,ಹಾಗೂ ಕನ್ನಡ ಸಾಹಿತ್ಯ ಪರಿಷತ್ ಇವರ ಸಹಯೋಗದಲ್ಲಿ 87 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಸವಿನೆನಪಿಗಾಗಿ ” ಕನ್ನಡ ಭವನ ” ಕಟ್ಟಡ ನಿರ್ಮಾಣದ ಶಂಕು ಸ್ಥಾಪನೆಯ ಕಾರ್ಯಕ್ರಮ ವನ್ನು ಉದ್ಘಾಟಿಸಿ ಮಾತನಾಡಿದರು.
87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಜಿಲ್ಲೆಯಲ್ಲಿ ಪಕ್ಷಾತೀತವಾಗಿ ಸಾರ್ವಜನಿಕರು, ಸಾಹಿತಿಗಳು, ಸಾಹಿತ್ಯ ಅಭಿಮಾನಿಗಳು ಮತ್ತು ಅನೇಕ ಸಂಘಟನೆಗಳು ನೀಡಿದ ಸಹಕಾರದಿಂದ ಯಶಸ್ವಿಯಾಗಿ ಮಾಡಲಾಯಿತು. ಅದರ ಸವಿ ನೆನಪಿಗಾಗಿ “ಕನ್ನಡ ಭವನ” ಕಟ್ಟಡದ ನಿರ್ಮಾಣದ ಶಂಕು ಸ್ಥಾಪನೆಯನ್ನು ನೆರವೇರಿಸಲಾಗಿದೆ ಎಂದು ಅವರು ತಿಳಿಸಿದರು.
87 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ವನ್ನು ಬಹುಶಃ ಇತಿಹಾಸದಲ್ಲಿ ಮೊದಲಬಾರಿಗೆ ಜಿಲ್ಲೆ ಯಲ್ಲಿ ಸಾಹಿತ್ಯ ಸಮ್ಮೇಳನವನ್ನು ದೊಡ್ಡ ಮಟ್ಟದಲ್ಲಿ ಇಡೀ ರಾಜ್ಯ, ರಾಷ್ಟ್ರ, ಪ್ರಪಂಚದ ಅನೇಕ ಕನ್ನಡಿಗರು ಮೆಚ್ಚುಗೆಯನ್ನ ವ್ಯಕ್ತಪಡಿಸುವ ರೀತಿಯಲ್ಲಿ ನಮ್ಮ ಜಿಲ್ಲೆಯಲ್ಲಿ ಕನ್ನಡ ಸಮ್ಮೇಳನ ಆಗಿದೆ ಎಂದರು.
ಕನ್ನಡ ಸಾಹಿತ್ಯ ಸಮ್ಮೇಳನ ದೊಡ್ಡ ಮಟ್ಟಕ್ಕೆ ಯಶಸ್ವಿಯಗಲು ಮತ್ತು ಜಿಲ್ಲೆಯ ಕೀರ್ತಿ,ಗೌರವ ಬರಲು ಜಿಲ್ಲಾಡಳಿತದ ಪಾತ್ರ ಬಹಳ ಅಪಾರವಾದದ್ದು ಹಾಗೂ
ಡಾ. ನಿರ್ಮಲಾನಂದನಾಥ ಸ್ವಾಮೀಜಿಯವರು ಪ್ರತಿಕ್ಷಣದಲ್ಲೂ ಜಿಲ್ಲಾಡಳಿತ ಜೊತೆ ನಿಂತು ಯಶಸ್ಸನ್ನು ಪಡೆಯುವಂತೆ ಅಪಾರವಾದ ಕೊಡುಗೆ ಯನ್ನು ನೀಡಿದ್ದಾರೆ. ಕನ್ನಡ ಭವನ ಕಟ್ಟಲು ಸಹ ಅವರು ಮಾರ್ಗದರ್ಶನವನ್ನು ನೀಡಿದ್ದಾರೆ ಎಂದು ಹೇಳಿದರು.

ಶಾಶ್ವತವಾಗಿ 87 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸವಿ ನೆನೆಪು ಇರಬೇಕು ಎಂದೂ ಕನ್ನಡ ಭವನ ಕಟ್ಟಡ ನಿರ್ಮಾಣವನ್ನು ಮಾಡಲಾಗಿದೆ.
