NEWS

ಪುಸ್ತಕದ ಮನೆ ಅಂಕೇಗೌಡರಿಗೆ ಪದ್ಮಶ್ರೀ ಪ್ರಶಸ್ತಿ

2026 ನೇ ಸಾಲಿನ ಪದ್ಮ ಪ್ರಶಸ್ತಿ ಗೌರವ ಪಟ್ಟಿ ಪ್ರಕಟ

ಪಾಲನೆ ನ್ಯೂಸ್

ಮಂಡ್ಯ: ದೇಶದ ಅತ್ಯುನ್ನತ ನಾಗರೀಕ ಗೌರವವಾದ ಪದ್ಮಶ್ರೀ ಪ್ರಶಸ್ತಿಗೆ ಮೂವರು ಕನ್ನಡಿಗರು ಆಯ್ಕೆಯಾಗಿದ್ದು  ಪುಸ್ತಕಗಳೇ ತಮ್ಮ ಪ್ರಪಂಚ ಎಂದುಕೊಂಡು ಲಕ್ಷಾಂತರ ಪುಸ್ತಕ ಸಂಗ್ರಹಿಸಿದ ಜಿಲ್ಲೆಯ ಪಾಂಡವಪುರದ ಅಂಕೇಗೌಡ ಅವರಿಗೆ ಪದ್ಮಶ್ರೀ ಪ್ರಶಸ್ತಿ ಲಭಿಸಿದೆ.


ದೇಶದಾದ್ಯಂತ ಒಟ್ಟು 45 ಮಂದಿಗೆ ಪ್ರಶಸ್ತಿ ನೀಡಿದ್ದು, ಆ ಪೈಕಿ ಅಂಕೇಗೌಡ ಅವರಿಗೆ ಸಾಹಿತ್ಯ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಪ್ರಶಸ್ತಿಯನ್ನು ನೀಡಲಾಗಿದೆ.

ಅಂಕೇಗೌಡರ ಪರಿಚಯ

ಪಾಂಡವಪುರ ತಾಲ್ಲೂಕಿನ ಹರಳಹಳ್ಳಿಯಲ್ಲಿರುವ ಪುಸ್ತಕದ ಮನೆಯನ್ನು ಸಾರ್ವಜನಿಕರಿಗಾಗಿ ತೆರೆದಿಟ್ಟಿರುವ ಎಂ. ಅಂಕೇ ಗೌಡರು, ಸುಮಾರು ನಾಲ್ಕು ಲಕ್ಷ ಪುಸ್ತಕಗಳು, ನಾಣ್ಯ, ಅಂಚೆ ಚೀಟಿ ಮತ್ತು ಲಗ್ನಪತ್ರಿಕೆಗಳ ಅಪರೂಪದ ಸಂಗ್ರಹವನ್ನು ಹೊಂದಿದ್ದಾರೆ. ತಮ್ಮ ಸಂಬಳದ ಬಹುಪಾಲು ಪುಸ್ತಕಗಳಿಗೇ ಮೀಸಲಿಟ್ಟು, ಪುಸ್ತಕ ಸಂಗ್ರಹಕ್ಕಾಗಿ ನಿವೇಶನವನ್ನೂ ಮಾರಿದ ಅಂಕೇಗೌಡರು, ಗ್ರಾಮೀಣ ಪ್ರದೇಶದ ಪುಸ್ತಕ ಪ್ರಿಯರಿಗೆ ಸ್ಫೂರ್ತಿಯಾಗಿದ್ದಾರೆ. ಉದ್ಯಮಿ ಹರಿಕೋಡೆ ಅವರು ನಿರ್ಮಿಸಿಕೊಟ್ಟಿರುವ ಈ ಪುಸ್ತಕದ ಮನೆ, ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್‌ನಲ್ಲೂ ಸ್ಥಾನ ಪಡೆದಿದೆ.

ಎಂ. ಅಂಕೇಗೌಡರು ಪಾಂಡವಪುರ ತಾಲ್ಲೂಕಿನ ಚಿನಕುರಳಿಯಲ್ಲಿ ಜನಿಸಿದರು. ಸಂಜೆ ಕಾಲೇಜಿನಲ್ಲಿ ಓದಿ ಬಿ.ಎ. ಪದವಿ ಪಡೆದರು. ಬಳಿಕ, ಅಂಚೆ ಮತ್ತು ತೆರಪಿನ ಮೂಲಕ ಕನ್ನಡದಲ್ಲಿ ಎಂ.ಎ. ಪದವಿಯನ್ನೂ ಗಳಿಸಿದ್ದಾರೆ.

ಜಿಲ್ಲಾಧಿಕಾರಿ ಅಭಿನಂದನೆ

ಭಾರತದ ನಾಲ್ಕನೇ ಸರ್ವ ಶ್ರೇಷ್ಠ ಪ್ರಶಸ್ತಿಯಾದ ಪದ್ಮಶ್ರೀ ಪ್ರಶಸ್ತಿ ಪಡೆದಿರುವ ಅಂಕೇಗೌಡ ಅವರನ್ನು ಜಿಲ್ಲಾಧಿಕಾರಿ ಡಾ.ಕುಮಾರ ಅವರು ಅಭಿನಂದಿಸಿದ್ದಾರೆ.

Related posts

ಜನರ ಪರಿಹಾರದ ಹಣ ಲಪಟಾಯಿಸುವ ಅಧಿಕಾರಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಿ

ಫೆ. 16 ಮತ್ತು 17ರಂದು ಗಾಂಧಿ ಗ್ರಾಮ ಭಾರತ ಮರಳಿಹಳ್ಳಿಗೆ ಗಾಂಧೀಜಿ ಮತ್ತು ಗ್ರಾಮಸ್ವರಾಜ್ ಕುರಿತು ಚಿಂತನ -ಮಂಥನ ಕಾರ್ಯಕ್ರಮ

ರಾಜ್ಯದಲ್ಲಿ 4.79 ಲಕ್ಷ ಮಕ್ಕಳು ಕುಬ್ಬರು! ಶೇ.14ರಷ್ಟು ಬೆಳವಣಿಗೆ ಕುಂಠಿತ | ಒಟ್ಟು 32.17 ಲಕ್ಷ ಚಿಣ್ಣರ ತಪಾಸಣೆ |

Leave a Comment