NEWS

ಸಾರ್ವಜನಿಕರ, ಆಟೋರಿಕ್ಷಾ ಚಾಲಕರ ಮತ್ತು ಮಾಲೀಕರ ಹಿತದೃಷ್ಟಿಯಿಂದ ಆಟೋದರ ಪರಿಷ್ಕರಣೆ: ಡಾ. ಕುಮಾರ

ಪಾಲನೆ ನ್ಯೂಸ್

ಮಂಡ್ಯ: ಕಳೆದ ಏಳು ವರ್ಷಗಳಿಂದ ಆಟೋರಿಕ್ಷಾ ಬಾಡಿಗೆ ದರ ಪರಿಷ್ಕರಣೆಯಾಗದ ಹಿನ್ನಲೆಯಲ್ಲಿ ಹಾಗೂ ಎಲ್.ಪಿ.ಜಿ./ಪೆಟ್ರೋಲ್/ಡೀಸಲ್ ದರಗಳಲ್ಲಿ ಮತ್ತು ವಾಹನಗಳ ನಿರ್ವಹಣೆ ಮತ್ತು ಇತರೆ ವೆಚ್ಚಗಳಲ್ಲಿ ಗಣನೀಯ ಪ್ರಮಾಣದ ಏರಿಕೆಯಾಗಿರುವುದನ್ನು ಪರಿಗಣಿಸಿ ಸಾರ್ವಜನಿಕರ ಮತ್ತು ಆಟೋರಿಕ್ಷಾ ಚಾಲಕರ ಮತ್ತು ಮಾಲೀಕರ ಹಿತದೃಷ್ಟಿಯಿಂದ ಆಟೋ ದರ ಪರಿಷ್ಕರಣೆ ಮಾಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಡಾ.ಕುಮಾರ ಅವರು ಹೇಳಿದರು.

ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ಆಟೋ ವಾಹನಗಳ ದರವನ್ನು ನಿಗದಿ ಪಡಿಸುವ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಆಟೋ ಪ್ರಯಾಣದ ಕನಿಷ್ಠ ಮೊದಲ 1.9 ಕಿ.ಮೀ.ಗೆ 2017 ರಲ್ಲಿ ರೂ 25 ಅನ್ನು ನಿಗದಿಪಡಿಸಲಾಗಿತ್ತು ಪ್ರಸ್ತುತ ಪ್ರಾದೇಶಿಕ ಸಾರಿಗೆ ಪ್ರಾಧಿಕಾರ ರೂ. 5 ಅನ್ನು ಹೆಚ್ಚಿಸಿದೆ ಆಟೋ ಪ್ರಯಾಣದ ಕನಿಷ್ಠ ಮೊದಲ 1.9 ಕಿ.ಮೀ.ಗೆ ರೂ 30 ಅನ್ನು ಪಾವತಿಸಬೇಕಾಗಿದೆ ಎಂದು ಹೇಳಿದರು.

1.9 ಕಿ.ಮೀ ನಂತರದ ಪ್ರತಿ ಕಿ.ಮೀಗೆ ಕಾಯುವ ದರ ಮೊದಲ ರೂ. 13 ಇತ್ತು ಈಗ ಎರಡು ರೂಪಾಯಿಯನ್ನು ಹೆಚ್ಚಿಸಲಾಗಿದೆ 5 ನಿಮಿಷ 1.9 ಕಿ.ಮೀ ನಂತರದ ಪ್ರತಿ ಕಿ.ಮೀ ಗೆ ರೂ. 15 ಅನ್ನು ಪಾವತಿಸಬೇಕು. ಮೊದಲು 5 ನಿಮಿಷಗಳ ಕಾಯುವ ದರವನ್ನು ಮೊದಲಿನಂತೆ ಉಚಿತ ಮಾಡಲಾಗಿದೆ ಎಂದು ಹೇಳಿದರು.