ನಮ್ಮ ಮುಖ್ಯಮಂತ್ರಿಗಳು ಜಿಲ್ಲೆಯ ಸಾಂಸ್ಕೃತಿಕವಾಗಿ ಮತ್ತು ದೇವಸ್ಥಾನ ಅಭಿವೃದ್ಧಿಗೆ 50 ಕೋಟಿ ವಿಶೇಷ ಅನುದಾನವನ್ನು ನೀಡಿದ್ದಾರೆ.
ಮಂಡ್ಯ ಜಿಲ್ಲಾ ಶಾಸಕರಾದ ಪಿ ರವಿಕುಮಾರ್, ಮೇಲುಕೋಟೆ ಶಾಸಕರಾದ ದರ್ಶನ್ ಪುಟ್ಟಣ್ಣಯ್ಯ, ಶ್ರೀರಂಗಪಟ್ಟಣ ಶಾಸಕರಾದ ಎ. ಬಿ. ರಮೇಶ್ ಬಂಡಿಸಿದ್ದೇಗೌಡ ರವರು ತಲಾ 1 ಕೋಟಿ ಯನ್ನು ಕನ್ನಡ ಭವನಕ್ಕೆ ಮೂರು ಕೋಟಿ ಅನುದಾನವನ್ನು ನೀಡಿದ್ದಾರೆ ಎಂದರು.
ಮಂಡ್ಯ ಅಭಿವೃದ್ಧಿಗೆ ನಮ್ಮ ಶಕ್ತಿ ಇರುವವರೆಗೂ ಜಿಲ್ಲೆಯ ಅಭಿವೃದ್ಧಿ, ಜಿಲ್ಲೆಯ ಸೇವೆಯನ್ನ ನಿಮ್ಮೆಲ್ಲರ ಸೇವೆಯನ್ನು ಮಾಡುತ್ತೇನೆ ಎಂದು ಹೇಳಿದರು.
ವಾಲಿಬಾಲ್ ಕ್ರೀಡಾಂಗಣಕ್ಕೆ ಸೀಮಿತವಾದ ಜಾಗವನ್ನ ಆಯ್ಕೆ ಮಾಡಲಾಗಿದೆ. ವಾಲಿಬಾಲ್ ಕ್ರೀಡಾಂಗಣಕ್ಕೆ ಯಾವುದೇ ತೊಂದರೆಯಾಗದಂತೆ 70 ಲಕ್ಷ ಅನುದಾನವನ್ನು ನೀಡಿ ಟೆಂಡರ್ ಅನ್ನು ಕರೆಯಲಾಗಿದೆ.
ಪೂರ್ಣಯಾಗಿ ಸ್ಪೋರ್ಟ್ಸ್ ಕಾಂಪ್ಲೆಕ್ಸ್ ಆಗಬೇಕು ಎಂದರು.
ಜಿಲ್ಲೆಯಲ್ಲಿ ಸಾಹಿತ್ಯದ ಕೊಡುಗೆ ತುಂಬಾ ಅಪಾರವಾದದ್ದು ಜಿಲ್ಲೆಯ ನೆಲ,ನೀರು, ರಾಜಕೀಯ ಕ್ಷೇತ್ರ, ಸಾಹಿತ್ಯ ಕ್ಷೇತ್ರ, ರೈತರು ಕ್ಷೇತ್ರದಲ್ಲಿ ಮಹತ್ವವಾದ ಹಿನ್ನಲೆ ಇದೆ ಎಂದು ಹೇಳಿದರು.
ಕನ್ನಡ ಭವನದ ಶಂಕು ಸ್ಥಾಪನೆಯನ್ನ ಬಹಳ ಸಂತೋಷದಿಂದ ಸ್ವಾಮೀಜಿಯವರ ನೇತೃತ್ವದಲ್ಲಿ ಶ್ರಿ ಬಾಲಗಂಗಾಧರನಾಥ ಸ್ವಾಮೀಜಿಯವರು ಈ ನಾಡಿಗೆ ಕೊಟ್ಟಂತಹ ಕೊಡುಗೆ, ನಿರ್ಮಾಣ ಹಾಗೂ ಮಾರ್ಗದರ್ಶನ, ಅವರ ಶ್ರಮ ಮತ್ತು ಅನೇಕ ವಿಚಾರಗಳನ್ನು ಕಾಣಬೇಕು ಎಂದರು.
ಜಿಲ್ಲಾ ಶಾಸಕರಾದ ಪಿ ರವಿಕುಮಾರ್ ಮಾತನಾಡಿ ಜಿಲ್ಲೆಯನ್ನು ಪ್ರಗತಿಪರದತ್ತ ಕೊಂಡೊಯ್ಯಬೇಕು. 87ನೇ ಸಾಹಿತ್ಯ ಸಮ್ಮೇಳನ ಕಳೆದ ವರ್ಷ ಡಿಸೆಂಬರ್ ನಲ್ಲಿ ಬಹಳ ಅದ್ದೂರಿಯಾಗಿ 10 ಲಕ್ಷ ಜನಗಳ ಸಮ್ಮುಖದಲ್ಲಿ ಬಹಳ ವೈಭವಯುತವಾಗಿ ಮಂಡ್ಯಕ್ಕೆ ಹೆಸರು ತಂದು ಕೊಡುವಂತಹ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಮಾಡಲಾಗಿದೆ. ಎಂದರು
ಜಿಲ್ಲೆಯಲ್ಲಿ 87ನೇ ಸಾಹಿತ್ಯ ಸಮ್ಮೇಳನ ನಡೆದಿತ್ತು ಅನ್ನೋದು ಚಿತ್ರದಲ್ಲಿ ಮಾತ್ರ ಇರಬಾರದು. ಆಗಾಗಿ ಶಾಶ್ವತ ನೆಲೆಯನ್ನು ಕಲ್ಪಿಸಬೇಕು. ಆದ್ದರಿಂದ ಜಿಲ್ಲೆಯಲ್ಲಿ ಐದುವರೆ ಕೋಟಿ ವೆಚ್ಚದಲ್ಲಿ ಬೃಹತ್ ಕನ್ನಡ ಭವನವನ್ನ ಕಟ್ಟಬೇಕು ವರ್ಷದ ಒಳಗಡೆ ಅದರ ಉದ್ಘಾಟನೆಯನ್ನು ಕೂಡ ಮಾಡುತ್ತೇವೆ ಎಂದು ಹೇಳಿದರು
ವಾಲಿಬಾಲ್ ಕ್ರೀಡಾಂಗಣಕ್ಕೆ 70 ಲಕ್ಷ ಹಣವನ್ನು ಬಿಡುಗಡೆ ಮಾಡಲಾಗಿದೆ ಕೆಲವೇ ಎರಡು ಮೂರು ತಿಂಗಳಲ್ಲಿ ಉತ್ತಮವಾದ ವಾಲಿಬಾಲ್ ಕೋರ್ಟ್ ಅನ್ನು ನಿರ್ಮಾಣ ಮಾಡಿ ಕ್ರೀಡಾ ಅಭಿಮಾನಿಗಳಿಗೆ ಅರ್ಪಣೆಯನ್ನು ಮಾಡುತ್ತೇವೆ. ಜೊತೆಗೆ ಬ್ಯಾಸ್ಕೆಟ್‌ಬಾಲ್ ಸ್ಟೇಡಿಯಂ ಅನ್ನು ಮೂರೂವರೆ ಕೋಟಿಯಲ್ಲಿ ಅತ್ಯುತ್ತಮವಾದ ಇಂಟರ್ನ್ಯಾಷನಲ್ ಸ್ಟೇಡಿಯಂ ಆಗಿ ನಿರ್ಮಾಣ ಮಾಡುತ್ತೇವೆ. ಮುಂದಿನ 15 ದಿನದಲ್ಲಿ ಭೂಮಿ ಪೂಜೆಯನ್ನ ಮಾಡಲಾಗುತ್ತದೆ ಎಂದು ಹೇಳಿದರು.