ಕಾಯುವಿಕೆಯ ನಂತರದ ಪ್ರತಿ 15 ನಿಮಿಷ ಅಥವಾ ಅದರ ಅರ್ಥ ಭಾಗಕ್ಕೆ ಮುಂಚಿನಂತೆಯೆ ರೂ. 5 ಅನ್ನು ನಿಗದಿಪಡಿಸಲಾಗಿದೆ. ಲಗ್ಗೇಜು ದರವನ್ನು ಮೊದಲ 20 ಕೆ.ಜಿ ವರೆಗೆ ಉಚಿತವಾಗಿ ನೀಡಲಾಗುತ್ತದೆ.  20 ಕೆ.ಜಿ ಅಥವಾ ಹೆಚ್ಚಿನ ತೂಕದ ಲಗ್ಗೇಜಿಗೆ ಮೊದಲಿಗಿಂತ ರೂ. 3 ಅನ್ನು ಹೆಚ್ಚಿಸಲಾಗಿದ್ದು 20 ಕೆ.ಜಿ ಗಿಂತ ಅಧಿಕ ತೂಕದ ಲಗ್ಗೇಜಿಗೆ ರೂ. 5 ಪಾವತಿಸಬೇಕಾಗಿರುತ್ತದೆ. ಲಗ್ಗೇಜು ತೂಕದ ಗರಿಷ್ಠ ತೂಕವನ್ನು ಮೊದಲಿನಂತೆಯೇ 50 ಕೆ.ಜಿ ಗೆ ಮಿತಿ ಗೊಳಿಸಲಾಗಿದೆ ಎಂದು ಹೇಳಿದರು.

ರಾತ್ರಿ ವೇಳೆ ಆಟೋ ಪ್ರಯಾಣ ದರವನ್ನು ರಾತ್ರಿ 10 ರಿಂದ ಬೆಳಿಗ್ಗೆ 5 ಗಂಟೆಗಳವರೆಗೆ ಮೊದಲಿನಂತೆ ಸಾಮಾನ್ಯ ದರ ಅರ್ಧದಷ್ಟು ಹೆಚ್ಚು ಪಾವತಿಸಬೇಕು. ಆಟೋ ಚಾಲಕರು ಪ್ರಾದೇಶಿಕ ಸಾರಿಗೆ ಪ್ರಾಧಿಕಾರ ಸೂಚಿಸಿರುವ ದರಕ್ಕಿಂತ ಹೆಚ್ಚಿನ ಹಣವನ್ನು ಪ್ರಾಮಾಣಿಕರ ಬಳಿ ಕೇಳುವಂತಿಲ್ಲ ಎಂದು ಹೇಳಿದರು.

ಸಭೆಯಲ್ಲಿ ಜಿಲ್ಲಾ ಪೊಲೀಸ್ ಅಧೀಕ್ಷಕಿ ಶೋಭಾರಾಣಿ ವಿ. ಜೆ, ಪ್ರಾದೇಶಿಕ ಸಾರಿಗೆ ಅಧಿಕಾರಿ ಹೇಮಾವತಿ ಸೇರಿದಂತೆ ಅಧಿಕಾರಿಗಳು ಮತ್ತು ಆಟೋ ಚಾಲಕರ ಸಂಘ ಅಧ್ಯಕ್ಷರು ಮತ್ತು ಸದಸ್ಯರುಗಳು ಉಪಸ್ಥಿತರಿದ್ದರು.

ಪಾಲನೆ.ಇನ್‌ ವಾಟ್ಸ್‌ ಆಪ್‌ ಗುಂಪಿಗೆ ಸೇರಿರಿ.

Related posts

ಪ್ರೊ ಲೀಗ್ ಹಾಕಿ ಕೊನೆಗೂ ಗೆದ್ದ ಭಾರತ ಗೆಲುವಿನ ಖಾತೆ ತೆರೆದಿದೆ

ಗ್ರಾಪಂನ 590 ಜನಕ್ಕೆ ಉದ್ಯೋಗ ಭದ್ರತೆ

ಕೇರಳದ ಶ್ರೀನಂದಾ ಶವವಾಗಿ ಪತ್ತೆ

Leave a Comment