ವಿಶ್ವವಿದ್ಯಾನಿಲಯದ ಒಳಗಡೆ ಎರಡು ವರ್ಷದಿಂದ ಅರ್ಧಕ್ಕೆ ನಿಂತು ಹೋಗಿದ್ದ ಕ್ರೀಡಾಂಗಣಕ್ಕೆ 2 ಕೋಟಿ ರೂಪಾಯನ್ನ ಬಿಡುಗಡೆ ಮಾಡಲಾಗಿದೆ ಅದನ್ನು ಕೂಡ ಆರು ತಿಂಗಳಲ್ಲಿ ಸಂಪೂರ್ಣಗೊಳಿಸಿ ನಿಮ್ಮೆಲ್ಲರಿಗೂ ಉದ್ಘಾಟನೆಗೆ ಅರ್ಪಣೆಯನ್ನು ಮಾಡುತ್ತೇವೆ ಎಂದು ಹೇಳಿದರು.

ಹಲವಾರು ಅಭಿವೃದ್ಧಿ ಕಾರ್ಯಗಳು ಕೂಡ ಶರವೇಗದಲ್ಲಿ ಇನ್ನು ಎರಡುವರೆ ವರ್ಷದಲ್ಲಿ ನಡೆದು ಮಂಡ್ಯ ನಗರದ ಚಿತ್ರಣವನ್ನ ಬದಲಾಯಿಸುವುದಕ್ಕೆ 100 ಕೋಟಿಯನ್ನು ವಿನಿಯೋಗಿಸಿ ಮುಂದಿನ ಮೂರು ತಿಂಗಳೊಳಗಡೆ ಹೆಮ್ಮೆಯಿಂದ ಮಂಡ್ಯ ನಗರ ಬೇರೆ ನಗರಕ್ಕೆ ಮಾದರಿ ಆಗುವಂತಹ ಕೆಲಸವನ್ನ ಮಾಡುತ್ತೇವೆ ಎಂದು ಹೇಳಿದರು.
ಮೇಲುಕೋಟೆ ಶಾಸಕರಾದ ದರ್ಶನ್ ಪುಟ್ಟಣ್ಣಯ್ಯ ರವರು ಮಾತನಾಡಿ 87 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸವಿನೆನಪಿಗಾಗಿ ಕನ್ನಡ ಭವನ ಕಟ್ಟಡ ನಿರ್ಮಾಣವು ಸುಲಲಿತವಾಗಿ ಆಗಲಿ ಎಂದು ಹೇಳಿದರು.
ಜಿಲ್ಲಾಧಿಕಾರಿಗಳಾದ ಡಾ. ಕುಮಾರ ರವರು ಮಾತನಾಡಿ
ರೂ.5.50 ಕೋಟಿ ವೆಚ್ಚದಲ್ಲಿಮಂಡ್ಯ ನಗರದ ಸರ್ ಎಂ. ವಿಶ್ವೇಶ್ವರಯ್ಯ ಒಳಾಂಗಣ ಕ್ರೀಡಾಂಗಣದ ಆವರಣದಲ್ಲಿ ಕನ್ನಡ ಭವನ ನಿರ್ಮಾಣದ ಶಂಕಸ್ಥಾಪನೆ ಮಾಡಲಾಗಿದೆ
ಕನ್ನಡದ ಐಕ್ಯತೆಯ ಧ್ಯೋತಕವಾಗಿ ನಮ್ಮ ಸಾಹಿತ್ಯ, ಸಂಸ್ಕೃತಿ, ಪರಂಪರೆಯನ್ನು ಬಿಂಬಿಸುವ ಹಾಗೂ ನಾಡು-ನುಡಿಯ ಬಗೆಗಿನ ಅಭಿಮಾನವನ್ನು ಜನ ಮನದಲ್ಲಿ ಮೂಡಿಸುವ ನಿಟ್ಟಿನಲ್ಲಿ ಸರ್ವೆ ನಂ 2 ರಲ್ಲಿ 0.13ಗುಂಟೆ ಸರ್ಕಾರಿ ಜಮೀನನ್ನು ಕನ್ನಡ ಭವನ ನಿರ್ಮಿಸುವ ಉದ್ದೇಶಕ್ಕಾಗಿ ಜಾಗವನ್ನು ಗುರುತಿಸಲಾಗಿದೆ ಎಂದು ಹೇಳಿದರು.
ಆದಿಚುಂಚನಗಿರಿ ಮಹಾ ಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಪರಮಪೂಜ್ಯ ಜಗದ್ಗುರು ಶ್ರೀ ಡಾ. ನಿರ್ಮಲಾನಂದ ಮಹಾಸ್ವಾಮೀಜಿ ರವರು ಮಾತನಾಡಿ
ವ್ಯಕ್ತಿಗೆ ಐದು ಪಂಚಕೋಶಗಳು ಮುಖ್ಯ, ಸುಮಾರು ಮೂರನೇ ಶತಮಾನದಲ್ಲಿ ಅಂದಿಗೆ ಅವಶ್ಯಕತೆ ಇದ್ದಂತಹ ಗಂಗಾ ಸಾಮ್ರಾಜ್ಯವನ್ನು ಕಟ್ಟಿ ಅದೇ ಒಂದು ಪರಂಪರೆಯಲ್ಲಿ ಬಂದಂತಹ ಒಬ್ಬ ಶ್ರೀ ಪುರುಷ ಸಾಹಿತ್ಯಕ್ಕೆ, ಚರಿತ್ರೆಗೆ, ನಾಡಿನ ಸಮೃದ್ಧಿಗೆ ಬಹು ದೊಡ್ಡ ಕಾಣಿಕೆ ಕೊಟ್ಟವರು. ಅವರ ಹೆಸರಿನಲ್ಲಿ ಕನ್ನಡ ಭವನ ಆಗಬೇಕು. ಮಕ್ಕಳಿಗೆ ಇತಿಹಾಸ ಪ್ರಜ್ಞೆಯನ್ನು ಕೂಡ ಮೂಡಿತ್ತದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಮಂಡ್ಯ ವಿಧಾನಸಭಾ ಕ್ಷೇತ್ರದ ಶಾಸಕರಾದ ರವಿಕುಮಾರ್, ಮೇಲುಕೋಟೆ ವಿಧಾನಸಭಾ ಕ್ಷೇತ್ರದ ಶಾಸಕರಾದ ದರ್ಶನ್ ಪುಟ್ಟಣ್ಣಯ್ಯ, ಜಿಲ್ಲಾಧಿಕಾರಿಗಳಾದ ಡಾ ಕುಮಾರ, ಜಿಪಂ ಸಿಇಒ ಕೆ. ಆರ್. ನಂದಿನಿ, ಪೊಲೀಸ್ ವರಿಷ್ಠಾಧಿಕಾರಿ ಡಾ ವಿ.ಜೆ.ಶೋಭಾರಾಣಿ, ಅಪಾರ ಜಿಲ್ಲಾಧಿಕಾರಿ ಶಿವನಂದಮೂರ್ತಿ, ಕರ್ನಾಟಕ ರಾಜ್ಯ ಸಣ್ಣ ಕೈಗಾರಿಗಳ ಅಭಿವೃದ್ಧಿ ನಿಗಮದ ಮಾನ್ಯ ಉಪಾಧ್ಯಕ್ಷರು ಲಕ್ಷ್ಮಿ ರಘುನಂದನ್, ಮೈಸೂರು ಸಕ್ಕರೆ ಕಂಪನಿ ನಿಯಮಿತ ಅಧ್ಯಕ್ಷರು ಎಂ.ಎಸ್ ಗಂಗಾಧರ್, ಮಂಡ್ಯ ನಗರ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷರು ಬಿ. ಪಿ ಪ್ರಕಾಶ್, ಕಾರ್ಯಪಾಲಕ ಅಭಿಯಂತರರು ಪುರುಷೋತ್ತಮ್ ಕೆ.ಎಂ , ನಗರಸಭೆ ಪೌರಾಯುಕ್ತರು ಪಂಪಶ್ರೀ.ಗಣ್ಯರು ಉಪಸ್ಥಿತರಿದ್ದರು.
✅ಪಾಲನೆ.ಇನ್ ವಾಟ್ಸ್ ಆ್ಯಪ್ ಗುಂಪಿಗೆ ಸೇರಿರಿ ನ್ಯೂಸ್ & ವ್ಯೂಸ್ ಓದಿರಿ. ಆಲೋಚಿಸಿ. ಸ್ಪಂದಿಸಿ.
https://chat.whatsapp.com/H1gUYgrzvnQGZAhIQSGMHn
